fbpx
ಸಮಾಚಾರ

ಇಂಡೋ-ಪಾಕ್ ಕ್ರಿಕೆಟ್ ಕದನ- ಭಾರತಕ್ಕೆ ಗೆಲುವಾಗಲಿ ಎಂದು ವಾರಾಣಸಿಯಲ್ಲಿ ವಿಶೇಷ ಆರತಿ

ಐಸಿಸಿ 2019 ಏಕದಿನ ವಿಶ್ವಕಪ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಣ ರೋಚಕ ಕದನಕ್ಕೆ ಕ್ಷಣಗಣನೆ ಆರಂಭವಾಗಿದೆ. ಭಾರತ ಹಾಗೂ ಪಾಕಿಸ್ತಾನ ಅಭಿಮಾನಿಗಳ ನಡುವೆ ಭಾರಿ ರೋಚಕತೆ ಮನೆ ಮಾಡಿದೆ. ಎರಡೂ ತಂಡದ ಅಭಿಮಾನಿಗಳು ತಮ್ಮ ಟೀಮ್ ಗೆಲ್ಲಲಿ ಎಂದು ವಿಶೇಷವಾಗಿ ಪ್ರಾರ್ಥಿಸಲು ಆರಂಭಿಸಿದ್ದಾರೆ. ಈ ನಡುವೆ ಭಾರತಕ್ಕೆ ಗೆಲುವಾಗಲಿ ಎಂದು ವಾರಾಣಸಿಯಲ್ಲಿ ವಿಶೇಷ ಆರತಿ ನೆರವೇರಿಸಿದ್ದಾರೆ.

 

 

ವಿರಾಟ್ ಕೊಹ್ಲಿ ನೇತೃತ್ವದ ಭಾರತ ಕ್ರಿಕೆಟ್​ ತಂಡದ ಗೆಲುವಿಗಾಗಿ ಹಾರೈಸಿ ವಿಶೇಷ ಗಾಂಗಾರತಿಯನ್ನು ಕ್ರಿಕೆಟ್ ಪ್ರೇಮಿಗಳು ನೆರವೇರಿಸಿದ್ದಾರೆ. ಭಾರತದ ತ್ರಿವರ್ಣ ಧ್ವಜದ ಜತೆಗೆ ತಂಡದ ಆಟಗಾರರ ಭಾವಚಿತ್ರವಿರುವ ಬ್ಯಾನರ್​ ಹಿಡಿದು, ಗಂಗಾ ನದಿಯಲ್ಲಿ ಎದೆಮಟ್ಟದ ನೀರಿನಲ್ಲಿ ನಿಂತು ವಿಶೇಷ ಆರತಿ ನೆರವೇರಿಸಿದ್ದಾರೆ.

ಅಂದಹಾಗೆ ಇದು ಏಳನೇ ಬಾರಿಗೆ ಏಕದಿನ ವಿಶ್ವಕಪ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಪರಸ್ಪರ ಮುಖಾಮುಖಿಯಾಗುತ್ತಿದೆ. ಈ ಹಿಂದಿನ ಆರು ಪಂದ್ಯಗಳಲ್ಲೂ ಭಾರತವೇ ಗೆಲುವು ದಾಖಲಿಸಿತ್ತು. ಅಷ್ಟೇ ಯಾಕೆ ಎಲ್ಲ ಹಂತದಲ್ಲೂ ಸಮತೋಲಿತ ತಂಡವನ್ನು ಹೊಂದಿರುವ ವಿರಾಟ್ ಕೊಹ್ಲಿ ಪಡೆ ಇಲ್ಲೂ ಫೇವರಿಟ್ ಎನಿಸಿಕೊಂಡಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top