fbpx
ಸಮಾಚಾರ

ಸಿನಿಮಾ ನೋಡಲು ಬಂದವರಿಗೆ ಸಸಿ ವಿತರಣೆ.

ನಟ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಐಲವ್ಯೂ ಸಿನಿಮಾ ಮೊನ್ನೆ ಶುಕ್ರವಾರ ತೆರೆಕಂಡು ಭರ್ಜರಿ ಪ್ರದರ್ಶನ ಕಾಣುತ್ತಿದೆ.. ಉಪೇಂದ್ರ ಅವರ ಅಭಿಮಾನಿಗಳು ಹಾಗೂ ಪ್ರಜಾಕೀಯ ಪಕ್ಷದ ಕಾರ್ಯಕರ್ತರು ‘ಐ ಲವ್ ಯೂ’ ಸಿನಿಮಾ ನೋಡಲು ಬಂದ ವೀಕ್ಷಕರಿಗೆ ಸಸಿಗಳನ್ನು ವಿತರಿಸುವ ಮೂಲಕ ವಿಭಿನ್ನ ರೀತಿಯಲ್ಲಿ ನೆಚ್ಚಿನ ನಟನ ಸಿನಿಮಾವನ್ನು ಸಂಭ್ರಮಿಸಿದ್ದಾರೆ.

ರಾಮನಗರ ಜಿಲ್ಲೆಯ ಪ್ರಜಾಕೀಯ ಪಕ್ಷದ ಕಾರ್ಯಕರ್ತರು ಹಾಗೂ ಉಪ್ಪಿ ಅಭಿಮಾನಿಗಳು ರಾಮನಗರದ ಶಾನ್ ಥಿಯೇಟರ್ ಬಳಿ ಸಿನಿಮಾ ವೀಕ್ಷಣೆಗೆ ಬಂದ ವೀಕ್ಷಕರಿಗೆ ವಿವಿಧ ಜಾತಿಯ ಹಣ್ಣಿನ ಸಸಿಗಳನ್ನು ವಿತರಿಸಿದ್ದಾರೆ. ಪರಿಸರ ದಿನಾಚರಣೆಯನ್ನ ಉಪೇಂದ್ರ ಚಿತ್ರ ವೀಕ್ಷಣೆಗೆ ಬಂದ ಅಭಿಮಾನಿಗಳ ಜೊತೆ ಆಚರಿಸುವ ಮೂಲಕ ಸಿನಿಮಾ ಪ್ರೀಯರಿಗೆ 1,000ಕ್ಕೂ ಹೆಚ್ಚು ಸಸಿಗಳನ್ನು ವಿತರಿಸಿದ್ದಾರೆ.

ಇದೇ ವೇಳೆ ಸಸಿ ವಿತರಣೆ ಜೊತೆಗೆ ಸಾರ್ವಜನಿಕರು ಅನುಭವಿಸುತ್ತಿರುವ ಸಮಸ್ಯೆಗಳನ್ನ ತಿಳಿಸುವಂತೆ ಅರ್ಜಿಗಳನ್ನು ವಿತರಿಸಿದ್ದಾರೆ. ಬಳಿಕ ಸಾರ್ವಜನಿಕರ ದೂರನ್ನ ಆಡಳಿತ ಪಕ್ಷದ ಶಾಸಕರು, ಸಚಿವರ ಗಮನಕ್ಕೆ ತಂದು ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುವುದಾಗಿ ಭರವಸೆ ನೀಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top