fbpx
ಸಮಾಚಾರ

ನಿಖಿಲ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಹುಡುಗಿ ಈಗ ಯಾರನ್ನ ಮದುವೆಯಾಗ್ತಿದ್ದಾರೆ ಗೊತ್ತಾ?

ನಿಖಿಲ್ ಗೌಡ ಮತ್ತು ಚಿತ್ರ ನಿರ್ಮಾಪಕ ಕೆಸಿಎನ್ ಮೋಹನ್ ಅವರ ಪುತ್ರಿ ಸ್ವಾತಿ ನಡುವೆ ನಡೆದಿದ್ದ ನಿಶ್ಚಿತಾರ್ಥ ಈಗ ಮುರಿದು ಬಿದ್ದಿರುವ ವಿಚಾರ ಎಲ್ಲರಿಗೂ ಗೊತ್ತು. ಈ ನಡುವೆ ತಮ್ಮ ಮಗಳಿಗೆ ಬೇರೆ ಮದ್ವೆ ಮಾಡಲು ಮುಂದಾಗಿರುವ ಚಿತ್ರ ನಿರ್ಮಾಪಕ ಕೆಸಿಎನ್ ಮೋಹನ್ ಅವರು ಹೆಚ್.ಡಿ ಕುಮಾರಸ್ವಾಮಿಯರ ರಾಜಕೀಯ ಎದುರಾಳಿ ಶ್ರೀಕಂಠಯ್ಯ ಅವರ ಮೊಮ್ಮಗ ನೇಹಾನೇಶ್ ಅವರಿಗೆ ತಮ್ಮ ಮಗಳನ್ನು ಮದ್ವೆ ಮಾಡಿಕೊಡುವುದಕ್ಕೆ ಮುಂದಾಗಿದ್ದಾರೆ.

 

 

ಮಾಜಿ ಮಂತ್ರಿ ಶ್ರೀಕಂಠಯ್ಯ ನವರ ಮೊಮ್ಮಗನಾಗಿರುವ ನಿಹನೇಶ್ ರವಿಕುಮಾರ್ ಜೊತೆ ನಿಖಿಲ್ ಅವರ ಮಾಜಿ ಪ್ರೇಯಸಿ ಸ್ವಾತಿ ಮದುವೆಯಾಗುತ್ತಿದ್ದಾರೆ. ಕಳೆದ ವರ್ಷವೇ ಇಬ್ಬರ ನಿಶ್ಚಿತಾರ್ಥ ಕೂಡ ನಡೆದಿದೆ, ಅನೇಕ ಗಣ್ಯರು ನಿಶ್ಚಿತಾರ್ಥಕ್ಕೆ ಆಗಮಿಸಿದ್ದಾರೆ. ಇನ್ನು ಈ ವರ್ಷ ಇಬ್ಬರು ಸಪ್ತಪದಿ ತುಳಿಯಲಿದ್ದಾರೆಂಬ ಮಾಹಿತಿ ಬಂದಿದೆ.

2015 ಮೇ 20ರಂದು ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ ಮತ್ತು ಖ್ಯಾತ ಸಿನಿಮಾ ನಿರ್ಮಾಪಕ ಕೆಸಿಎನ್​ ಮೋಹನ್ ಪುತ್ರಿ ಸ್ವಾತಿ ವಿವಾಹ ನಿಶ್ಚಿತಾರ್ಥ ನೆರವೇರಿತ್ತು. ಕೆಸಿಎನ್​ ಮೋಹನ್ ನಿವಾಸದಲ್ಲೇ ನಡೆದ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಎರಡು ಕುಟುಂಬದ ಸದಸ್ಯರು ಭಾಗಿಯಾಗಿದರು.. ನಿಶ್ಚಿತಾರ್ಥದ ನಂತರ ಹೆಚ್​ಡಿಕೆ ಮನೆಯ ಕಾರ್ಯಕ್ರಮಗಳಲ್ಲಿ ಸ್ವಾತಿ ಭಾಗವಹಿಸಿದರು. ಆದರೆ, ಕೆಲ ಕಾಲದ ನಂತರ ಮದುವೆ ವಿಚಾರ ನಿಂತೇ ಹೋಗಿತ್ತು.

ನಿಖಿಲ್​​​- ಸ್ವಾತಿ ಉಂಗುರ ಬದಲಿಸಿಕೊಂಡು ವರ್ಷಗಳೇ ಕಳೆದರೂ, ಮದುವೆ ಯಾಕೆ ತಡವಾಗ್ತಿದೆ ಅಂದಾಗಲೇ, ನಿಶ್ಚಿತಾರ್ಥ ಮುರಿದು ಬಿದ್ದಿದೆ ಅನ್ನೋ ಗುಲ್ಲೆದ್ದಿತ್ತು. ಆದರೆ ಯಾವ ಕಾರಣದಿಂದ ಇಬ್ಬರ ಸಂಬಂಧ ಮುರಿದು ಬಿತ್ತೋ ಗೊತ್ತಿಲ್ಲ. ಸದ್ಯ ನಿಖಿಲ್ ಬೇರೊಬ್ಬ ಹುಡುಗಿಯ ಹುಡುಗಾಟದಲ್ಲಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top