fbpx
ಸಮಾಚಾರ

ಭಾರತ-ಪಾಕ್ ಪಂದ್ಯದ ಅಬ್ಬರದಲ್ಲಿ ಮರೆಯಾಯ್ತು ಬೆಂಗಳೂರು ಈಜುಪಟುವಿನ ಸಾಧನೆ!

ಕಳೆದ ಭಾನುವಾರ ದೇಶಾದ್ಯಂತ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದ ಗುಂಗಿನಲ್ಲೆ ಮುಳುಗಿದ್ದರು.. ಪಂದ್ಯ ಮುಗಿದು ಎರಡು ಮೂರು ದಿನಗಳು ಕಳೆದರೂ ಬದ್ಧವೈರಿ ಪಾಕ್ ವಿರುದ್ಧದ ಗೆಲುವಿನ ಸಂಭ್ರಮ ಇನ್ನೂ ನಿಂತಿಲ್ಲ. ಆದರೆ ಈ ಪಂದ್ಯದ ಅಬ್ಬರದಿಂದ ನಮ್ಮ ನೆಲದ ಯುವ ಪ್ರತಿಭೆಯ ಸಾಧನೆ ಮರೆಯಾಗಿದೆ.

 

 

ಹೌದು, ನಾರ್ವೆಯಲ್ಲಿ ನಡೆದ ನಾರ್ವೆಯನ್ ಸ್ವಿಮ್ಮಿಂಗ್ ಚಾಂಪಿಯನ್‌ಶಿಪ್ ಟೂರ್ನಿಯಲ್ಲಿ ಬೆಂಗಳೂರಿನ ಪ್ಯಾರ ಈಜುಪಟು ನಿರಂಜನ್ ಮುಕುಂದನ್ ಒಂದಲ್ಲ, ಎರಡಲ್ಲ ಬರೊಬ್ಬರಿ 5 ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದಾರೆ..

ವಿಶೇಷವೇನೆಂದರೆ ಬೆನ್ನು ಮೂಳೆಯ ಅಸಹಜ ಬೆಳವಣಿಗೆಯೊಂದಿಗೆ ಹುಟ್ಟಿದ ನಿರಂಜನ್‌ ಈವರೆಗೆ ಒಟ್ಟಾರೆ 17 ಶಸ್ತ್ರಚಿಕಿತ್ಸೆಗಳಿಗೆ ಒಳಪಟ್ಟಿದ್ದಾರೆ. ಆಕ್ವಾಥೆರಪಿ ಮೂಲಕ ತಮ್ಮ ಕಾಲುಗಳಿಗೆ ಶಕ್ತಿ ತುಂಬುವ ಉದ್ದೇಶದಿಂದ ಅವರು ಬಾಲ್ಯದಲ್ಲೇ ಈಜು ಆಯ್ಕೆ ಮಾಡಿಕೊಂಡರು. 17 ಸರ್ಜರಿ ಮಾಡಿಸಿಕೊಂಡಿರುವ ನಿರಂಜನ್ ಇದೀಗ ಪ್ಯಾರಾ ಸ್ಮಿಮ್ಮಿಂಗ್‌ನಲ್ಲಿ 5 ಚಿನ್ನದ ಪದಕ ಗೆದ್ದಿದ್ದಾರೆ.

ಟೀಂ ಇಂಡಿಯಾ ಮಾಜಿ ನಾಯಕ ರಾಹುಲ್ ದ್ರಾವಿಡ್ ಅಭಿಮಾನಿಯಾಗಿರುವ ನಿರಂಜನ್, 2016ರಲ್ಲಿ ಕರ್ನಾಟಕ ಸರಕಾರದಿಂದ ಏಕಲವ್ಯ ಪ್ರಶಸ್ತಿ ಪಡೆದುಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top