fbpx
ಭವಿಷ್ಯ

ಜೂನ್ 18- ಇಂದಿನ ಪಂಚಾಂಗ ಮತ್ತು ದಿನಭವಿಷ್ಯ.

ಸ್ಥಳ- ಬೆಂಗಳೂರು.
ಸೋಮವಾರ, ಜೂನ್ 18 2019
ಸೂರ್ಯೋದಯ : 5:53 am
ಸೂರ್ಯಾಸ್ತ: 6:47 pm
ಶಕ ಸಂವತ : 1941 ವಿಲಂಬಿ

ಅಮಂತ ತಿಂಗಳು :ಜ್ಯೇಷ್ಠ
ಪಕ್ಷ : ಶುಕ್ಲಪಕ್ಷ
ತಿಥಿ : ಪೂರ್ಣಿಮಾ 14:00
ನಕ್ಷತ್ರ :ಜ್ಯೇಷ್ಠ 10:43
ಯೋಗ : ಶುಭ 19:30
ಕರಣ:ಬಾವ 14:00 ಬಾಲವ 26:11

ಅಭಿಜಿತ್ ಮುಹುರ್ತ:11:54 am – 12:46 pm
ಅಮೃತಕಾಲ :5:09 am – 6:49 am

ರಾಹುಕಾಲ-7:33 am – 9:09 am
ಯಮಗಂಡ ಕಾಲ-10:44 am – 12:20 pm
ಗುಳಿಕ ಕಾಲ-1:56 pm – 3:31 pm

 

 
 

ಮೇಷ (Mesha)

 

ಅನಿರೀಕ್ಷಿತವಾಗಿ ಮನೆಯಲ್ಲಿ ಗೊಂದಲದ ವಾತಾವರಣ ಮೂಡುವುದು. ವಾಕ್‌ ಸಮರಕ್ಕೆ ಅವಕಾಶ ಕೊಡಬೇಡಿ. ಕೋರ್ಟು ಕಚೇರಿಯ ಕೆಲಸಗಳಲ್ಲಿ ಜಯವು ನಿಮ್ಮ ಪರವಾಗಿ ಆಗುವುದು. ಮಕ್ಕಳು ನಿಮಗೆ ಸಹಾಯ ಮಾಡುವರು.

 

ವೃಷಭ (Vrushabha)

ನಿಮ್ಮ ಸಾಮರ್ಥ್ಯ‌ದ ಬಗ್ಗೆ ನಿಮಗೆ ಸಂಪೂರ್ಣ ವಿಶ್ವಾಸವಿರಲಿ. ನಿಮ್ಮನ್ನು ಇತರೆಯವರು ಸೋಲಿಸಬೇಕೆಂದು ಹಠ ತೊಟ್ಟು ತಾವೇ ಸೋಲುವರು. ಮಾಡುವ ಕೆಲಸಗಳು ದೈವ ಕೃಪೆಯಿಂದ ಸರಿಯಾದ ಕ್ರಮದಲ್ಲಿ ನಡೆಯುವವು.

 

ಮಿಥುನ (Mithuna)

ನೀವು ಹಮ್ಮಿಕೊಂಡ ಕಾರ್ಯಗಳಿಗೆ ಧನ ಸಹಾಯವನ್ನು ಬ್ಯಾಂಕಿನ ಮೂಲಕ ಪಡೆಯುವಿರಿ. ಕೂಡಿಟ್ಟ ಹಣ ಅಪವ್ಯಯವಾಗದಂತೆ ನೋಡಿಕೊಳ್ಳಿರಿ. ಷೇರು ವ್ಯವಹಾರದಿಂದ ಅನುಕೂಲವಾಗುವುದು. ಆರೋಗ್ಯ ಉತ್ತಮವಾಗಿರುವುದು.

 

ಕರ್ಕ (Karka)

ಆಹಾರ ವ್ಯತ್ಯಯದಿಂದ ಅನಾರೋಗ್ಯ ಕಾಡುವ ಸಾಧ್ಯತೆಯಿದೆ. ಮಗನ ವಿಷಯದಲ್ಲಿ ಅತಿಯಾದ ಭಾವುಕತೆ ಬೇಡ. ದೇವತಾ ದರ್ಶನದಿಂದ ಮನಸ್ಸಿಗೆ ನೆಮ್ಮದಿ ದೊರೆಯುವುದು. ಜೀವನದ ಶೈಲಿ ಬದಲಾಯಿಸಿಕೊಳ್ಳಿರಿ. ನಿಯಮಿತವಾಗಿ ವ್ಯಾಯಾಮ ಮಾಡಿರಿ.

ಸಿಂಹ (Simha)

ದಾಂಪತ್ಯದಲ್ಲಿ ಸುಖ, ಸಂತಸದ ದಿನವಿದು. ವ್ಯಾಪಾರ ವ್ಯವಹಾರಗಳ ಹೂಡಿಕೆ ಲಾಭಕರವಾದರೂ ಜಾಗ್ರತೆ ವಹಿಸಬೇಕಾಗುತ್ತದೆ. ಕೌಟುಂಬಿಕವಾಗಿ ಸಂಬಂಧಗಳನ್ನು ಗಟ್ಟಿಯಾಗಿ ಇರಿಸಿಕೊಳ್ಳಿ.

 

ಕನ್ಯಾರಾಶಿ (Kanya)

ನಿಮ್ಮ ಹಿಂದೆ ಬಿದ್ದ ಕೆಲಸ ಕಾರ್ಯಗಳಿಗೆಲ್ಲ ಇಂದು ಕ್ರಿಯಾಶೀಲತೆ ದೊರೆಯುವುದು. ಹಮ್ಮಿಕೊಂಡ ಕೆಲಸಗಳಲ್ಲಿ ಯಶಸ್ಸು ಪಡೆಯುವಿರಿ. ಪರಾಕ್ರಮದ ಚಂದ್ರ ಉತ್ತಮನಾಗಿದ್ದು, ಹಣಕಾಸಿನ ತೊಂದರೆ ಇರುವುದಿಲ್ಲ.

 

ತುಲಾ (Tula)

ಮನೆಯ ಕುಟುಂಬದ ಸದಸ್ಯರೊಡನೆ ತೀರ್ಥಯಾತ್ರೆ ಕೈಕೊಳ್ಳುವ ಸಾಧ್ಯತೆ ಇದೆ. ಪ್ರಯಾಣಕ್ಕೆ ಬೇಕಾದ ಸಕಲ ವಸ್ತುಗಳನ್ನು ಪಟ್ಟಿ ಮಾಡುವಿರಿ. ಬಂಧುಗಳಿಂದ ಹಣಕಾಸಿನ ನೆರವು ದೊರೆಯುವುದು.ದೈವಾನುಗ್ರಹದಿಂದ ನಿಶ್ಚಿತ ರೂಪದಲ್ಲಿ ಕಾರ್ಯಸಾಧನೆಯಾಗಲಿದೆ. ಆತ್ಮೀಯರಿಂದ ಪ್ರೀತಿ ವಿಶ್ವಾಸದ ಫ‌ಲ ಸಿಗಲಿದೆ. ಮಕ್ಕಳಿಂದ ಕೂಡಾ ಶುಭವಿದೆ.

 

ವೃಶ್ಚಿಕ (Vrushchika)

ನಿಮ್ಮ ಮೇಲೆ ಹೊರಿಸಲ್ಪಟ್ಟ ಜವಾಬ್ದಾರಿಯಿಂದ ಕಂಗೆಡುವಿರಿ. ಆದರೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋದಲ್ಲಿ ಈದಿನ ನಿಮಗೆ ಒಳಿತಾಗುವುದು. ಹಣಕಾಸಿನ ತೊಂದರೆ ಎದುರಾಗುವುದಿಲ್ಲ.

 

ಧನು ರಾಶಿ (Dhanu)

ಆರ್ಥಿಕ ಖರ್ಚುವೆಚ್ಚಗಳು ಅಧಿಕವಾದಾವು. ನಿರುದ್ಯೋಗಿಗಳು ತಾತ್ಕಾಲಿಕ ಉದ್ಯೋಗದಲ್ಲಿ ತೃಪ್ತಿ ಪಡುವಂತಾದೀತು. ಯಾವುದೇ ಕಾರ್ಯಗಳನ್ನು ಗ್ರಹಿಸಿದರೂ ಪ್ರಥಮದಲ್ಲಿ ವಿಘ್ನಗಳು ಕಂಡು ಬರುತ್ತವೆ. ತಾಳ್ಮೆ ಇರಲಿ.

 

ಮಕರ (Makara)

ವ್ಯಾಪಾರ ವ್ಯವಹಾರಗಳಲ್ಲಿ ನಿರೀಕ್ಷಿತ ಅಭಿವೃದ್ಧಿ ಇರದು. ಆದ ಕಾರಣ ಪ್ರಯತ್ನಬಲ, ಆತ್ಮ ಸ್ಥೈರ್ಯದಿಂದಲೆ ಮುಂದುವರಿಯಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ನೆನಪಿನ ಶಕ್ತಿ ಕ್ಷೀಣಿಸಲಿದೆ.

 

ಕುಂಭರಾಶಿ (Kumbha)

ಆಗಾಗ ಅತಿಥಿಗಳ ಆಗಮನ ವಿರುತ್ತದೆ. ಯಾವುದಕ್ಕೂ ಋಣಾತ್ಮಕ ಚಿಂತನೆಗಳನ್ನು ಬಿಟ್ಟುಬಿಡಬೇಕು. ಆರೋಗ್ಯ ಭಾಗ್ಯ ನಿಮ್ಮೆ ಕೈಯಲ್ಲಿ ಇರುತ್ತದೆ. ಅಭಿವೃದ್ಧಿ ಹಂತ ಹಂತವಾಗಿ ಕಂಡು ಬರುತ್ತದೆ.

 

ಮೀನರಾಶಿ (Meena)

ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡುಬರುವುದು. ಮಾನಸಿಕ ತೊಳಲಾಟ ನಿಮ್ಮ ಆತ್ಮವಿಶ್ವಾಸವನ್ನು ಕುಂದಿಸುವುದು. ಪಾಲುದಾರರಲ್ಲಿ ಹೊಂದಾಣಿಕೆ ಅಗತ್ಯವಾಗುವುದು. ಸಜ್ಜನರ ಸಹವಾಸದಿಂದ ಮನಸ್ಸು ಹಗುರವಾಗುವುದು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top