fbpx
ಸಮಾಚಾರ

“ನನ್ನ ಅಂತ್ಯಸಂಸ್ಕಾರಕ್ಕೆ ಬನ್ನಿ”- ಸಿಎಂಗೆ ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡ ಮಂಡ್ಯ ರೈತ.

ಸಾಲಭಾಧೆ ತಾಳಲಾರದೆ ಸೆಲ್ಫಿ ವಿಡಿಯೋ ಮಾಡಿ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಆಘಲಯ ಗ್ರಾಮದಲ್ಲಿ ನಡೆದಿದೆ. ವಿಷ ಸೇವಿಸಿ ಆತ್ಮಹತ್ಯೆಗೂ‌ ಮುನ್ನ ಸೆಲ್ಫಿ ವಿಡಿಯೋದಲ್ಲಿ ಸಿ.ಎಂ.‌ಗೆ ತನ್ನ ಸಾವಿಗೆ ಬರುವಂತೆ ಆಹ್ವಾನಿಸಿದ್ದ ರೈತ.  ಸಿ.ಎಂ.ಕುಮಾರಸ್ವಾಮಿಯ ಅಪ್ಪಟ ಅಭಿಮಾನಿಯಾಗಿದ್ದ ಮೃತ ರೈತ ಸುರೇಶ್ ಎಂದು ತಿಳಿದುಬಂದಿದೆ.

 


ರೈತನ ಮನವಿ ಏನು?
ವಿಡಿಯೋದಲ್ಲಿ ಈ ಭಾಗದ ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ವಿವರಿಸುವ ಸುರೇಶ್ ಅವರು, ಕರ್ನಾಟಕ ಜನಪ್ರಿಯ ಸಿಎಂ ಆಗಿರುವ ನೀವು ನನ್ನ ಅಂತ್ಯ ಸಂಸ್ಕಾರಕ್ಕೆ ಬರಬೇಕು. ಈ ವೇಳೆ ಕೇವಲ ಆಶ್ವಾಸನೆಯನ್ನು ನೀಡದೆ ರೈತರ ಸಮಸ್ಯೆಗಳನ್ನು ಬಗೆಹರಿಸುವ ನಂಬಿಕೆ ಹೊಂದಿದ್ದೇನೆ.

ಈ ಭಾಗದಲ್ಲಿ ಮೊದಲು 150 ಅಡಿಗೆ ನೀರು ಲಭ್ಯವಾಗುತ್ತಿತ್ತು. ಆದರೆ ಈಗ 1,500 ಅಡಿ ಕೊಳವೆ ಬಾವಿ ಕೊರೆದರು ನೀರು ಸಿಗುತ್ತಿಲ್ಲ. ಈ ಭಾಗದ ಕೆರೆ ಕುಂಟೆಗಳನ್ನು ತುಂಬುವಂತೆ ಮಾಡಿ ರೈತರ ಸಮಸ್ಯೆ ಬಗೆ ಹರಿಸಿ. ಈ ಭಾಗದಲ್ಲಿ ಕೆಲ ವರ್ಷಗಳಿಂದ ಬರಗಾಲ ಇರುವುದರಿಂದ ಹೆಚ್ಚಿನ ಸಮಸ್ಯೆ ಆಗಿದೆ. ಇದರಲ್ಲಿ ಯಾವುದೇ ತಾರತಮ್ಯ ಮಾಡದೆ ನೀರು ಕೊಟ್ಟು ನ್ಯಾಯ ನೀಡಿ” ಎಂದು ಮನವಿ ಮಾಡಿದ್ದಾರೆ.

ಕುಮಾರಸ್ವಾಮಿ ನಾಲ್ಕು ವರ್ಷವೂ ಸಿಎಂ ಆಗಿರಬೇಕು.ಈ ಸರ್ಕಾರ ಯಾವುದೇ ಕಾರಣಕ್ಕೂ ಬೀಳದಂತೆ ಸಚಿವ ಡಿಕೆ ಶಿವಕುಮಾರ್​ ಕಾಪಾಡಬೇಕು. ಯಡಿಯೂರಪ್ಪ ಅವರು ಕುಮಾರಸ್ವಾಮಿಯ ಕಾಲೆಳೆಯದಂತೆ ಕಾರ್ಯನಿರ್ವಹಿಸಬೇಕು. ಈ ಸರ್ಕಾರವನ್ನು ಯಶಸ್ವಿಯಾಗಿ ನಿಭಾಯಿಸಿಕೊಂಡು ಹೋಗುವ ಜವಾಬ್ದಾರಿ ಕುಮಾರಸ್ವಾಮಿ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್​ ಮೇಲಿದೆ ಎಂದು ವಿಡಿಯೋದಲ್ಲಿ ರೈತ ತಿಳಿಸಿದ್ದಾರೆ.

ಅಂದಹಾಗೇ ಭಾನುವಾರ ಬೆಳಗ್ಗೆ ಜಮೀನಿನ ಬಳಿ ರೈತ ಸುರೇಶ್ ಅವರು ನೇಣು ಬಿಗುದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದು, ಅಂತ್ಯ ಸಂಸ್ಕಾರವನ್ನು ನಡೆಸಲಾಗಿದೆ. ಆ ಬಳಿಕ ವಿಡಿಯೋ ಕುಟುಂಬಸ್ಥರ ಕೈಗೆ ಲಭಿಸಿದೆ. ಕೆಆರ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top