fbpx
ಸಮಾಚಾರ

ಮದುವೆಗೆ ಬರುವ ಅತಿಥಿಗಳಿಗೆ ಎಣ್ಣೆ ಫ್ರೀ- ವೈರಲ್ ಆದ ಡಿಫ್ರೆಂಟ್ ಲಗ್ನಪತ್ರಿಕೆ.

ಚಿತ್ರದುರ್ಗ ಜಿಲ್ಲೆಯ ವಿಶಿಷ್ಟ ಲಗ್ನಪತ್ರಿಕೆಯೊಂದು ಸಾಮಾಜಿಕ ಜಾಲತಾಣದಲ್ಲಿ ಸಕತ್ ಸದ್ದು ಮಾಡುತ್ತಿದೆ. ಯಾಕೆಂದರೆ ಲಗ್ನ ಪತ್ರಿಕೆಯಲ್ಲಿ ಮದುವೆಗೆ ಬರುವ ಅತಿಥಿಗಳಿಗೆ ಉಚಿತ ಎಣ್ಣೆ ವ್ಯವಸ್ಥೆ ಕಲ್ಪಿಸಿರುವುದಾಗಿ ಪ್ರಿಂಟ್ ಮಾಡಿರುವುದು ಇದಕ್ಕೆ ಕಾರಣವಾಗಿದೆ.

 


ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆಯಲಿರುವ ವೆಂಕಟೇಶ್ ದಿವ್ಯಾ ಮದುವೆಗೆ ತೆರಳುವವರಿಗೆ ಈ ಕೊಡುಗೆ ನೀಡಲಾಗುತ್ತದೆ. ಈ ವಿಷಯವನ್ನು ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಎಣ್ಣೆ ಬಾಟಲ್ ಚಿತ್ರದ ಸಮೇತ ಎಂದು ಮುದ್ರಣ ಮಾಡಲಾಗಿದೆ. ಮದುವೆಗೆ ಆಗಮಿಸುವ ಅತಿಥಿಗಳಿಗೆ ರಾತ್ರಿ 8 ಗಂಟೆಯಿಂದ ಉಚಿತ ಎಣ್ಣೆ ವ್ಯವಸ್ಥೆ ಇದೆ ಎಂದು ಮುದ್ರಿಸಿದ್ದಾರೆ. ಅತಿಥಿಗಳಿಗೆ ಬಂದವರಿಗೆ ಎಣ್ಣೆ ವ್ಯವಸ್ಥೆ ಮಾಡಲು ಆಹ್ವಾನ ಪತ್ರಿಕೆಯಲ್ಲಿ ಪ್ರತ್ಯೇಕ ವ್ಯಕ್ತಿಯ ಹೆಸರನ್ನೂ ಮುದ್ರಣ ಮಾಡಲಾಗಿದೆ.

ಅತಿಥಿಗಳಿಗೆ ಉಚಿತ ಎಣ್ಣೆ ವ್ಯವಸ್ಥೆ ಕಲ್ಪಿಸಿದ್ದರೂ, ಆಹ್ವಾನ ಪತ್ರಿಕೆಯ ಮೂಲೆಯೊಂದರಲ್ಲಿ ‘ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ’ ಎಂಬ ಸಾಲುಗಳನ್ನು ಕೂಡ ಪ್ರಿಂಟ್ ಮಾಡಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top