fbpx
ಭವಿಷ್ಯ

ಜೂನ್ 21- ನಾಳೆಯ ಪಂಚಾಂಗ ಮತ್ತು ದಿನಭವಿಷ್ಯ.

ಸ್ಥಳ- ಬೆಂಗಳೂರು.
ಶುಕ್ರವಾರ, ಜೂನ್ 21 2019
ಸೂರ್ಯೋದಯ : 5:54 am
ಸೂರ್ಯಾಸ್ತ: 6:48 pm
ಶಕ ಸಂವತ : 1941 ವಿಲಂಬಿ

ಅಮಂತ ತಿಂಗಳು :ಜ್ಯೇಷ್ಠ
ಪಕ್ಷ : ಕೃಷ್ಣಪಕ್ಷ
ತಿಥಿ : ಚತುರ್ಥೀ 19:08
ನಕ್ಷತ್ರ: ಶ್ರವಣ 18:15
ಯೋಗ :ವೈಧೃತಿ 19:58
ಕರಣ:ಬಾವ 06:05 ಬಾಲವ 19:08

ಅಭಿಜಿತ್ ಮುಹುರ್ತ:11:55 am – 12:46 pm
ಅಮೃತಕಾಲ :6:44 am – 8:30 am

ರಾಹುಕಾಲ-10:45 am – 12:21 pm
ಯಮಗಂಡ ಕಾಲ-3:32 pm – 5:08 pm
ಗುಳಿಕ ಕಾಲ-7:34 am – 9:09 am

 

 

ಮೇಷ (Mesha)

 

ಆಡುವ ಮಾತಿನಲ್ಲಿ ವ್ಯಂಗ್ಯ ಬೆರೆಸಿ ಮಾತನಾಡದಿರಿ. ಇದರಿಂದ ಉತ್ತಮ ಸಂಬಂಧಗಳು ಕೈ ತಪ್ಪಿ ಹೋಗುವವು. ಆಸ್ತಿ ಖರೀದಿಸುವ ಮುನ್ನ ದಾಖಲೆಗಳನ್ನು ಪರಿಶೀಲಿಸಿ. ಹಳೆಯ ಮಿತ್ರರ ಇಲ್ಲವೆ ಸಂಬಂಧಿಕರ ಭೇಟಿ ನಿಮಗೆ ಹೊಸ ಹುಮ್ಮಸ್ಸು ನೀಡುವುದು

ವೃಷಭ (Vrushabh)


ಹಣದ ಹರಿವು ನೀವು ಬಯಸಿದಂತೆ ದೊರೆಯುವುದರಿಂದ ತೊಂದರೆ ಇಲ್ಲ. ಬಂಧುಗಳ ಆರೋಗ್ಯ ಸುಧಾರಣೆ ಹೊರೆ ಕೂಡಾ ನಿಮ್ಮ ಮೇಲೆ ಬೀಳುವ ಸಾಧ್ಯತೆ ಇದೆ. ಸಂಬಂಧಪಡದ ವಿಷಯಗಳಿಂದಾಗಿ ದಂಪತಿಗಳ ಮಧ್ಯೆ ಕಲಹ ಏರ್ಪಡುವುದು.

ಮಿಥುನ (Mithuna)


ಉಪನ್ಯಾಸ, ಭಾಷಣಗಳ ಮೂಲಕ ಜನರನ್ನು ಆಕರ್ಷಿಸುವಿರಿ. ಆಸ್ತಿಗೆ ಸಂಬಂಧಪಟ್ಟಂತಹ ದಾಖಲೆಗಳು ನಿಮ್ಮ ಕೈ ಸೇರಲಿವೆ. ಹಣಕಾಸಿನ ವಿಷಯದಲ್ಲಿ ತೊಂದರೆ ಇಲ್ಲ. ವಿವಿಧ ಮೂಲಗಳಿಂದ ಹಣ ಹರಿದು ಬರುವುದು. ಹಣ ಉಳಿತಾಯದ ಕಡೆ ಗಮನ ಹರಿಸಿ.

ಕರ್ಕ (Karka)


ರಿಯರ ಮಾತನ್ನು ಗೌರವಿಸಿ. ಮಡದಿ ಕೊಡುವ ಸಲಹೆಗಳು ನಿಮಗೆ ಪ್ರಯೋಜನಕ್ಕೆ ಬರುವುದು. ಲೇವಾದೇವಿ ವ್ಯವಹಾರದಲ್ಲಿ ಹೆಚ್ಚು ಬಂಡವಾಳ ಹಾಕಲು ಇದು ಸಮಯವಲ್ಲ. ಬುದ್ಧಿವಂತಿಕೆಯಿಂದಲೇ ಎಲ್ಲಾ ಕೆಲಸಗಳನ್ನು ನಿಭಾಯಿಸುವಿರಿ.

ಸಿಂಹ (Simha)


ಮಡದಿ, ಮಕ್ಕಳ ಬೇಡಿಕೆ ದೊಡ್ಡ ಮೊತ್ತದ್ದಾಗಿದ್ದು ಅದನ್ನು ಅನಿವಾರ‍್ಯವಾಗಿ ಪೂರೈಸಬೇಕಾಗುವುದು. ಆದಾಯದಷ್ಟೇ ಖರ್ಚು ಇರುವುದರಿಂದ ಹಣದ ಉಳಿತಾಯಕ್ಕೆ ಸಂಚಕಾರ ಬರುವುದು. ಕಾರ್ಮಿಕರ ಸಮಸ್ಯೆಗಳನ್ನು ಜಾಣತನದಿಂದ ಪರಿಹರಿಸುವಿರಿ.

ಕನ್ಯಾರಾಶಿ (Kanya)


ವೃತ್ತಿಯಲ್ಲಿ ಹೊಸ ಹೊಸ ಅವಕಾಶಗಳು ನಿಮ್ಮನ್ನು ಅರಸಿಕೊಂಡು ಬರುವುದು. ಹೊಸ ಮನೆ, ಆಸ್ತಿ ಖರೀದಿಗೆ ಸಕಾಲವಾಗಿದ್ದು ಈ ದಿಸೆಯಲ್ಲಿ ಯಾವುದೇ ಅಳುಕಿಲ್ಲದೆ ಮುಂದಡಿ ಇಡಬಹುದು. ಅತಿ ಉದ್ವೇಗ ಒಳ್ಳೆಯದಲ್ಲ.

ತುಲಾ (Tula)


ಯಾವುದೇ ಕಾರಣಕ್ಕೂ ವೃತ್ತಿ ರಹಸ್ಯವನ್ನು ಮತ್ತೊಬ್ಬರಿಗೆ ಬಿಟ್ಟುಕೊಡಬೇಡಿ. ರಾಜಕಾರಣಿಗಳು ತಮ್ಮ ನಿರ್ಧಾರವನ್ನು ಬದಲಾಯಿಸದಿರುವುದು ಉತ್ತಮ. ಸ್ನೇಹಿತರಿಂದ ಸಕಾಲಿಕ ನೆರವು ದೊರೆಯುವುದು. ಹಣಕಾಸಿನ ಪರಿಸ್ಥಿತಿ ಸಾಧಾರಣವಾಗಿರುತ್ತದೆ.

ವೃಶ್ಚಿಕ (Vrushchika)


ದೈಹಿಕ ಮತ್ತು ಮಾನಸಿಕ ಕಿರಿಕಿರಿಯನ್ನು ಅಲಕ್ಷಿಸುವುದು ಸೂಕ್ತವಲ್ಲ. ಸೂಕ್ತ ವೈದ್ಯಕೀಯ ಚಿಕಿತ್ಸೆ ಪಡೆಯುವುದು ಒಳ್ಳೆಯದು. ನಿಮ್ಮ ಸ್ನೇಹಿತರು, ಬಂಧುಗಳು ನಿಮ್ಮನ್ನು ಭೇಟಿ ಮಾಡಿ ಹಣಕಾಸಿನ ನೆರವನ್ನು ನೀಡುವರು.

ಧನು ರಾಶಿ (Dhanu)


ಮಿತ್ರರಿಂದ ಹಲವು ರೀತಿಯ ಬೆಂಬಲಗಳನ್ನು ಬಯಸಿದ್ದಲ್ಲಿ ನಿರಾಶರಾಗಬೇಕಾಗುವುದು. ನಿಮ್ಮ ಆತ್ಮಬಲದ ಮೇಲೆ ಕಾರ್ಯವನ್ನು ಹಮ್ಮಿಕೊಳ್ಳಿ. ಧೈರ್ಯವಂತರಿಗೆ ಮಾತ್ರ ಭಗವಂತ ಸಹಾಯ ಮಾಡುವನು. ದೂರದ ಪ್ರಯಾಣವನ್ನು ಮುಂದೂಡುವುದು ಒಳ್ಳೆಯದು.

ಮಕರ (Makara)


ಎಲ್ಲರ ಅಭಿಪ್ರಾಯಗಳನ್ನು ಕಿವಿಗೊಟ್ಟು ಆಲಿಸಿ. ಆದರೆ ಅದನ್ನು ಕಾರ್ಯರೂಪಕ್ಕೆ ತರುವಾಗ ಚಿಂತಿಸಿ. ತೀರ್ಮಾನವು ನಿಮ್ಮ ಇಷ್ಟದಂತೆ ಇರಲಿ. ಇದರಿಂದ ನಿಮ್ಮ ಸಾಮಾಜಿಕ ಸ್ಥಾನಮಾನ ಹೆಚ್ಚಾಗುವುದು.

ಕುಂಭರಾಶಿ (Kumbha)


ನಿಮ್ಮದೇ ಆದ ಸ್ವಂತ ಆಸ್ತಿ ಹಾಗೂ ಮನೆಯ ವಿಚಾರಕ್ಕೆ ಕಾಲದ ನೆರವು ಬೇಗನೆ ಲಭ್ಯವಾಗುವುದು. ಕೆಲವರಿಗೆ ವೃತ್ತಿಯಲ್ಲಿ ಬದಲಾವಣೆ ಕಂಡುಬರುವುದು. ಹಣಕಾಸಿನ ಸ್ಥಿತಿ ಸಾಧಾರಣವಾಗಿರುವುದು.

ಮೀನರಾಶಿ (Meena)


ಕೆಲವು ವಿಚಾರಗಳ ಬಗ್ಗೆ ನೀವು ಅತೀ ಹೆಚ್ಚು ಭಾವುಕರಾಗುವಿರಿ. ಆದರೆ ತೀರ ಭಾವುಕತೆಯಿಂದ ವ್ಯವಹರಿಸುವಾಗ ವೈಫಲ್ಯ ಸಂಭವಿಸುವ ಸಾಧ್ಯತೆ ಇದೆ. ಕೆಲವು ವಿಚಾರಗಳಲ್ಲಿ ದೃಢ ನಿರ್ಧಾರ ತಳೆಯುವುದು ಹಿಂದೆಂದಿಗಿಂತಲೂ ಹೆಚ್ಚು ಅವಶ್ಯಕವಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top