fbpx
ಸಮಾಚಾರ

“ರಾಜ್ಯದ 25 ಸಂಸದರು ಇನ್ನೆರಡು ತಿಂಗಳಲ್ಲಿ ಕಡ್ಡಾಯವಾಗಿ ಹಿಂದಿ ಕಲಿಯಲೇಬೇಕು” ಅಮಿತ್ ಶಾ ಸೂಚನೆ.

ಕರ್ನಾಟಕದಿಂದ ಲೋಕಸಭೆಗೆ ಆಯ್ಕೆಯಾಗಿರುವ ಬಿಜೆಪಿಯ ಎಲ್ಲಾ ಸಂಸದರು ಕಡ್ಡಾಯವಾಗಿ ಹಿಂದಿ ಕಲಿಯಲೇಬೇಕು ಎಂದು ಕೇಂದ್ರ ಸಚಿವ ಅಮಿತ್​ ಶಾ ಆದೇಶಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ..

ಸಂಸದರು ದೆಹಲಿಯಲ್ಲಿ ವ್ಯವಹರಿಸಬೇಕಾದರೆ ಹಿಂದಿ ಭಾಷೆ ಗೊತ್ತಿರುವುದು ಅತಿ ಮುಖ್ಯ, ಆದ್ದರಿಂದ ಕರ್ನಾಟಕದ ಸಂಸದರು ಕಡ್ಡಾಯವಾಗಿ ಹಿಂದಿ ಕಲಿಯಬೇಕಾಗಿದೆ ಎಂದು ಅಮಿತ್ ಶಾ ಯಡಿಯೂರಪ್ಪ ಮೂಲಕ ರಾಜ್ಯದ ಸಂಸದರಿಗೆ ಸೂಚಿಸಿದ್ದಾರೆ ಎಂದು ಹೇಳಿದ್ದಾರಂತೆ.

“ಸದ್ಯ ರಾಜ್ಯದ 25 ಸಂಸದರ ಪೈಕಿ ಕೆಲವರು ಇನ್ನು ಹಿಂದಿ ಭಾಷೆ ಕಲಿಯಬೇಕಾಗಿದೆ. ಈ ಎಲ್ಲಾ ಸಂಸದರಿಗೂ ನೀವು ಇನ್ನು 2 ತಿಂಗಳಲ್ಲಿ ಹಿಂದಿಯನ್ನು ಕಲಿಯಬೇಕು. ಇಲ್ಲವಾದಲ್ಲಿ ಲೋಕಸಭೆಯಲ್ಲಿ ವ್ಯವಹರಿಸುವುದು ಕಷ್ಟವಾಗುತ್ತದೆ. ಲೋಕಸಭೆಯಲ್ಲಿ ನೀವು ಉತ್ತಮವಾಗಿ ವ್ಯವಹರಿಸಬೇಕು ಅಂದರೆ ಹಿಂದಿ ಭಾಷೆ ನಿಮಗೆ ಕಡ್ಡಾಯವಾಗಿ ಬರಲೇಬೇಕು” ಎಂದು ತಿಳಿಸಿದ್ದಾರೆ ಎನ್ನಲಾಗಿದೆ.

ವಿಶೇಷ ಅಂದರೆ ರಾಜ್ಯದ ಬಹುತೇಕ ಸಂಸದರಿಗೆ ಹಿಂದಿ ಚೆನ್ನಾಗಿಯೇ ಬರುತ್ತದೆ. ಆದರೆ ಕೆಲವು ಸಂಸದರಿಗಷ್ಟೆ ಹಿಂದಿ ಭಾಷೆಯ ಮೇಲೆ ಹಿಡಿತ ಸ್ವಲ್ಪ ಕಡಿಮೆ. ಹಾಗಾಗಿ ಅಮಿತ್ ಶಾ ಅವರ ಷರತ್ತು ನಮ್ಮ ರಾಜ್ಯದ ಬಿಜೆಪಿ ಸಂಸದರನ್ನು ಹೆಚ್ಚೇನೂ ತೊಂದರೆ ಕೊಡುವುದಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top