fbpx
ಸಮಾಚಾರ

ಕನ್ನಡದ ಹೆಮ್ಮೆಯ ಗಾಯಕನಿಗೆ ಅಮೆರಿಕಾದಲ್ಲಿ ಶ್ರೇಷ್ಠ ಗೌರವ.

ಕನ್ನಡದ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು ಅಮೆರಿಕ(ಯುಎಸ್​) ನಾರ್ತ್​ ಕರೋಲಿನಾದ ಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದಾರೆ. ತಮ್ಮ ಕಂಚಿನ ಕಂಠದಿಂದ ಮೋಡಿ ಮಾಡಿದ್ದ ವಿಜಯ್ ಅವರ ಹೆಸರಿನಲ್ಲಿ ಮೇ.12 ಅನ್ನು ‘ವಿಜಯ್ ಪ್ರಕಾಶ್ ಡೇ’ ಆಚರಿಸಲಾಗುವುದು ಎಂದು ಉತ್ತರ ಕರೋಲಿನಾ ಮೇಯರ್ ಘೋಷಿಸಿದ್ದಾರೆ. ಇದು ಕನ್ನಡಿಗರಿಗೊಬ್ಬರಿಗೆ ಸಿಕ್ಕ ಬಹುದೊಡ್ಡ ಸನ್ಮಾನ.

 

 

ಅಮೆರಿಕದ ದಕ್ಷಿಣ ಕರೊಲಿನಾ ರಾಜ್ಯದ ಕಾನ್​ಕಾರ್ಡ್ ನಗರದ ಮೇಯರ್ ವಿಲಿಯಮ್ ಸಿ. ಡಷ್ ಘೋಷಿಸಿದ್ದಾರೆ. ವಿದೇಶಗಳಲ್ಲೂ ವಿಜಯ್ ಪ್ರಕಾಶ್​ಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಕಳೆದ ತಿಂಗಳು ಮೇ 12ರಂದು ಕಾನ್​ಕಾರ್ಡ್ ನಗರದಲ್ಲಿ ನಡೆದ ಒಂದು ಸಂಗೀತ ಕಾರ್ಯಕ್ರಮದಲ್ಲಿ ಗಾನ ಸುಧೆ ಹರಿಸಿದ ವಿಜಯ್ ಪ್ರಕಾಶ್ ಕಂಠ ಸಿರಿಗೆ ಅಲ್ಲಿನ ಅಭಿಮಾನಿಗಳು ಮನಸೋತಿದ್ದಾರೆ.

ವಿಜಯ್ ಪ್ರಕಾಶ್ ಅದ್ಭುತ ಗಾಯನದಿಂದ ಪ್ರಭಾವಿತರಾದ ಮೇಯರ್ ವಿಲಿಯಂ ಡಿ ಡಶ್, ಕಾರ್ಯಕ್ರಮ ಮುಗಿಯುತ್ತಿದ್ದಂತೆ ಇನ್ಮುಂದೆ ಪ್ರತಿ ವರ್ಷ ಮೇ.12ನ್ನು ವಿಜಯ್ ಪ್ರಕಾಶ್ ಡೇಯನ್ನಾಗಿ ಆಚರಿಸುವುದಾಗಿ ಘೋಷಿಸಿದ್ದಾರೆ. ಕಾರ್ಯಕ್ರಮದಲ್ಲಿ ವಿಜಯ್ ಪ್ರಕಾಶ್ ಹಾಡಿದ ‘ನಟಸಾರ್ವಭೌಮ’ ಚಿತ್ರದ ಒಪನ್ ದಿ ಬಾಟಲ್, ಏತಕೆ ಮೊದಲಾದ ಹಾಡುಗಳಿಗೆ ಪ್ರೇಕ್ಷಕರು ಕುಣಿದು ಕುಪ್ಪಳಿಸಿದ ದೃಶ್ಯ ಕಂಡು ಮೇಯರ್ ಅತ್ಯಂತ ಖುಷಿಪಟ್ಟಿದ್ದಾರೆ.

ಮೇ.12 ರನ್ನು ವಿಜಯ್ ಪ್ರಕಾಶ್ ಡೇ ಎಂದು ಆಚರಿಸಲು ನಾರ್ತ್ ಕರೊಲಿನಾದ ಷಾರ್ಲೆಟ್ ನಗರದ​ ಆಡಳಿತ ಮಂಡಳಿ ಅಧಿಕೃತ ಪ್ರಕಟಣೆ ಹೊರಡಿಸಿದೆ. ಇಂತಹದೊಂದು ಗೌರವ ಸಿಕ್ಕಿರುವ ಮೊದಲ ಕನ್ನಡದ ಗಾಯಕ ಎಂಬ ಖ್ಯಾತಿ ಇದೀಗ ವಿಜಯ್ ಪ್ರಕಾಶ್ ಅವರ ಪಾಲಾಗಿದ್ದು, ಇದು ಭಾರತೀಯ ಸಂಗೀತಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಸಿಕ್ಕಿರುವ ಅತೀ ದೊಡ್ಡ ಗೌರವಗಳಲ್ಲಿ ಒಂದಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top