fbpx
ಸಮಾಚಾರ

ಹಿರಿಯ ರಾಜಕಾರಣಿ ಎಸ್.ಎಂ. ಕೃಷ್ಣಗೆ ಒಲಿದ ಮತ್ತೊಂದು ಗೌರವ.

ಹಿರಿಯ ರಾಜಕಾರಣಿ ಮತ್ತು ಬಿಜೆಪಿ ನಾಯಕ ಎಸ್.ಎಂ ಕೃಷ್ಣ ಅವರಿಗೆ ಇದೀಗ ಹೊಸ ಗೌರವ ಒಲಿದ ಬಂದಿದೆ. ಕನ್ನಡ ಸಾಹಿತ್ಯ ಪರಿಷತ್ ಕೃಷ್ಣರಿಗೆ ‘ಕೆಂಗಲ್ ಹನುಮಂತಯ್ಯ ಸಂಸ್ಕೃತಿ ದತ್ತಿ ಪ್ರಶಸ್ತಿ’ ಯನ್ನು ನೀಡಿ ಗೌರವಿಸಿದೆ.

ಈ ವೇಳೆ ಮಾತನಾಡಿದ ಕೃಷ್ಣ “ಮಾಜಿ ಮುಖ್ಯಮಂತ್ರಿ ದಿ. ಕೆಂಗಲ್ ಹನುಮಂತಯ್ಯ ಅವರಿಂದ ಆಡಳಿತ ನಡೆಸುವ ಶಿಸ್ತನ್ನು ಕಲಿತೆ. ಮಹಾನ್ ಸೌಧವಾದ ‘ವಿಧಾನಸೌಧ’ ವನ್ನು ಕಟ್ಟಿಸಿದ ಕೆಂಗಲ್ ಹನುಮಂತಯ್ಯ ಶಿಸ್ತಿನ ವ್ಯಕ್ತಿ ಹಾಗೂ ಹಠವಾದಿ. ಒಮ್ಮೆ ಮಾಡಿದ ನಿರ್ಧಾರವನ್ನು ಯಾವುದೇ ಕಾರಣಕ್ಕೂ ಬದಲಾಯಿಸುತ್ತಿರಲಿಲ್ಲ. ಅವರನ್ನು ಹತ್ತಿರದಿಂದ ನೋಡಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಅವರಂತೆ ಆಡಳಿತ ನಡೆಸಲು ಸಾಧ್ಯವಾಯಿತು.. ” ಎಂದು ಹೇಳಿದರು.

ಕೆಂಗಲ್ ಹನುಮಂತಯ್ಯ ಅವರ ಪ್ರೇರಣೆಯಿಂದ ನನ್ನ ಅಧಿಕಾರಾವಧಿಯಲ್ಲಿ ವಿಕಾಸ ಸೌಧವನ್ನು ಕಟ್ಟಿದ್ದೇನೆ. ವಿಕಾಸಸೌಧವನ್ನು ಇನ್ನೂ ದೊಡ್ಡದಾಗಿ ಕಟ್ಟಬೇಕು ಎಂಬ ಆಸೆಯಿತ್ತು. ಅದಕ್ಕಾಗಿ, ಪಕ್ಕದ ಬೃಹತ್ ಕಟ್ಟಡವನ್ನು ಒಡೆಯಬೇಕಿತ್ತು. ಒಂದು ವೇಳೆ ಈ ಕಟ್ಟಡವನ್ನು ಒಡೆಯಲು ಮುಂದಾಗಿದ್ದರೆ, ಅದಕ್ಕೆ ಎದುರಾಗಬಹುದಾಗಿದ್ದ ವಿರೋಧವನ್ನು ಎದುರಿಸುವ ಶಕ್ತಿ ನನ್ನಲ್ಲಿರಲಿಲ್ಲ ಎಂದು ತಿಳಿಸಿದರು.

ಈಗ ವಿಧಾನಸೌಧದಲ್ಲಿ ಮಂತ್ರಿಗಳನ್ನು ನೋಡುವುದೇ ಅಪರೂಪವಾಗಿದೆ. ಹಾಗಾದರೆ, ವಿಧಾನಸೌಧವನ್ನು ಕಟ್ಟಿಸಿರುವುದು ಏತಕ್ಕೆ ಎಂದು ಪ್ರಶ್ನಿಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top