fbpx
ಸಮಾಚಾರ

ಈ ದೇಶದ ಪ್ರಧಾನಿ ಬಿಡುವಿನ ವೇಳೆ ಏನು ಮಾಡ್ತಾರೆ ಗೊತ್ತಾ?

ಸರ್ಕಾರದ ಕೆಲಸ ಕಾರ್ಯಗಳಲ್ಲೇ ಮುಳುಗಿ ಹೋಗುವ ಹೆಚ್ಚೆಂದರೆ ಅಲ್ಲೊಂದು ಇಲ್ಲೊಂದು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ರಾಜಕಾರಣಿಗಳನ್ನು, ಪ್ರಧಾನ ಮಂತ್ರಿಗಳನ್ನು ಮುಖ್ಯ ಮಂತ್ರಿಗಳನ್ನು ನಾವು ನೋಡಿರ್ತಿವಿ. ಆದರೆ ಈ ದೇಶದ ಪ್ರಧಾನ ಮಂತ್ರಿ ಉಳಿದೆಲ್ಲ ರಾಜಕಾರಣಿಗಳಂತಲ್ಲ ತಮ್ಮ ವಿಭಿನ್ನ ನಡೆ ಹಾಗೂ ಸಾಮಾಜಿಕ ಕಳಿ ಕಳಿಯಿಂದಲೇ ರಾಜಕೀಯದ ಹೊರತಾಗಿಯೂ ತಮ್ಮ ದೇಶದ ಪ್ರಜೆಗಳಿಗೆ ಹತ್ತಿರವಾಗಿದ್ದಾರೆ.

ಹೌದು, ಭೂತಾನ್ ದೇಶದ ಡಾ. ಲೊತಯ್ ಶೆರಿಂಗ್ 2018 ಚುನಾವಣೆಯಲ್ಲಿ ಆಯ್ಕೆಯಾಗಿ ಪ್ರಧಾನಿ ಪಟ್ಟಕ್ಕೇರಿದ್ದರು. ದೇಶದ ಅತ್ಯುನ್ನತ ಪ್ರಧಾನಿ ಹುದ್ದೆಯನ್ನು ಅಲಂಕರಿಸಿದ್ದರು, ಪ್ರಧಾನಿಯಾಗುವ ಮುನ್ನ ಲೊತಯ್‌ ವೃತ್ತಿ ಜೀವನದಲ್ಲಿ ವೈದ್ಯರಾಗಿದ್ದವರು. ಆ ಕಾರಣಕ್ಕೆ ಈಗಲೂ ವೈದ್ಯ ವೃತ್ತಿಯನ್ನು ಮುಂದುವರೆಸಿರುವ ಲೊತಯ್ ಕೆಲಸದ ಒತ್ತಡದ ನಡುವೆಯೂ ಬಿಡುವು ಮಾಡಿಕೊಂಡು ಪ್ರತಿ ವಾರದ ಶನಿವಾರದ ದಿನದಂದೂ ಜಿಗ್ಮೆ ದೊರ್ಜಿ ವಂಗ್ ಚಕ್ ನ್ಯಾಷನಲ್ ರೆಫರೆಲ್ ಆಸ್ಪತ್ರೆಗೆ ತೆರಳಿ ರೋಗಿಗಳ ಆರೋಗ್ಯ ವಿಚಾರಿಸಿ ಸೂಕ್ತ ಚಿಕಿತ್ಸೆ ನೀಡುತ್ತಾರೆ.

ಬಾಂಗ್ಲಾದೇಶ, ಜಪಾನ್, ಆಸ್ಟ್ರೇಲಿಯಾ ಹಾಗೂ ಅಮೇರಿಕಾ ದೇಶಗಳಲ್ಲಿ ವೈದ್ಯಕೀಯ ತರಬೇತಿ ಪಡೆದಿರುವ ಡಾ.ಲೊತಯ್. 2013ರ ನಂತರ ರಾಜಕೀಯ ಜೀವನದತ್ತ ಮುಖ ಮಾಡಿದ್ದರು. 2018 ರ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಿ ಬಹುಮತದಿಂದ ಪ್ರಧಾನಿಯಾಗಿ ಆಯ್ಕೆಯಾಗಿದ್ದರು.

ಪ್ರತಿ ಶನಿವಾರದಂದು ಆಸ್ಪತ್ರೆಗೆ ಭೇಟಿ ನೀಡುವ ಲೊತಯ್ ರೋಗಿಗಳ ಸೇವೆಗೆ ಸಮಯವನ್ನು ಮೀಸಲಿಡುವುದರ ಜೊತೆಗೆ ಗುರುವಾರದಂದು ಡಾಕ್ಟರ್ ತರಬೇತಿ ಪಡೆಯುವವರಿಗೆ ಇತರ ವೈದ್ಯರ ತಂಡದೊಂದಿಗೆ ಸಲಹೆ ಸೂಚನೆಗಳನ್ನು ನೀಡುತ್ತಾರೆ. ರವಿವಾರದಂದು ಮಾತ್ರ ತಮ್ಮ ಕುಟುಂಬದೊಂದಿಗೆ ಸಮಯ ಕಳೆಯುತ್ತಾರೆ.

ಹೆಚ್ಚಿನ ಸಮಯವನ್ನು ಸರ್ಕಾರದ ಸೇವೆಯಲ್ಲಿಯೇ ಕಳೆಯುವ ಲೊತಯ್ ಶೆರಿಂಗ್ ವಾರಂತ್ಯದಲ್ಲಿ ರೋಗಿಗಳ ಆರೋಗ್ಯ ವಿಚಾರಿಸಿಕೊಳ್ಳುತ್ತಾರೆ ಈ ಬಗ್ಗೆ ಲೊತಯ್ ಹೇಳುವುದು ಹೀಗೆ ” ಹಲವರಿಗೆ ಗಾಲ್ಫ್ ಆಡುವ ಆರ್ಚರಿ ಮಾಡುವ ಹವ್ಯಾಸವಿರುತ್ತದೆ. ಹಾಗೆಯೇ ಇದು ಕೂಡ ನನ್ನ ನೆಚ್ಚಿನ ಹವ್ಯಾಸ. ಪ್ರತಿ ದಿನವೂ ಮನೆಯಿಂದ ಸರಕಾರದ ಕೆಲಸದ ನಿಮಿತ್ತ ಕಚೇರಿಯತ್ತ ತೆರಳುವಾಗ ಆಸ್ಪತ್ರೆಯತ್ತ ಸಾಗುವ ಮನಸ್ಸಾಗುತ್ತದೆ ಆದ್ದರಿಂದ ವಾರದ ಒಂದು ದಿನವನ್ನು ಹೀಗೆ ಕಳೆಯಲು ಇಚ್ಛಿಸುತ್ತೇನೆ” ಎಂದು ಪ್ರಧಾನಿ ಲೊತಯ್ ಹೇಳುತ್ತಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top