fbpx
ಸಮಾಚಾರ

ಔಟ್ ಇಲ್ಲದಿದ್ದರೂ, ಅಂಪೈರ್ ನಿರ್ಣಯಕ್ಕೂ ಕಾಯದೇ ಕ್ರೀಸ್ ತೊರೆದು ತಪ್ಪು ಮಾಡಿದರಾ ಕೊಹ್ಲಿ? ವಿಡಿಯೋ ವೈರಲ್.

ಭಾರತ ಮತ್ತು ಪಾಕಿಸ್ತಾನ ನಡುವೆ ಹೈ ವೋಲ್ಟೇಜ್​ ವಿಶ್ವಕಪ್​ ಪಂದ್ಯಾವಳಿ ನಡೆಯುತ್ತಿದ್ದು ಈಗಾಗಲೇ ಭಾರತದ ಬ್ಯಾಟಿಂಗ್​ ಮುಗಿದು ಪಾಕ್​ಗೆ 337 ರನ್​ಗಳ ಗುರಿ ನೀಡಿದೆ. ಮಳೆ ಕೂಡ ಆಗಾಗ ಕಾಡುತ್ತಿದೆ. ಹೈ ವೋಲ್ಟೆಜ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸ್ಫೋಟಕ ಬ್ಯಾಟಿಂಗ್ ಮಾಡುತ್ತಿದ್ದಾಗ ಮೊಹಮ್ಮದ್ ಅಮೀರ್ ಬೌಲಿಂಗ್ ನಲ್ಲಿ ಔಟ್ ಆಗದಿದ್ದರೂ ಕ್ರಿಸ್ ತೊರೆದಿರುವುದು ಯಾಕೆ ಎಂಬ ಚರ್ಚೆ ಶುರುವಾಗಿದೆ.

47.4 ಓವರ್ ನಲ್ಲಿ ವಿರಾಟ್ ಕೊಹ್ಲಿ ಔಟ್ ಆಗದಿದ್ದರೂ ಕ್ರೀಸ್ ತೊರೆಯುವ ಮೂಲಕ ಅಭಿಮಾನಿಗಳ ಅಚ್ಚರಿಗೆ ಕಾರಣರಾದರು. 47.4 ಓವರ್ ನಲ್ಲಿ ಮೊಹಮ್ಮದ್ ಅಮೀರ್ ಬೌನ್ಸರ್ ಎಸೆತವನ್ನು ಕೊಹ್ಲಿ ಹೊಡೆಯಲು ಪ್ರಯತ್ನಿಸಿದರು. ಬೌಲ್ ಬ್ಯಾಟ್ ಗೆ ತಾಗದೇ ನೇರ ಕೀಪರ್ ಸರ್ಫರಾಜ್ ಕೈ ಸೇರಿತು. ಅಂಪೈರ್ ನಿರ್ಣಯಕ್ಕೂ ಮುನ್ನವೇ ಕೊಹ್ಲಿ ಕ್ರೀಸ್ ತೊರೆದರು. ಪಂದ್ಯದಲ್ಲಿ ಕ್ರೀಡಾ ಸ್ಪೂರ್ತಿ ಮೆರೆಯಲು ಹೋಗಿ ಕೊಹ್ಲಿ ತಪ್ಪು ಮಾಡಿದರು ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಏಕೆಂದರೆ ಚೆಂಡು ಬ್ಯಾಟ್‌ನ್ನು ಸವರಲಿಲ್ಲ. ಅಂಪೈರ್ ಕೂಡಾ ಔಟ್ ನೀಡಿರಲಿಲ್ಲ. ಬಳಿಕ ಸತ್ಯವನ್ನು ಡ್ರೆಸ್ಸಿಂಗ್ ಕೊಠಡಿಯಲ್ಲಿ ಅರಿತುಕೊಂಡ ವಿರಾಟ್, ಶಬ್ದ ಹೇಗೆ ಬಂತು ಎಂಬುದನ್ನು ತಮ್ಮ ಬ್ಯಾಟ್ ಪರಿಶೀಲಿಸತೊಡಗಿದರು. ಇದಕ್ಕೆ ಮಹೇಂದ್ರ ಸಿಂಗ್ ಧೋನಿ ಸಹ ಕೈಜೋಡಿಸಿದರು. ಅಷ್ಟಕ್ಕೂ ಅಂಪೈರ್ ಔಟ್ ನೀಡದ್ದರೂ ಕೊಹ್ಲಿ ಡಿಆರ್‌ಎಸ್ ಮನವಿಗೆ ಮೊರೆ ಹೋಗಬಹುದತ್ತು. ಆದರೆ ಕ್ರೀಡಾಸ್ಫೂರ್ತಿಯನ್ನು ಮೆರೆಯಲು ಹೋಗಿ ತಮ್ಮದೇ ತಪ್ಪಿನಿಂದ ವಿರಾಟ್ ಕಳೆದುಕೊಳ್ಳುವಂತಾಗಿದೆ. ಕಡೆ ಓವರ್ಗಳಲ್ಲಿ ತಂಡದ ಅಲ್ಲದೆ ರನ್​​ರೇಟ್​ನಲ್ಲೂ ಕುಸಿತ ಕಾಣಬೇಕಾಯಿತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top