fbpx
ಸಮಾಚಾರ

ರಾಹುಲ್‌ಗೆ ಎಂಟು ಕೋಟಿ ಪಂಗನಾಮ ಹಾಕಿದ ರಮ್ಯಾ?

ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿಗೆ ಮಾಜಿ ಸಂಸದೆ ರಮ್ಯಾ ಮಂಕುಬೂದಿ ಎರಚಿದ್ದಾರೆ ಎಂದು “ದ ಗಾರ್ಡಿಯನ್‌’ ವರದಿ ಮಾಡಿದೆ. “ದ ಗಾರ್ಡಿಯನ್‌’ ನೀಡಿರುವ ವರದಿ ಆಧರಿಸಿ “ಟೈಮ್ಸ್‌ ನೌ’ ಪ್ರಕಟಿಸಿರುವ ವರದಿಯಲ್ಲಿ ಈ ವಿಷಯ ಹೇಳಲಾಗಿದ್ದು, ರಮ್ಯಾ ಈ ಭಾರಿ ಲೋಕಸಭಾ ಚುನಾವಣೆಯಲ್ಲಿ ಯುಪಿಎ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ರಾಹುಲ್ ಗಾಂಧಿಯನ್ನು ನಂಬಿಸಿದ್ದರು ಎಂದು ಹೇಳಲಾಗಿದೆ.

ರಾಹುಲ್ ಗಾಂಧಿಯ ಆಪ್ತರಾದ ಕಾಂಗ್ರೆಸ್‌ ಸಾಮಾಜಿಕ ಮಾಧ್ಯಮ ವಿಭಾಗದ ಮುಖ್ಯಸ್ಥೆ, ನಟಿ ರಮ್ಯಾ ಹಾಗೂ ಪಕ್ಷದ ಚುನಾವಣಾ ತಂತ್ರಗಾರಿಕೆ ಜವಾಬ್ದಾರಿ ಹೊತ್ತಿದ್ದ ಪ್ರವೀಣ್‌ ಚಕ್ರವರ್ತಿ ಎಂಬುವರು ರಾಹುಲ್‌ ಅವರಿಂದ ಬರೋಬ್ಬರಿ 30 ಕೋಟಿ ರೂ. ಪಡೆದಿದ್ದಾರೆ ಎಂದು ಈ ವರದಿಯಲ್ಲಿ ಹೇಳಲಾಗಿದೆ. ರಮ್ಯಾ ಹಾಗೂ ಪ್ರವೀಣ್‌ ಹಲವಾರು ಸಮೀಕ್ಷೆಗಳನ್ನು ನಡೆಸಿದ್ದೇವೆ, ಸಮೀಕ್ಷೆ ನಡೆಸಲು ತುಂಬಾ ಖರ್ಚಾಗಿದೆ ಎಂದು ಹೇಳಿ ರಾಹುಲ್‌ ಅವರಿಂದ ಅಪಾರ ಹಣವನ್ನು ಶುಲ್ಕದ ರೂಪದಲ್ಲಿ ಪಡೆದಿದ್ದರು. ರಮ್ಯಾ 8 ಕೋಟಿ ರೂ. ಪಡೆದಿದ್ದರೆ, ಪ್ರವೀಣ್‌ 24 ಕೋಟಿ ರೂ. ಪಡೆದಿದ್ದರು ಎಂದು ಹೇಳಲಾಗಿದೆ.

“ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಕನಿಷ್ಠ ಏನಾದರೂ 164ರಿಂದ 184 ಸ್ಥಾನಗಳನ್ನು ಗೆಲ್ಲುತ್ತದೆ. ಕೇಂದ್ರದಲ್ಲಿ ಕಾಂಗ್ರೆಸ್‌ ನೇತೃತ್ವದ ಯುಪಿಎ ಅಧಿಕಾರಕ್ಕೆ ಬರುವುದು ನಿಶ್ಚಿತ. ನೀವು ಯೋಚನೆ ಮಾಡಬೇಡಿ’ ಎಂದು ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿ ಅವರಿಗೆ ರಮ್ಯಾ ಮತ್ತು ಪ್ರವೀಣ್ ಪದೇ ಪದೇ ಹೇಳುತ್ತಲೇ ಇದ್ದರಂತೆ.

ರಮ್ಯಾ, ಪ್ರವೀಣ್‌ ಮಾತನ್ನು ಅತಿಯಾಗಿ ನಂಬಿದ್ದ ರಾಹುಲ್‌, ಚುನಾವಣೆ ಮುಗಿದ ತಕ್ಷಣ ಮಿತ್ರಪಕ್ಷಗಳ ನಾಯಕರಿಗೆ ಕರೆ ಮಾಡಿ, ಸಂಪುಟಕ್ಕೆ ಸೇರ್ಪಡೆಗೊಳ್ಳುವ ಸಚಿವರ ಬಗ್ಗೆ ಮಾತುಕತೆ ನಡೆಸಿದ್ದರಂತೆ. ಇನ್ನೊಂದೆಡೆ, ಫ‌ಲಿತಾಂಶ ಬಂದ ದಿನ ರಾಷ್ಟ್ರಪತಿ ಬಳಿ ಸರಕಾರ ರಚಿಸಲು ಹಕ್ಕೊತ್ತಾಯ ಮಂಡಿಸುವ ಕಾನೂನಾತ್ಮಕ ಪ್ರತಿಗಳನ್ನು ಕೂಡ ರಾಹುಲ್ ಸಿದ್ಧಪಡಿಸಿದ್ದರಂತೆ. ಆದರೆ ಫಲಿತಾಂಶ ಬಂದಮೇಲೆಯೇ ರಾಹುಲ್ ಅವರಿಗೆ ವಾಸ್ತವಾಂಶದ ಅರಿವಾಗಿದ್ದು..

ರಮ್ಯಾ ನಾಪತ್ತೆ:
ಇನ್ನು ರಮ್ಯಾ ಅವರು ಚುನಾವಣಾ ಫ‌ಲಿತಾಂಶ ಬಂದ ನಂತರ ಕೆಲವೇ ದಿನಗಳಲ್ಲಿ ತಮ್ಮ ಟ್ವಿಟರ್‌ ಮತ್ತು ಇನ್ಸ್ಟಾಗ್ರಾಮ್ ಖಾತೆಯನ್ನು ಡಿಲೀಟ್‌ ಮಾಡಿ ಏಕಾಏಕಿ ನಾಪತ್ತೆಯಾಗಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top