fbpx
ಸಮಾಚಾರ

ಪಾಕಿಸ್ತಾನಕ್ಕೆ ತಿರುಗೇಟು ಕೊಟ್ಟ ಪಾರುಲ್ ಯಾದವ್! ವಿಡಿಯೋ ವೈರಲ್

ಪಾಕಿಸ್ತಾನದ ಮಾಧ್ಯಮಗಳಿಗೆ ನಟಿ ಪಾರುಲ್ ಯಾದವ್ ತಿರುಗೇಟು ನೀಡಿದ್ದಾರೆ. ಅಭಿನಂದನ್ ರೀತಿ ವೇಷ ತೊಟ್ಟು, ಪಾಕ್‌ಗೆ ಟಾಂಗ್ ಕೊಡೋ ರೀತಿ ವೀಡಿಯೋ ಒಂದನ್ನ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಾಕಿದ್ದಾರೆ.

ಪಾಕ್ ಜಾಹಿರಾತುಗಳಿಗೆ ಪಾರೂಲ್ ಯಾದವ್ ಸರಿಯಾದ ಪ್ರತಿಕ್ರಿಯೆ ನೀಡಿದ್ದಾರೆ. ಅಭಿನಂದನ್ ಅವರ ರೀತಿಯ ಮೀಸೆ ಧರಿಸಿ ಅದೇ ಜಾಹಿರಾತಿನ ಮೂಲಕ ಪಾಕಿಸ್ತಾನಕ್ಕೆ ಪಂಚ್ ನೀಡಿದ್ದಾರೆ. ಟೀ ಕಪ್ ನೀವೆ ಇಟ್ಟುಕೊಳ್ಳಿ, ನಾವು ವರ್ಲ್ಡ್ ಗೆಲ್ಲುತ್ತೇವೆ ಎಂದು ಪಾರೂಲ್ ಉತ್ತರ ನೀಡಿದ್ದಾರೆ.

 

 

 

ಭಾರತ ಮತ್ತು ಪಾಕಿಸ್ತಾನದ ನಡುವಿನ ಹೈವೊಲ್ಟೇಜ್ ವಿಶ್ವಕಪ್ ಕ್ರಿಕೆಟ್ ಪಂದ್ಯದ ಪ್ರಮೋಷನ್ ಹೆಸರಿನಲ್ಲಿ ಪಾಕಿಸ್ತಾನದ ಮಿಡಿಯೋ ಒಂದು ಯೋಧ ಅಭಿನಂದನ್ ನನ್ನು ಅಣಕಿಸುವ ಜಾಹೀರಾತು ಪ್ರಸಾರ ಮಾಡುತ್ತು. ಇದಕ್ಕೆ ಭಾರತದ ಕಡೆಯಿಂದ ವ್ಯಾಪಕ ಆಕ್ರೋಶವೂ ವ್ಯಕ್ತವಾಗಿತ್ತು. ಇದೀಗ ಭಾರತ ತಂಡ ಪಾಕ್ ತಂಡದ ವಿರುದ್ಧ ಗೆದ್ದಿರೋದರಿಂದ ಪಾಕ್ ಕುಚೇಷ್ಟೆಗಳಿಗೆ ನಿರ್ಣಾಯಕ ಉತ್ತರ ರವಾನಿಸಿದಂತಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top