fbpx
ಸಮಾಚಾರ

ಸಂಸ್ಕೃತಕ್ಕೂ ಗೋಕಾಕ್ ಚಳುವಳಿಗೂ ಏನು ಸಂಭಂದ.

ಅಂದು ಸಂಸ್ಕೃತ ಹೇರಿಕೆಯ ವಿರುದ್ಧ ನಡೆದಿತ್ತು ಗೋಕಾಕ್ ಚಳುವಳಿ: ನೇತೃತ್ವ ವಹಿಸಿದ್ದವರು ಡಾ.ರಾಜ್ ಕುಮಾರ್ ,ಅಂದು ಸಂಸ್ಕೃತದ ಹೇರಿಕೆಯ ವಿರುದ್ಧ ಶುರುವಾಗಿತ್ತು ಮಹಾಸಂಗ್ರಾಮ

ಸಂಸ್ಕೃತದ ಹೇರಿಕೆ:

ಅಂದು ೮ನೇ ತರಗತಿಯ ನಂತರ ಅಂದರೆ ಪ್ರೌಢಶಾಲೆಗಳಲ್ಲಿ ಕನ್ನಡ, ಇಂಗ್ಲಿಷು, ತಮಿಳು, ತೆಲುಗು, ಮರಾಠಿ ಮುಂತಾದ ಆಡುಮಾತುಗಳ ಜೊತೆಗೆ ಸಂಸ್ಕೃತವೂ ಪ್ರಥಮ ಭಾಷೆಯಾಗಿತ್ತು. ಪ್ರೌಢಶಾಲೆಗಳಲ್ಲಿ ಮೊದಲ ಭಾಷೆಯಾಗಿ ಆರಿಸಿಕೊಂಡ ವಿದ್ಯಾರ್ಥಿಗಳಿಗೆ ಒಂದನೇ ತರಗತಿಯ ವಿದ್ಯಾರ್ಥಿಗಳಿಗೆ ಕಲಿಸುವ ಹಾಗೆ ಅಕ್ಷರಾಭ್ಯಾಸದಿಂದ ಶಿಕ್ಷಣ ಪ್ರಾರಂಭವಾಗುತ್ತಿತ್ತು.

ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಯು ಸಂಸ್ಕೃತವನ್ನು ಪ್ರಥಮಭಾಷೆಯಾಗಿ ಆರಿಸಿಕೊಂಡಿದ್ದರೆ ಬಹಳ ಸುಲಭವಾಗಿ ಸಣ್ಣ ಪಾಠಗಳನ್ನು ಕಲಿತು ಹೆಚ್ಚು ಮಾತೃಭಾಷೆಯ ಪಾಠ ಕಲಿತ ಹುಡುಗರಿಗಿಂತ ಇಂಗ್ಲಿಷ್ , ಕನ್ನಡ ಅಥವಾ ಬೇರೆ ಭಾಷೆಗಳಲ್ಲಿ ಸಂಸ್ಕೃತ ಪಾಠವನ್ನು ಬರೆದು ಅತಿ ಹೆಚ್ಚು ಅಂಕ ಗಳಿಸುತ್ತಿದ್ದರು ಇದು ಹೆಚ್ಚೆಚ್ಚು ವಿದ್ಯಾರ್ಥಿಗಳನ್ನು ಸಂಸ್ಕೃತವನ್ನು ಆಯ್ಕೆ ಮಾಡುವ ಹಾಗೆ ಮಾಡಿತ್ತು ಕನ್ನಡ ಓದುವ ಮಕ್ಕಳ ಸಂಖ್ಯೆ ಕಡಿಮೆಯಾಗಿತ್ತು.

ಸಂಸ್ಕೃತವನ್ನು ಮೊದಲ ಭಾಷೆಯ ಸ್ಥಾನದಿಂದ ತೆಗೆಯಬೇಕೆಂದು ಒತ್ತಾಯಿಸಿದರು ಕರ್ನಾಟಕದ ಕೆಲವು ವಿಚಾರವಂತರು ಹೋರಾಟ ಮಾಡುತ್ತಿದ್ದರು ಸಂಸ್ಕೃತದ ಪರ ವಿರೋಧಗಳ ಮಹಾ ಯುದ್ಧವೇ ನಡೆದಿತ್ತು.
ಕೊನೆಗೆ ಸಂಸ್ಕೃತ ಆಡುಭಾಷೆಗಳೊಡನೆ ಪ್ರಥಮ ಭಾಷೆಗಳ ಸಾಲಿನಲ್ಲಿ ಆಧ್ಯತೆ ನೀಡುವುದು ಸರಿಯಲ್ಲ ಎಂದು ಭಾವಿಸಿ ಕರ್ನಾಟಕ ಸರ್ಕಾರವು ೧೯೭೯ರ ಅಕ್ಟೋಬರ್‌ನಲ್ಲಿ ಒಂದು ಆಜ್ಞೆಯನ್ನು ಹೊರಡಿಸಿತು. ಅದರಂತೆ ಸಂಸ್ಕೃತವನ್ನು ತೃತೀಯ ಭಾಷೆಯಾಗಿ ಮಾತ್ರ ಓದಲು ಅವಕಾಶವಿತ್ತು.

ಕೊನೆಗೆ ವಿವಾದವನ್ನು ಉಚ್ಚ ನ್ಯಾಯಾಲಯಕ್ಕೆ ತೆಗೆದು ಕೊಂಡು ಹೋದರು ೫ನೇ ಜುಲೈ, ೧೯೮೦ರಂದು ಆಜ್ಞೆಯೊಂದನ್ನು ಹೊರಡಿಸಿ ಒಂದು ಸಮಿತಿಯನ್ನು ಕೋರ್ಟ್ ರಚನೆ ಮಾಡಿತು . ಡಾ| ವಿ. ಕೃ. ಗೋಕಾಕ ಇದರ ಅಧ್ಯಕ್ಷರು. ಶ್ರೀಯುತರಾದ ಜಿ.ನಾರಾಯಣ, ಎಸ್. ಕೆ. ರಾಮಚಂದ್ರರಾವ್, ತ. ಸು. ಶಾಮರಾವ್, ಕೆ. ಕೃಷ್ಣಮೂರ್ತಿ, ಎಚ್. ಪಿ. ಮಲ್ಲೇದೇವರು ಈ ಸಮಿತಿಯ ಇತರ ಸದಸ್ಯರುಗಳಾದರು.

ಅಂತೆಯೇ ಸಂಸ್ಕೃತ ಭಾಷೆಯನ್ನು ಅಭ್ಯಾಸ ಮಾಡಲು ಶಾಲೆಗಳಲ್ಲಿ ಉಳಿಸಿಕೊಳ್ಳಬೇಕೇ ?
ಕನ್ನಡ ಭಾಷೆಯ ಕ್ಷೀಣತೆಯ ಬಗ್ಗೆ ಬೇರೆ ಪರ್ಯಾಯ ಮಾರ್ಗವೇನು?
ಕನ್ನಡ ಭಾಷೆಯನ್ನು ಕಡ್ಡಾಯ ಮಾಡಿ ತ್ರಿಭಾಷಾ ಸೂತ್ರದಂತೆ ಉಳಿದ ಭಾಷೆಗಳನ್ನು ವಿದ್ಯಾರ್ಥಿಗಳ ಆಯ್ಕೆಗೆ ಬಿಟ್ಟು ಬಿಡುವುದೇ?

ಈ ವಿಚಾರಗಳ ಬಗ್ಗೆ ವರದಿ ನೀಡ ಬೇಕೆಂದು ಕೋರ್ಟ್ ಆದೇಶಿಸಿತು .

ಗೋಕಾಕ್ ವರದಿ:

ಪ್ರೌಢ ಶಿಕ್ಷಣದಲ್ಲಿ
ಕನ್ನಡವನ್ನು ಏಕೈಕ ಪ್ರಥಮಭಾಷೆಯಾಗಿ -೧೫೦ ಅಂಕಗಳನ್ನು ನಿಗಧಿಗೊಳಿಸಿತ್ತು .
ಮತ್ತೊಂದು ಭಾಷೆಯನ್ನು ದ್ವಿತೀಯ ಭಾಷೆಯಾಗಿ -೧೦೦ ಅಂಕಗಳಿಗೆ ನಿಗಧಿಗೊಳಿಸಿತ್ತು .
ವಿದ್ಯಾರ್ಥಿಯ ಆಯ್ಕೆಯ ಭಾಷೆಗೆ – ೫೦ ಅಂಕಗಳಿಗೆ ನಿಗಧಿಗೊಳಿಸಿತ್ತು .

ಅನೇಕರ ವಿರೋಧದ ನಡುವೆ ಆಗಿನ ಮುಖ್ಯಮಂತ್ರಿ ಶ್ರೀ ಗುಂಡೂರಾವ್ ರವರು ಈ ವರದಿಯನ್ನು ಕೈಬಿಟ್ಟಿದ್ದರು .

ಗೋಕಾಕ್ ಚಳುವಳಿ :

ಕೆಲವು ಸಾಹಿತಿಗಳು ಹಾಗು ಕನ್ನಡ ಭೋದಕ ಸಿಬ್ಬಂದಿಗಳಿಂದ ನಡೆಯುತ್ತಿದ್ದ ಚಳುವಳಿ ರಾಜ್ಯವ್ಯಾಪಿ ವಿಸ್ತಾರಗೊಳ್ಳಲು ವಿಫಲವಾಯ್ತು
ಕನ್ನಡದ ಮೇರು ನಟ ಡಾ.ರಾಜ್ ಕುಮಾರ್. ರಾಜ್ ಕುಮಾರ್ ಅಂದಿನ ಸಾಂಸ್ಕೃತಿಕಾ ಹೋರಾಟದ ರಾಯಭಾರಿಗಳು ಆದರೆ ಉತ್ತಮ ಎಂದು ಭಾವಿಸಿ ಸಾಹಿತಿಗಳು ರಾಜ್ ರನ್ನು ಹೋರಾಟಕ್ಕೆ ತರಲು ಸಫಲರಾದರು.

ಡಾ.ರಾಜ್ ಕುಮಾರ್ ಚಳುವಳಿಗೆ ಇಳಿದಿದ್ದೇ ತಡ ರಾಜ್ಯದಂತ ಕಾಡ್ಗಿಚ್ಚಿನಂತೆ ಚಳುವಳಿ ಹರಡಿ ಇಡೀ ಚಿತ್ರರಂಗವೇ ಅವರ ಜೊತೆ ನಿಂತಿತು , ಸ್ವಲ್ಪ ದಿನಗಳ ಮಟ್ಟಿಗೆ ಚಿತ್ರೀಕರಣ ಕಾರ್ಯಗಳನ್ನೆಲ್ಲ ನಿಲ್ಲಿಸಿ ಚಳುವಳಿಯಲ್ಲಿ ಪಾಲ್ಗೊಂಡಿತು , ಕಲಾವಿದರು, ನಿರ್ದೇಶಕರು, ನಿರ್ಮಾಪಕರು, ತಂತ್ರಜ್ಞರು ಸಕ್ರಿಯರಾಗಿ ಪಾಲ್ಗೊಂಡರು, ಮೆಚ್ಚಿನ ನಟರೊಂದಿಗೆ ಕೂಡಿ ಸಾಮಾನ್ಯ ಜನರು ಸಹ ಭಾಗವಹಿಸಿದರು , ಚಳುವಳಿ ರಾಜ್ಯದ ಇತರ ಜಿಲ್ಲೆಗಳಿಗೂ ಹರಡಿತು.


ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲೂ ಪ್ರವಾಸ ಮಾಡಿ ಗೋಕಾಕ್ ವರದಿ ಜಾರಿಯನ್ನು ಸರ್ಕಾರಕ್ಕೆ ಆಗ್ರಹಿಸುತ್ತಿದ್ದರು.

ಚಳುವಳಿಯ ತೀವ್ರ ಸ್ವರೂಪವನ್ನು ಅರಿತ
ಆಗಿನ ಕರ್ನಾಟಕದ ಮುಖ್ಯಮಂತ್ರಿಗಳಾದ ಆರ್.ಗುಂಡೂರಾವ್ ಗೋಕಾಕ್ ಸಮಿತಿ ಸಲ್ಲಿಸಿದ್ದ ವರದಿಯನ್ನು ಪುರಸ್ಕರಿಸಿದರು, ವರದಿಯಲ್ಲಿ ಉಲ್ಲೇಖಿಸಿದ್ದ ಪ್ರಕಾರ ಕನ್ನಡ ಭಾಷೆಗೆ ವಿಶೇಷ ಸ್ಥಾನ ಮಾನಗಳ ಜೊತೆಗೆ ಮೊದಲ ಭಾಷೆಯ ಸ್ಥಾನವನ್ನು ಕೊಡಲಾಯಿತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top