fbpx
ಸಮಾಚಾರ

ಫೋಟೋದಲ್ಲಿ ಬುಮ್ರಾ ಜೊತೆ ಇರುವುದು ಅನುಪಮನಾ? ಸಾಮಾಜಿಕ ಜಾಲತಾಣದಲ್ಲಿ ಬಿಸಿ ಬಿಸಿ ಚರ್ಚೆ.

ಟೀಂ ಇಂಡಿಯಾದ ಡೆತ್ ಓವರ್ ಸ್ಪೆಷಲಿಸ್ಟ್ ಜಸ್ಪ್ರೀತ್ ಬುಮ್ರಾ ಜತೆ ದಕ್ಷಿಣ ಭಾರತದ ನಟಿ ಅನುಪಮಾ ಪರಮೇಶ್ವರನ್ ಹೆಸರು ತಳುಕು ಹಾಕಿಕೊಂಡಿದೆ. ಪುನಿತ್ ರಾಜ್ ಕುಮಾರ್ ಜತೆ ನಟಸಾರ್ವಭೌಮ ಚಿತ್ರದಲ್ಲಿ ನಟಿಸಿದ್ದ ಅನುಪಮಾ ಪರಮೇಶ್ವರನ್ ಜತೆಗೆ ಬಮ್ರಾ ಅವರದ್ದು ಸ್ನೇಹಾನಾ..? ಪ್ರೀತಿನಾ..? ಎನ್ನುವ ಚರ್ಚೆಗಳು ಕೆಲದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಚಾಲ್ತಿಯಲ್ಲಿವೆ.

 

 

ಹೀಗಿರುವಾಗಲೇ ಜಸ್ಪ್ರೀತ್ ಬುಮ್ರಾ ತಮ್ಮ ಟ್ವಿಟ್ಟರ್ ನಲ್ಲಿ ಫೋಟೋವೊಂದು ಶೇರ್ ಮಾಡಿದ್ದು ಈಗ ಎಲ್ಲೆಡೆ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಫೋಟೋದಲ್ಲಿಅದರಲ್ಲಿ ಮಹಿಳೆಯೊಬ್ಬರ ಹೆಗಲ ಮೇಲೆ ಕೈ ಇಟ್ಟುಕೊಂಡು ಹೋಗುವ ದೃಶ್ಯವಿದೆ. ಏನೇ ಇರಲಿ, ಯಾವಾಗಲೂ ನನ್ನನ್ನು ಬೆಂಬಲಿಸುವ ಹೆಗಲು ಇದು ಎಂದು ಬರೆದುಕೊಂಡಿದ್ದರು. ಹೆಗಲ ಮೇಲೆ ಕೈ ಹಾಕಿರುವ ಅವರ ಬೆನ್ನು ಮಾತ್ರ ಫೋಟೋಗೆ ಪೋಸ್ ನೀಡಿದೆ. ಬುಮ್ರಾ ಜೊತೆ ಇರುವ ಮಹಿಳೆ ಯಾರು ಎನ್ನುವುದು ಸ್ಪಷ್ಟವಾಗಿ ಗೊತ್ತಾಗುತ್ತಿಲ್ಲ.

ಇದು ಅನುಪಮನಾ ಅಂತ ಅನೇಕರು ಕಮೆಂಟ್ಸ್ ಮಾಡುತ್ತಿದ್ದಾರೆ. ಇನ್ನು ಮತ್ತೆ ಕೆಲವರು ಇಲ್ಲ ಇದು ಬೂಮ್ರಾ ತಾಯಿ ಎಂದಿದ್ದಾರೆ. ಒಟ್ಟಿನಲ್ಲಿ ಬುಮ್ರಾ ಹಾಕಿರುವ ಫೋಟೊ ಇದೀಗ ಸಾಕಷ್ಟು ಊಹಾಪೋಹಗಳಿಗೆ ಎಡೆಯಾಗಿರುವುದಂತೂ ಸುಳ್ಳಲ್ಲ.

ಇದಕ್ಕೆಲ್ಲಾ ಕಾರಣ ಟ್ವಿಟ್ಟರ್:
ಬುಮ್ರಾ ಅವರು ಕೇವಲ 25 ಮಂದಿಯನ್ನು ಟ್ವಿಟ್ಟರ್ ನಲ್ಲಿ ಫಾಲೋ ಮಾಡುತ್ತಿದ್ದಾರೆ. ಅದರಲ್ಲಿ ಬಹುತೇಕರು ಕ್ರಿಕೆಟಿಗರೇ ಆಗಿದ್ದಾರೆ. ಅವರ ಮಧ್ಯೆ ನಟಿ ಅನುಪಮಾ ಹೆಸರು ಕಂಡು ಬಂದಿದೆ. ಅವರನ್ನು ಫಾಲೋ ಮಾಡುವುದರ ಜೊತೆಗೆ ಅವರ ಫೋಟೋಗೆ ಲೈಕ್ ಕೊಟ್ಟಿದ್ದಾರೆ. ಇತ್ತ ಅನುಪಮಾ ಅವರು ಕೂಡ ಬುಮ್ರಾ ಅವರ ಟ್ವಿಟ್ಟರ್ ಅನ್ನು ಫಾಲೋ ಮಾಡುತ್ತಿದ್ದಾರೆ. ಬುಮ್ರಾ ಮಾಡಿರುವ ಟ್ವೀಟ್‍ಗೆ ಲೈಕ್ ನೀಡಿದ್ದಾರೆ. ಇನ್ನು ಇಬ್ಬರ ನಡುವೆ ಟ್ವೀಟ್ ಗಳು ಸಹ ವಿನಿಮಯವಾಗಿದೆ. ಈ ಎಲ್ಲಾ ವಿಚಾರಗಳಿಂದ ಬುಮ್ರಾ ಮತ್ತು ಅನುಪಮಾ ಲವ್ ನಲ್ಲಿ ಬಿದ್ದಿದ್ದಾರ ಎಂಬ ಅನುಮಾನಗಳಿಗೆ ಕಾರಣವಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top