fbpx
ಸಮಾಚಾರ

ಅಫ್ಘಾನ್ ಎದುರಿನ ಪಂದ್ಯದಲ್ಲಿ ಟೀಮ್ ಇಂಡಿಯಾಗೆ ಕೇಸರಿ ಜರ್ಸಿ?

ವಿಶ್ವಕಪ್ ನಲ್ಲಿ ಉತ್ತಮ ಆರಂಭ ಪಡೆದುಕೊಂಡಿರುವ ಟೀಮ್ ಇಂಡಿಯಾ ತನ್ನ ಮುಂದಿನ ಪಂದ್ಯವನ್ನು ಇದೆ ಶನಿವಾರ ಅಫ್ಘಾನಿಸ್ತಾನದ ಎದುರು ಆಡಲಿದೆ.. ವಿಶೇಷವೆಂದರೆ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ನೀಲಿ ಬಣ್ಣದ ಜೆರ್ಸಿಯ ಬದಲಾಗಿ ಕೇಸರಿ ಬಣ್ಣದ ಜರ್ಸಿ ತೊಟ್ಟು ಕಣಕ್ಕಿಳಿಯಲಿದ್ದಾರೆ. ಯಾಕೆ ಅಂತೀರಾ? ಮುಂದೆ ಓದಿ.

ಭಾರತ, ಇಂಗ್ಲೆಂಡ್, ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ್ ತಂಡಗಳ ಜೆರ್ಸಿಯು ನೀಲಿ ಬಣ್ಣದಿಂದ ಕೂಡಿದೆ. ಹಾಗಾಗಿ ಈ ತಂಡಗಳು ಪರಸ್ಪರ ಎದುರು ಕಣಕ್ಕಿಳಿದಾಗ ಆಯಾ ತಂಡಗಳ ಜೆರ್ಸಿ ಬಣ್ಣ ಬದಲಾಗುತ್ತದೆ. ಇಲ್ಲಿ ಇಂಗ್ಲೆಂಡ್ ಹೊರತುಪಡಿಸಿ ಇತರೆ ಮೂರು ತಂಡಗಳ ಜೆರ್ಸಿ ಬಣ್ಣ ಬದಲಾಗಲಿದೆ. ಹಾಗಾಗಿ ಇಂಗ್ಲೆಂಡ್, ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ್ ವಿರುದ್ಧ ಆರೆಂಜ್ ಜೆರ್ಸಿಯಲ್ಲಿ ವಿರಾಟ್ ಪಡೆ ಕಣಕ್ಕಿಳಿಯಲಿದೆಯಂತೆ.

ಈ ನಿಯಮ ಕೇವಲ ಭಾರತ ತಂಡಕ್ಕೆ ಮಾತ್ರ ಅನ್ವಯವಾಗುವುದಿಲ್ಲ ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ್ ತಂಡಗಳ ಸಮವಸ್ತ್ರದ ಬಣ್ಣಗಳು ಕೂಡ ಅದಾಗಲೇ ಬದಲಾಗಿವೆ.. ಹಾಗೆಯೇ ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ಮತ್ತು ಪಾಕಿಸ್ತಾನ ತಂಡಗಳ ಜೆರ್ಸಿಯಲ್ಲಿ ಹಸಿರು ಬಣ್ಣವಿರುವುದರಿಂದ ಈ ತಂಡಗಳು ಸಹ ಪರ್ಯಾಯ ಜೆರ್ಸಿ ಆಯ್ಕೆಯನ್ನು ಪಡೆದುಕೊಳ್ಳಲಿದೆ,. ಇನ್ನು ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ವೆಸ್ಟ್ ಇಂಡೀಸ್, ಮೂರು ತಂಡಗಳ ಜೆರ್ಸಿ ಕಲರ್​ ಡಿಫರೆಂಟ್ ಆಗಿರೋದ್ರಿಂದ, ಇವರಿಗೆ ಜೆರ್ಸಿ ಬದಲಾಯಿಸೋ ಅವಕಾಶವಿಲ್ಲ.

ಹೊಸ ನಿಯಮ :
ಫುಟ್ಬಾಲ್ ಮಾದರಿಯಲ್ಲಿ ಈ ಬಾರಿಯ ವಿಶ್ವಕಪ್​ನಲ್ಲಿ, ‘ಹೋಂ ಅಂಡ್ ಅವೇ’ ಮಾದರಿಯಲ್ಲಿ ಜೆರ್ಸಿಗಳನ್ನ ಪರಿಚಯಿಸಲಾಗ್ತಿದೆ. ಹೋಂನಲ್ಲಿ ಆಡೋ ತಂಡಗಳ ಜೆರ್ಸಿ ಮತ್ತು ಅವೇನಲ್ಲಿ ಆಡೋ ತಂಡಗಳ ಜೆರ್ಸಿ, ಬೇರೆ ಬೇರೆ ಕಾಣಲಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top