fbpx
ಸಮಾಚಾರ

ಗೆಲುವಿನ ಖುಷಿಯಲ್ಲಿರುವ ಟೀಂ ಇಂಡಿಯಾಗೆ ಆಘಾತ- ಮುಂದಿನ ಪಂದ್ಯಗಳಿಗೆ ಭುವಿ ಅಲಭ್ಯ.

ಪ್ರಸಕ್ತ ವಿಶ್ವಕಪ್ ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಾ ಮೂರು ಪಂದ್ಯಗಳನ್ನು ಜಯಿಸಿ ಅಜೇಯರಾಗಿ ಉಳಿದಿರುವ ಟೀಂ ಇಂಡಿಯಾಗೆ ಹೊಸ ಆಘಾತ ಎದುರಾಗಿದೆ. ಸ್ನಾಯು ಸೆಳೆತ ಸಮಸ್ಯೆಯಿಂದ ಬಳಲುತ್ತಿರುವ ಟೀಂ ಇಂಡಿಯಾ ವೇಗಿ ಭುವನೇಶ್ವರ್ ಕುಮಾರ್ ಮುಂದಿನ ಎರಡು ಮೂರು ಪಂದ್ಯಗಳಿಂದ ದೂರ ಉಳಿಯಲಿದ್ದಾರೆ. ಭಾರತ- ಪಾಕಿಸ್ತಾನ ನಡುವಣ ನಿನ್ನೆ ನಡೆದ ಪಂದ್ಯದ ಬಳಿಕ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಈ ವಿಷಯವನ್ನು ಸ್ಪಷ್ಪಪಡಿಸಿದ್ದಾರೆ.

 

 

ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಎರಡನೇ ಓವರ್ ಮಾಡುತ್ತಿದ್ದ ಭುವನೇಶ್ವರ್ ಕುಮಾರ್ , ಸ್ನಾಯು ಸೆಳೆತದ ಕಾರಣಕ್ಕಾಗಿ ಅರ್ಧದಲ್ಲಿಯೇ ಮೈದಾನದಿಂದ ನಿರ್ಗಮಿಸಿದರು. ನಂತರ ಅವರ ಓವರ್ ನ್ನು ವಿಜಯ್ ಶಂಕರ್ ಪೂರ್ಣಗೊಳಿಸಿದರು. ಮುಂದಿನ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ಬದಲಿಗೆ ಮೊಹಮ್ಮದ್ ಶಮಿ ಆಡಲಿದ್ದಾರೆ ಎಂದು ವಿರಾಟ್ ಕೊಹ್ಲಿ ತಿಳಿಸಿದ್ದಾರೆ.

ಈಗಾಗಲೇ ಬೆರಳಿನ ಗಾಯದ ಸಮಸ್ಯೆಯಿಂದಾಗಿ ಶಿಖರ್ ಧವನ್ ಈಗಾಗಲೇ ಕೆಲ ಪಂದ್ಯಗಳಿಂದ ದೂರ ಉಳಿದಿದ್ದು, ಇದೀಗ ಭುವನೇಶ್ವರ್ ಕುಮಾರ್ ಕೂಡಾ ಮುಂದಿನ ಕೆಲ ಪಂದ್ಯಗಳಿಂದ ದೂರ ಉಳಿಯಬೇಕಾಗಿದೆ. ಒಟ್ಟಿನಲ್ಲಿ ಗಾಯದ ಸಮಸ್ಯೆ ಟೀಂ ಇಂಡಿಯಾವನ್ನು ಬೆಂಬಿಡದೆ ಕಾಯುತ್ತಿರುವುದು ತಂಡಕ್ಕೆ ಹಿನ್ನಡೆಯುಂಟುಮಾಡುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top