fbpx
ಸಮಾಚಾರ

ಗಾಯಾಳು ಧವನ್ ಜಾಗಕ್ಕೆ ಯುವ ಆಟಗಾರ ರಿಷಬ್ ಪಂತ್ ಆಯ್ಕೆ!

ಎಡಗೈ ಹೆಬ್ಬೆರಳಿಗೆ ಗಾಯವಾಗಿದ್ದ ಹಿನ್ನೆಲೆಯಲ್ಲಿ ಮೂರು ವಾರಗಳ ಕಾಲ ವಿಶ್ವಕಪ್ ನಿಂದ ಹೊರ ಉಳಿದಿದ್ದ ಟೀಂ ಇಂಡಿಯಾದ ಆರಂಭಿಕ ಆಟಗಾರ ಶಿಖರ್​ ಧವನ್​ ವಿಶ್ವಕಪ್ ನಿಂದಲೇ ಔಟ್ ಆಗಿದ್ದಾರೆ. ಇನ್ನೂ ಗುಣಮುಖರಾದ ಕಾರಣ ಟೂರ್ನಿಯಿಂದಲೇ ಧವನ್​ರನ್ನು ಕೈಬಿಡಲಾಗಿದ್ದು, ಅವರ ಬದಲಿಗೆ ರಿಷಭ್​ ಪಂತ್​ಗೆ ಸ್ಥಾನವನ್ನು ನೀಡಲಾಗಿದೆ ಎಂದು ಬುಧವಾರ ಬಿಸಿಸಿಐ ತಿಳಿಸಿದೆ.

 

 

ಧವನ್ ಅವರ ಮೇಲೆ ಬಿಸಿಸಿಐ ವೈದ್ಯಕೀಯ ತಂಡವು ಒಂದು ವಾರದ ನಿಗಾ ವಹಿಸಲು ನಿರ್ಧರಿಸಿತ್ತು. ಇನ್ನೊಂದೆಡೆ ಗುಣಮುಖರಾಗಲು ಕನಿಷ್ಠ ಮೂರು ವಾರ ಬೇಕಿದೆ ಎಂಬ ವರದಿಗಳು ಬಂದಿದ್ದವು. ಸದ್ಯ ನಿಗದಿತ ಅವಧಿಯೊಳಗೆ ಧವನ್ ಚೇತರಿಕೆ ಅಸಾಧ್ಯ ಎಂಬುದು ಕಂಡುಬಂದ ಹಿನ್ನಲೆಯಲ್ಲಿ ವಿಶ್ವಕಪ್ ತಂಡದಿಂದ ನಿರ್ಗಮಿಸಬೇಕಾಗಿ ಬಂದಿದೆ.

ಜೂನ್​ 9ರಂದು ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧ ಕನ್ನಿಂಗ್ಟನ್​ ಓವಲ್​ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಶಿಖರ್​ ಧವನ್​ ಅವರ ಎಡಗೈ ಹೆಬ್ಬೆರಳಿಗೆ ಚೆಂಡು ಬಡಿದಿತ್ತು. ಹೆಬ್ಬೆರಳ ನೋವಿನಿಂದ ಬಳಲುತ್ತಿದ್ದ ಧವನ್​ ಪಂದ್ಯದ ಬಳಿಕ ಬೆರಳನ್ನು ಸ್ಕ್ಯಾನ್​ ಮಾಡಿಸಿದ್ದರು. ಬೆರಳಿಗೆ ಗಾಯವಾಗಿ, ಊದಿಕೊಂಡಿರುವುದು ವರದಿಯಲ್ಲಿ ಬಹಿರಂಗವಾಗಿತ್ತು.

ಪಂತ್ ಗೆ ಸ್ಥಾನ:
ಗಾಯಾಳು ಧವನ್ ವಿಶ್ವಕಪ್ ನಿಂದಲೇ ಹೊರ ಬಿದ್ದಿರುವ ಕಾರಣ ಯುವ ಆಟಗಾರ ರಿಷಬ್ ಪಂತ್ ಅವರಿಗೆ ಸ್ಥಾನ ನೀಡಲಾಗಿದೆ. ಅಲ್ಲದೆ ಆಗಲೇ ಇಂಗ್ಲೆಂಡ್ ತಲುಪಿರುವ ಪಂತ್ ಅಭ್ಯಾಸವನ್ನು ಆರಂಭಿಸಿದ್ದಾರೆ. ಇದೀಗ ಧವನ್ ಅಲಭ್ಯವಾಗಿರುವ ಹಿನ್ನಲೆಯಲ್ಲಿ ಅಧಿಕೃತವಾಗಿ ತಂಡವನ್ನು ಸೇರಿಕೊಳ್ಳಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top