fbpx
ಸಮಾಚಾರ

ಕ್ರೀಡಾಂಗಣದಲ್ಲಿ ಈ ಕೆಲಸ ಮಾಡಿ ಸಿಕ್ಕಾಪಟೆ ಟ್ರೋಲ್​ ಆದ ಪಾಕ್​ ನಾಯಕ ಸರ್ಫ್​ರಾಜ್​.

ಭಾರತ ಮತ್ತು ಪಾಕಿಸ್ತಾನ ನಡುವೆ ಹೈ ವೋಲ್ಟೇಜ್​ ವಿಶ್ವಕಪ್​ ಪಂದ್ಯಾವಳಿ ನಡೆಯುತ್ತಿದ್ದು ಈಗಾಗಲೇ ಭಾರತದ ಬ್ಯಾಟಿಂಗ್​ ಮುಗಿದು ಪಾಕ್​ಗೆ 337 ರನ್​ಗಳ ಗುರಿ ನೀಡಿದೆ. ಮಳೆ ಕೂಡ ಆಗಾಗ ಕಾಡುತ್ತಿದೆ. ಹೀಗೆಲ್ಲ ಇರುವಾಗ ಪಾಕ್​ ನಾಯಕ ಮೈದಾನದಲ್ಲಿ ಮಾಡಿದ ಕೆಲಸವೊಂದು ವಿಪರೀತ ಟ್ರೋಲ್​ ಆಗುತ್ತಿದೆ.

ಫೀಲ್ಡಿಂಗ್ ವೇಳೆ ಆಕಳಿಸಿದ ಪಾಕಿಸ್ತಾನ ತಂಡದ ನಾಯಕ, ಕೀಪರ್ ಸರ್ಫರಾಜ್ ಅಹಮದ್ ವಿಡಿಯೋ, ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ಕಾಲೆಳೆದಿದ್ದಾರೆ. ವಿಶ್ವವೇ ತುದಿಗಾಲಲ್ಲಿ ಕೂತು ನೋಡುತ್ತಿರುವ ಹೈ ವೋಲ್ಟೇಜ್ ಪಂದ್ಯದಲ್ಲಿ ವಿಕೆಟ್ ಕೀಪರ್​ ಸ್ಥಾನದಲ್ಲಿ ನಿಂತು ಪಾಕ್ ಸಾರಥಿ ಪಂದ್ಯಕ್ಕೂ ತನಗೂ ಸಂಬಂಧವಿಲ್ಲದಂತೆ ಆಕಳಿಸುತ್ತಿರುವ ವಿಡಿಯೋ ಈಗ ಟ್ರೋಲಿಗರಿಗೆ ಆಹಾರವಾಗಿದೆ.

 

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top