fbpx
ಸಮಾಚಾರ

ಸುಮಲತಾ ವೇದಿಕೆಯತ್ತ ಬರುತ್ತಿದ್ದಂತೆ ‘ನಿಖಿಲ್ ಎಲ್ಲಿದ್ದೀಯಪ್ಪಾ’ ಕೂಗು- ಸುಮಲತಾ ರಿಯಾಕ್ಷನ್ ಹೇಗಿತ್ತು ಗೊತ್ತಾ?

ಮಂಡ್ಯ ಲೋಕಸಭಾ ಚುನಾವಣಾ ಕಾವು ಆರಂಭವಾದ ದಿನದಿಂದ ನಿಖಿಲ್​ ಎಲ್ಲದೀಯಪ್ಪಾ ಎಂಬ ಪದ ಸಾಕಷ್ಟು ಸದ್ದು ಮಾಡುತ್ತು. ದೇಶ-ವಿದೇಶಗಳಲ್ಲೂ ಇದರ ಹವಾ ಸೃಷ್ಟಿಯಾಗಿ ಸಾಕಷ್ಟು ಟ್ರೋಲ್​ ಕೂಡ ಆಗಿತ್ತು. ಆದರೆ, ಇದೇ ಪದ ದೇವೇಗೌಡರ ಕುಟುಂಬಕ್ಕೆ ಇರಿಸುಮುರಿಸನ್ನು ಉಂಟುಮಾಡಿತ್ತು. ಎಷ್ಟರ ಮಟ್ಟಿಗೆ ಎಂದರೆ ಸ್ವತಃ ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿ ಅವರೇ ಈ ಬಗ್ಗೆ ಮಾತನಾಡಿ ಟ್ರೋಲ್ ಮಾಡಿದವರ ವಿರುದ್ಧ ಅಸಮಾಧಾನ ಹೊರಹಾಕಿದ್ದರು.

ಧಾರವಾಡದಲ್ಲೂ ನಿಖಿಲ್ ಎಲ್ಲಿದೀಯಪ್ಪ:
ಸಂಸದೆ ಸುಮಲತಾ ಅಂಬರೀಶ್ ಅವರ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ‘ನಿಖಿಲ್ ಎಲ್ಲಿದ್ದೀಯಪ್ಪಾ’ ಎಂದು ಕೂಗಿದ್ದಾರೆ. ಹುಬ್ಬಳ್ಳಿಯ ಖಾಸಗಿ ಕಾಲೇಜ್‍ನಲ್ಲಿ ಅಮರ್ ಚಿತ್ರ ತಂಡದ ಸಂವಾದ ಕಾರ್ಯಕ್ರಮ ನಡೆಯುತ್ತಿದೆ. ಈ ಸಂವಾದ ಕಾರ್ಯಕ್ರಮಕ್ಕೆ ಸುಮಲತಾ ಅವರು ವೇದಿಕೆ ಮೇಲೆ ಆಗಮಿಸುತ್ತಾರೆ. ಈ ವೇಳೆ ಸುಮಲತಾ ಅವರು ವೇದಿಕೆಯ ಮೇಲೆ ಬರುತ್ತಿದ್ದಂತೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳೆಲ್ಲರೂ ‘ನಿಖಿಲ್ ಎಲ್ಲಿದ್ದೀಯಪ್ಪ, ‘ನಿಖಿಲ್ ಎಲ್ಲಿದ್ದೀಯಪ್ಪಾ’ ಎಂದು ಜೋರಾಗಿ ಘೋಷಣೆ ಕೂಗಿದ್ದಾರೆ. ಆಗ ಸುಮಲತಾ ಅವರು ವೇದಿಕೆಯ ಮೇಲೆಯೇ ನಕ್ಕಿದ್ದಾರೆ.

ವಿಧ್ಯಾರ್ಥಿಗಳು ‘ನಿಖಿಲ್ ಎಲ್ಲಿದಿಯಪ್ಪಾ’ ಎಂದು ಕೂಗುತ್ತಿದ್ದಂತೆ ಅಭಿಷೇಕ್ ಅವರು, ಯಾರಾದ್ರು ಎಲ್ಲಾದರೂ ಹೋಗಲಿ ನಾವು ಇಲ್ಲಿದ್ದೀವಿ. ಅದನ್ನ ಬಿಟ್ಟು ಬಿಡಿ ಎಂದು ಹೇಳಿದ್ದಾರೆ.

ಮೂರು ವರ್ಷಗಳ ಹಿಂದೆ ನಿಖಿಲ್ ನಟನೆಯ ಜಾಗ್ವಾರ್ ಸಿನಿಮಾದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ತಂದೆ ಮಕ್ಕಳಿಬ್ಬರ ನಡುವಣ ನಡೆದ ನಾಟಕೀಯವೆನ್ನಿಸುವ ಸಂಭಾಷಣೆಯೊಂದರ ತುಣುಕೊಂದನ್ನು ಅಸ್ತ್ರವನ್ನಾಗಿಸಿಕೊಂಡ ನೆಟ್ಟಿಗರು ಸೋಷಿಯಲ್ ಮಿಡಿಯಾದಲ್ಲಿ ಗೌಡರ ಕುಟುಂಬದ ಬಗೆಗೆ ವ್ಯಂಗ್ಯವಾಡಲು ಶುರು ಮಾಡಿದರು. ಅದೇಷ್ಟರ ಮಟ್ಟಿಗೆ ಎಂದರೆ ಆ ಸಂಭಾಷಣೆಗಳು ವಿದೇಶಿಗರ ಬಾಯಲ್ಲೂ ಹರಿದಾಡಿ ಟಾಪ್ ಟ್ರೆಂಡಿಗ್ ಪಟ್ಟಿ ಸೇರುವುದರ ಜೊತೆಗೆ ಗೌಡರ ಕುಟುಂಬದ ನಿದ್ದೆಗೆಡಿಸಿದ್ದು ಸುಳ್ಳಲ್ಲ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top