fbpx
ಸಮಾಚಾರ

ಪ್ರಮಾಣ ವಚನ ವೇಳೆ ಮೊಳಗಿದ ಜೈ ಶ್ರೀರಾಮ್ ಘೋಷಣೆ- “ಜೈ ಭೀಮ್, ತಕ್ಬೀರ್ ಅಲ್ಲಾಹು ಅಕ್ಬರ್, ಜೈ ಹಿಂದ್” ಎಂದ ಓವೈಸಿ.

ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು ಅಧಿವೇಶದಲ್ಲಿ ಪ್ರಮಾಣ ವಚನ ಸ್ವೀಕರಿಸಲು ಎದ್ದು ಬರುತ್ತಿದ್ದಂತೆ ಕೆಲ ಸಂಸದರು ‘ಜೈ ಶ್ರೀರಾಮ್’ ಎಂದು ಘೋಷಣೆ ಕೂಗಿದ ಪ್ರಸಂಗ ಇಂದು ನಡೆದಿದೆ.

 

 

 

17ನೇ ಲೋಕಸಭೆಯ ಮೊದಲ ಅಧಿವೇಶನದ ಎರಡನೇ ದಿನವಾದ ಇಂದು ವಿಪಕ್ಷಗಳ ಜೈ ಶ್ರೀರಾಮ್, ವಂದೇ ಮಾತರಂ ಘೋಷಣೆಗಳ ನಡುವೆಯೇ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಸಂಸದರಾಗಿ ಪ್ರಮಾಣವಚನ ಸ್ವೀಕರಿಸಿದರು. ಇಷ್ಟಾದರೂ ವಿಚಲಿತಗೊಳ್ಳದ ಓವೈಸಿ, ಮತ್ತಷ್ಟು ಜೋರಾಗಿ ಘೋಷಣೆಗಳನ್ನು ಕೂಗುವಂತೆ ಸಂಸದರಿಗೆ ಸನ್ನೆ ಮಾಡಿ ಹೇಳಿದ್ದು ವಿಶೇಷವಾಗಿತ್ತು.

ಜೈ ಶ್ರೀರಾಮ್ ಘೋಷಣೆಯಿಂದ ಇದರಿಂದಾಗಿ ಸ್ವಲ್ಪ ವಿಚಲಿತಗೊಂಡ ಓವೈಸಿ ಅವರು ಪ್ರಮಾಣ ವಚನ ಸ್ವೀಕರಿಸಿದ ಬಳಿಕ ‘ಜೈ ಭೀಮ್’, ಜೈ ಮೀಮ್, ತಕ್ಬೀರ್ ಅಲ್ಲಾಹು ಅಕ್ಬರ್, ಜೈ ಹಿಂದ್ ಎಂದು ಕೂಗಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top