fbpx
ಸಮಾಚಾರ

ವಿಷ್ಣು ಸ್ಮಾರಕ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ರೈತರ ಪ್ರತಿಭಟನೆ.

ವಿಷ್ಣುವರ್ಧನ್​ ದೈಹಿಕವಾಗಿ ನಮ್ಮಿಂದ ದೂರವಾಗಿ 10 ವರ್ಷಗಳು ಕಳೆದರೂ ಸ್ಮಾರಕದ ಗೊಂದಲ ಇನ್ನೂ ಬಗೆಹರಿದಿಲ್ಲ ಎಂಬ ಕೊರಗು ವಿಷ್ಣು ಕುಟುಂಬಸ್ಥರು ಹಾಗೂ ಅಭಿಮಾನಿಗಳನ್ನು ಚಿಂತೆಯ ಮಡುವಿಗೆ ತಳ್ಳಿದೆ.. ಇತ್ತೀಚಿಗೆ ವಿಷ್ಣುವರ್ಧನ್​ ಸ್ಮಾರಕ ನಿರ್ಮಾಣಕ್ಕೆ ಕೋರ್ಟ್ ಆದೇಶ ನೀಡಿದ ನಂತರವೂ ಸ್ಮಾರಕ ನಿರ್ಮಾಣಕ್ಕೆ ಅಡೆತಡೆಗಳು ಎದುರಾಗುತ್ತಿದ್ದು, ಸ್ಮಾರಕ ನಿರ್ಮಾಣಕ್ಕೆ ಮುಂದಾದಾಗ ರೈತರು ತಡೆದ ಘಟನೆ ನಡೆದಿದೆ.

ಮೈಸೂರು ತಾಲೂಕು ಉದ್ಬೂರು ಸಮೀಪ ಸ್ಥಳ ನಿಯುಕ್ತಿ ಮಾಡಿದ್ದ ಜಿಲ್ಲಾಡಳಿತ ಸ್ಮಾರಕ್ಕೆ ನೀಡಿದ್ದ ಭೂಮಿಗೆ ಸಂಬಂಧಪಟ್ಟಂತೆ, ಸ್ಮಾರಕ ನಿರ್ಮಾಣ ರದ್ದು ಕೋರಿ ಕೋರ್ಟ್ ಮೆಟ್ಟಿಲೇರಿದ್ದ ಮಹದೇವಮ್ಮ ಹಾಗೂ ಕೆಲ ಗ್ರಾಮಸ್ಥರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ ಕೆಳಹಂತದ ನ್ಯಾಯಾಲಯ ನೀಡಿದ ಆದೇಶವನ್ನು ರದ್ದು ಮಾಡಿ ವಿಷ್ಣು ಸ್ಮಾರಕಕ್ಕೆ ಗ್ರೀನ್ ಸಿಗ್ನಲ್ ನೀಡಿತ್ತು.

ಕೋರ್ಟ್​ನಿಂದ ತಡೆ ತಂದವರು ಕೋರ್ಟ್​ಗೆ ನಾಲ್ಕು ಬಾರಿ ಹಾಜರಾಗದ ಹಿನ್ನೆಲೆ ಕೋರ್ಟ್​ ತಡೆಯಾಜ್ಞೆಯನ್ನು ತೆರವುಗೊಳಿಸಿ ಸ್ಮಾರಕ ನಿರ್ಮಾಣಕ್ಕೆ ಆದೇಶಿಸಿತ್ತು. ಈಗ ಸ್ಮಾರಕ ನಿರ್ಮಾಣಕ್ಕೆ ಬಂದಂತಹವರನ್ನು ರೈತರು ತಡೆದ ಹಿನ್ನೆಲೆ ಮತ್ತೆ ಕಾಮಗಾರಿ ಸ್ಥಗಿತಗೊಂಡಿದೆ. ಹೀಗಾಗಿ ಸ್ಮಾರಕ ನಿರ್ಮಾಣ ಕಾಮಗಾರಿಗೆ ಮತ್ತೆ ವಿಘ್ನ ಎದುರಾಗಿದೆ.

2016 ರ ಡಿಸೆಂಬರ್ 6 ರಂದು ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಷ್ಣು ಸ್ಮಾರಕಕಕ್ಕೆ ನೀಡಿದ್ದ ಭೂಮಿಗೆ ಸಂಬಂಧಪಟ್ಟಂತೆ ಮಹದೇವಮ್ಮ ಹಾಗೂ ಕೆಲ ಗ್ರಾಮಸ್ಥರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಹೀಗಾಗಿ, ವಿಷ್ಣುವರ್ಧನ್ ಸ್ಮಾರಕದ ಕೆಲಸ ಅಲ್ಲಿಗೆ ನಿಂತು ಹೋಗಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top