fbpx
ಸಮಾಚಾರ

ರಾಷ್ಟ್ರಪತಿ ಭಾಷಣದ ವೇಳೆ ಸಂಸತ್ತಿನಲ್ಲಿಯೇ ಫೋನ್‌ನಲ್ಲಿ ಬ್ಯುಸಿಯಾದ ಕಾಂಗ್ರೆಸ್ ಅಧ್ಯಕ್ಷ- ವಿಡಿಯೋ

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧೀ ಅವರ ವಿರುದ್ಧ ಟೀಕೆಗಳು ಕೇಳಿಬರುತ್ತಿದೆ. ಕಾರಣ ಅವರು ಸಂಸತ್​ನ ಮುಂಗಾರು ಅಧಿವೇಶನದ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿ ರಾಮನಾಥ ಕೋವಿಂದ ಭಾಷಣ ಮಾಡುವ ವೇಳೆ ರಾಹುಲ್‌ ಗಾಂಧಿ ಮಾತ್ರ ತಮ್ಮ ಫೋನ್ ನಲ್ಲಿ ತಲ್ಲೀನರಾಗಿದ್ದರು.

 

 

ರಾಷ್ಟ್ರಪತಿಗಳ ಭಾಷಣದ ವೇಳೆಯಲ್ಲಿ ಮೊದಲ ಸಾಲಿನಲ್ಲಿಯೇ ಕುಳಿತಿದ್ದ ರಾಹುಲ್‌ ಗಾಂಧಿ 24 ನಿಮಿಷ ತಮ್ಮ ಮೊಬೈಲ್‌ನಲ್ಲಿಯೇ ಏನನ್ನೋ ಮಾಡುತ್ತಾ, ಚಾಟಿಂಗ್ ಮತ್ತು ಟೈಪ್‌ ಮಾಡುತ್ತಾ, ಮೊಬೈಲ್‌ ನೋಡುತ್ತಲೇ ಕಾಲಕಳೆದಿದ್ದಾರೆ.

ಯುಪಿಎ ಅಧಿನಾಯಕಿ ಸೋನಿಯಾ ಗಾಂಧಿ ರಾಷ್ಟ್ರಪತಿಯವರ ಭಾಷಣ ಕೇಳುತ್ತಿದ್ದರು ಮತ್ತು ಭಾಷಣದ ಮಧ್ಯೆ ಮೇಜನ್ನು ಕುಟ್ಟಿ ಬೆಂಬಲ ವ್ಯಕ್ತಪಡಿಸುತ್ತಿರುವಾಗಲೂ ರಾಹುಲ್‌ ಗಾಂಧಿ ಮಾತ್ರ ಯಾವುದೇ ವಿಚಾರದ ಕುರಿತು ಮಾತನಾಡುತ್ತಿದ್ದರೂ ಏನೊಂದು ಕೇಳಿಸಿಕೊಳ್ಳದೆ ಮೊಬೈಲ್‌ನಲ್ಲಿ ಮಗ್ನರಾಗಿದ್ದರು. ಸೋನಿಯಾ ಗಾಂಧಿ ಅವರು ಹಲವು ಬಾರಿ ರಾಹುಲ್‌ ಗಾಂಧಿಯತ್ತ ಕಣ್ಣು ನೆಟ್ಟಿಸಿ ನೋಡಿದರೂ ಕೂಡ ಎಚ್ಚೆತ್ತುಕೊಳ್ಳದ ರಾಹುಲ್‌ ಮಾತ್ರ ತಮ್ಮ ಪಾಡಿಗೆ ತಾವು ಫೋನ್ ನೋಡುತ್ತಲೇ ಕುಳಿತಿದ್ದರು.

ರಾಹುಲ್ ಗಾಂಧಿಯವರ ಈ ನಡೆಗೆ ಇದೀಗ ಎಲ್ಲೆಡೆ ಟೀಕೆಗೆ ಗುರಿಯಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top