fbpx
ಸಮಾಚಾರ

ಸಚಿವ ಜಮೀರ್ ಅಹ್ಮದ್ ಕಾಣೆಯಾಗಿದ್ದಾರೆ- ವೈರಲ್ ಆಯ್ತು ರೈತನ ಪೋಸ್ಟ್.

ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಆಹಾರ ಮತ್ತು ನಾಗರಿಕ ಸಚಿವ ಜಮೀರ್ ಅಹ್ಮದ್ ಖಾನ್ ಕಾಣೆಯಾಗಿದ್ದಾರೆ ಎಂದು ಹಾವೇರಿ ಜಿಲ್ಲೆಯ ರೈತರು ಫೇಸ್‍ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 

 

ಮೈತ್ರಿ ಸರ್ಕಾರದಲ್ಲಿ ಜಮೀರ್ ಅಹ್ಮದ್ ಖಾನ್ ಅವರನ್ನು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಲಾಗಿದೆ. ಅದರೆ ತಿಂಗಳಿಗೆ ಒಂದು ಸಾರಿಯಾದರೂ ಸಚಿವರು ಜಿಲ್ಲೆಗೆ ಬಂದಿಲ್ಲ ಎಂದು ಆಕ್ರೋಶಗೊಂಡ ರೈತರು ಜಮೀರ್ ಅಹ್ಮದ್ ಕಾಣೆಯಾಗಿದ್ದಾರೆ ಎಂದು ಫೇಸ್‍ಬುಕ್‍ನಲ್ಲಿ ಹಾಕಿಕೊಂಡಿದ್ದಾರೆ.

ಫೇಸ್‍ಬುಕ್‍ನಲ್ಲಿ ಮಾಡಿರುವ ಪೋಸ್ಟ್ ಈ ರೀತಿ ಇದೆ:
ಈಗ ಕಾಣೆ ಆದವರ ಬಗ್ಗೆ ಪ್ರಕಟಣೆ.
ಹೆಸರು – ಬಿ ಜಡ್ ಜಮೀರ್ ಅಹಮದ್ ಖಾನ್
ಬಣ್ಣ – ಗೋಧಿ ಬಣ್ಣ ಸಾಧಾರಣ ಮೈಕಟ್ಟು
ಎತ್ತರ – ಸುಮಾರು 5 ಅಡಿ
ಕೊನೆಯ ಬಾರಿ ಕಂಡಿದ್ದು – ಬ್ಯಾಡಗಿ ತಾಲ್ಲೂಕಿನಲ್ಲಿ
ಇವರು ಸಿಕ್ಕಲ್ಲಿ ಹಾವೇರಿ ಜಿಲ್ಲೆಯ ಜಿಲ್ಲಾಧಿಕಾರಿಗಳ ಕಚೇರಿಗೆ ಒಪ್ಪಿಸತಕ್ಕದ್ದು.
ಸಾಧ್ಯವಾದಷ್ಟು ಶೇರ್ ಮಾಡಿ ಎಂದು ಪೋಸ್ಟ್ ಮಾಡಿದ್ದಾರೆ.
ಈ ಮೂಲಕ ಬ್ಯಾಡಗಿ ರೈತರಿಂದ ಜಮೀರ್ ಅಹ್ಮದ್ ವಿರುದ್ಧ ಫೇಸ್‍ಬುಕ್‍ನಲ್ಲಿ ಅಸಮಾಧಾನ ಹೊರಹಾಕಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top