fbpx
ಸಮಾಚಾರ

ಬಾಡಿಗೆ ಮನೆ ವಸ್ತುಗಳ ಡ್ಯಾಮೇಜ್​ ಪ್ರಕರಣ: ಯಶ್ ಕುಟುಂಬಕ್ಕೆ ಬಿಗ್ ರಿಲೀಫ್.

ರಾಕಿಂಗ್ ಸ್ಟಾರ್ ಯಶ್​​ ಬಾಡಿಗೆ ಮನೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಯಶ್​​ ಬಾಡಿಗೆ ಮನೆ ಖಾಲಿ ಮಾಡುವಾಗ ಗೃಹ ಬಳಕೆ ವಸ್ತುಗಳನ್ನು ಹಾಳು ಮಾಡಿತ್ತು ,ಹಾಗೂ ಮನೆಗೆ ಹಾನೀಯನ್ನುಂಟು ಮಾಡಿದ್ದರು ಎಂದು ಆರೋಪಿಸಿ ಮನೆ ಮಾಲೀಕರು ದಾಖಲಿಸಿದ್ದ ಎಫ್​​ಐಆರ್​​ ನ್ನು ರದ್ದುಗೊಳಿಸಿ ಆದೇಶ ನೀಡಿದೆ.

ಮನೆ ಖಾಲಿ ಮಾಡುವ ವೇಳೆ ಮನೆಯಲ್ಲಿನ ವಸ್ತುಗಳನ್ನು ಧ್ವಂಸ ಮಾಡಲಾಗಿದೆ. ಕೆಲ ಬಾಗಿಲೇ ನಾಪತ್ತೆ ಆಗಿವೆ. ಮನೆಯಲ್ಲಿದ್ದ ಟ್ಯೂಬ್ ಲೈಟ್‌ಗಳು ಕಾಣುತ್ತಿಲ್ಲ. ಬಾತ್ ರೂಂನ ಕಮೋಡ್​ ಒಡೆದು ಹಾಕಿದ್ದಾರೆ. ಹೀಗಾಗಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುಬೇಕು,” ಎಂದು ದಂಪತಿ ಗಿರಿನಗರ ಪೊಲೀಸ್ ಠಾಣೆಯಲ್ಲಿ ಮತ್ತೊಂದು ದೂರು ದಾಖಲಿಸಿದ್ದರು. ಎಫ್​​ಐಆರ್​​ ಕೂಡ ದಾಖಲಾಗಿತ್ತು.

ಬಳಿಕ ಇದೇ ಪ್ರಕರಣ ಪ್ರಶ್ನಿಸಿ ಯಶ್​​ ತಾಯಿ ಪುಷ್ಪಾ ಅವರು ಕೂಡ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯ ಸೂಚಿಸಿದಂತೆ ಬಾಕಿ ಹಣ ಪಾವತಿಸಿ ಬಾಡಿಗೆ ಮನೆ ಖಾಲಿ ಮಾಡಿದ್ದೇವೆ. ಮನೆ ಖಾಲಿ ಮಾಡುವ ವೇಳೆ ಕೆಲವು ವಸ್ತುಗಳು ಸಣ್ಣಪುಟ್ಟ ಹಾನಿಗೀಡಾಗಿವೆ. ಇದಕ್ಕಾಗಿ ಪರಿಹಾರ ಕೋರಿರುವುದು ಎಷ್ಟು ಸರಿ ಎಂದು ನ್ಯಾಯಾಲಯದಲ್ಲಿ ಪುಷ್ಪಾ ಪ್ರಶ‍್ನಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್​ ಎಫ್​ಐಆರ್​ನ್ನು ರದ್ದುಗೊಳಿಸಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top