fbpx
ಸಮಾಚಾರ

ಭಾರತ- ಪಾಕ್ ಪಂದ್ಯಕ್ಕೂ ಮುನ್ನ ಅಭಿಮಾನಿಗಳಿಗೆ ವಿಶೇಷ ಸಂದೇಶ ನೀಡಿದ ಕೊಹ್ಲಿ

ಐಸಿಸಿ 2019 ಏಕದಿನ ವಿಶ್ವಕಪ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಣ ರೋಚಕ ಕದನಕ್ಕೆ ಕ್ಷಣಗಣನೆ ಆರಂಭವಾಗಿದೆ. ಭಾರತ ಹಾಗೂ ಪಾಕಿಸ್ತಾನ ಅಭಿಮಾನಿಗಳ ನಡುವೆ ಭಾರಿ ರೋಚಕತೆ ಮನೆ ಮಾಡಿದೆ. ಎರಡೂ ತಂಡದ ಅಭಿಮಾನಿಗಳು ತಮ್ಮ ಟೀಮ್ ಗೆಲ್ಲಲಿ ಎಂದು ವಿಶೇಷವಾಗಿ ಪ್ರಾರ್ಥಿಸಲು ಆರಂಭಿಸಿದ್ದಾರೆ. ಈ ನಡುವೆ ಕ್ರಿಕೆಟ್ ಅಭಿಮಾನಿಗಳಿಗೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿಶೇಷವಾದ ಸಂದೇಶವನ್ನು ರವಾನಿಸಿದ್ದಾರೆ.

ಪಂದ್ಯಕ್ಕೂ ಮುನ್ನ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಪಾಕ್ ವಿರುದ್ಧ ಪಂದ್ಯದ ಬಗ್ಗೆ ಅಭಿಮಾನಿಗಳು ಭಾವುಕರಾಗಬೇಕಿಲ್ಲ. ಎಲ್ಲಾ ವಿಶ್ವಕಪ್ ಪಂದ್ಯಗಳಂತೆ ಇದು ಒಂದು ಪಂದ್ಯ ಅಷ್ಟೇ. ಆಟವನ್ನು ಎಂಜಾಯ್ ಮಾಡಿ ತಂಡಕ್ಕೆ ಜಯ ಸಿಗಲಿದೆ ಎಂದು ಹೇಳಿದ್ದಾರೆ.

ಪಾಕಿಸ್ತಾನ ತಂಡ ಬಲಿಷ್ಠವಾಗಿದ್ದು, ಸಾಕಷ್ಟು ಅನುಭವಿ ಆಟಗಾರನನ್ನು ಹೊಂದಿದೆ. ಯಾರು ಚೆನ್ನಾಗಿ ಆಡುತ್ತಾರೆ ಅವರಿಗೆ ಗೆಲುವು ಖಚಿತ. ಇಂಗ್ಲೆಂಡ್‍ಗೆ ಆಗಮಿಸಿದ ಬಳಿಕ ಪಾಕ್ ವಿರುದ್ಧ ಪಂದ್ಯದ ಬಗ್ಗೆ ಭಿನ್ನವಾಗಿ ಏನು ಚರ್ಚೆ ನಡೆಸಿಲ್ಲ. ಅಲ್ಲದೇ ಪಂದ್ಯಕ್ಕಾಗಿ ತಂಡದ ಡ್ರೇಸಿಂಗ್ ರೂಮ್ ವಾತಾವರಣವೂ ಬದಲಾಗಿಲ್ಲ. ಎಲ್ಲಾ ಪಂದ್ಯಗಳನ್ನು ಸಮನಾಗಿ ಪರಿಗಣಿಸಿ ದೇಶದ ಪರ ಆಡುತ್ತೇವೆ. ನಮ್ಮ ಸಾಮಥ್ರ್ಯವನ್ನು ಅರಿತು ಆಡುತ್ತೇವೆ ಎಂದರು.

ಅಭಿಮಾನಿಗಳ ವೀಕ್ಷಣೆಯು ಸಂಪೂರ್ಣವಾಗಿ ವಿಭಿನ್ನವಾಗಿರುತ್ತದೆ. ಅವರು ಬಯಸಿದ ರೀತಿಯಲ್ಲೇ ಪಂದ್ಯ ಹಾಗೂ ವಾತಾವರಣವನ್ನು ಆನಂದಿಸಬೇಕು. ಇನ್ನೊಂದೆಡೆ ಆಟಗಾರರು ವರ್ಷಗಳಿಂದ ರೂಢಿ ಮಾಡಿಕೊಂಡು ಬಂದಿರುವ ಮನೋಸ್ಥಿತಿಯನ್ನೇ ಕಾಪಾಡಿಕೊಳ್ಳಬೇಕು ಎಂದು ಸೇರಿಸಿದರು.

ಭಾರತ-ಪಾಕಿಸ್ತಾನ ಪಂದ್ಯವೇ ಆಗಿರಲಿ ಅಥವಾ ಭಾರತ-ಆಸ್ಟ್ರೇಲಿಯಾ, ಭಾರತ-ಇಂಗ್ಲೆಂಡ್ ನಮ್ಮ ಮನೋಸ್ಥಿತಿಯು ಸಮಾನವಾಗಿರುತ್ತದೆ. ಅಲ್ಲಿಗೆ ತೆರಳಿ ಓರ್ವ ವೃತಿಪರ ಕ್ರಿಕೆಟಿಗನಾಗಿ ನಮ್ಮ ಕರ್ತವ್ಯವನ್ನು ನಿಭಾಯಸಬೇಕಿದೆ ಎಂದರು.

 

 

ಶಿಖರ್ ಧವನ್ ಕುರಿತು ಮಾತನಾಡಿರುವ ಕೊಹ್ಲಿ, ಧವನ್​ ಅಲಭ್ಯತೆಯಿಂದ ತಂಡಕ್ಕೆ ತೊಂದರೆಯಿಲ್ಲ ಎಂದಿದ್ದಾರೆ. ‘ನನಗೆ ಧವನ್ ಇಂಜುರಿ ಕುರಿತು ಟೆನ್ಶನ್ ಇಲ್ಲ. ಯಾವುದೇ ಸಂದರ್ಭದಲ್ಲಿ ತಂಡ ಒತ್ತಡಕ್ಕೆ ಸಿಲುಕಿದರೆ ಅದನ್ನು ನಿಭಾಯಿಸುವ ಶಕ್ತಿ ನಮ್ಮಲ್ಲಿದೆ. ಧವನ್ ಅತ್ಯುತ್ತಮ ಆಟಗಾರ. ಅವರು ಸದ್ಯಕ್ಕೆ ತಂಡದಿಂದ ಹೊರಗುಳಿದಿರುವುದು ನಮಗೆ ಯಾವುದೇ ನಷ್ಟ ಉಂಟಾಗುವುದಿಲ್ಲ’ ಎಂದು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top