fbpx
ಸಮಾಚಾರ

ಟೀಂ ಇಂಡಿಯಾಗೆ ಮತ್ತೊಂದು ಆಘಾತ; ಧವನ್, ಭುವಿ ಬಳಿಕ ಇದೀಗ ಮತ್ತೊಬ್ಬ ಆಟಗಾರನಿಗೆ ಗಾಯ.

ಪ್ರಸ್ತುತ ಇಂಗ್ಲೆಂಡ್‌ನಲ್ಲಿ ಸಾಗುತ್ತಿರುವ ಐಸಿಸಿ 2019 ಏಕದಿನ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಸತತ ಗಾಯದ ಸಮಸ್ಯೆಯನ್ನು ಎದುರಿಸುತ್ತಿದೆ. ಟೀಂ ಇಂಡಿಯಾ ಆರಂಭಿಕ ಶಿಖರ್ ಧವನ್ ಗಾಯದಿಂದ ಚೇತರಿಸಿಕೊಳ್ಳದ ಕಾರಣ ವಿಶ್ವಕಪ್ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಇನ್ನು ಸ್ಟಾರ್ ಬೌಲರ್ ಭುವನೇಶ್ವರ್ ಕುಮಾರ್ ಮೂರು ಪಂದ್ಯಗಳಿಂದ ಹೊರ ಬಿದ್ದಿದ್ದಾರೆ. ಭಾರತ ಈ ಆಘಾತವನ್ನೇ ಟೀಂ ಇಂಡಿಯಾ ಇನ್ನು ಅರಗಿಸಿಕೊಂಡಿಲ್ಲ. ಇದರ ಬೆನ್ನಲ್ಲೇ ಮತ್ತೊಬ್ಬ ಕ್ರಿಕೆಟಿಗ ಗಾಯದ ಸಮಸ್ಯೆಗೆ ತುತ್ತಾಗಿದ್ದಾರೆ. ಇದೀಗ ಟೀಂ ಇಂಡಿಯಾದಲ್ಲಿ ಗಾಯದ ಪಟ್ಟಿ ಬೆಳೆಯುತ್ತಲೇ ಇದೆ.

 

 

ಅಭ್ಯಾಸದ ವೇಳೆ ವಿಜಯ್ ಶಂಕರ್ ಕಾಲಿಗೆ ಗಾಯ ಮಾಡಿಕೊಂಡಿದ್ದಾರೆ. ನೆಟ್ಸ್ ನಲ್ಲಿ ಅಭ್ಯಾಸ ನಡೆಸುತ್ತದ್ದ ವೇಳೆ ಟೀಂ ಇಂಡಿಯಾ ವೇಗಿ ಜಸ್ ಪ್ರೀತ್ ಬುಮ್ರಾ ಎಸೆದ ಚೆಂಡು ವಿಜಯ್ ಶಂಕರ್ ಕಾಲಿನ ಹೆಬ್ಬೆರಳಿಗೆ ಬಡಿದು ಗಾಯವಾಗಿದೆ. ಚೆಂಡು ಬಡಿದಾಗ ಶಂಕರ್ ತುಂಬಾನೇ ನೋವನ್ನು ಅನುಭವಿಸಿದ್ದರು. ಇದು ಟೀಮ್ ಇಂಡಿಯಾ ಪಾಳೆೇಯದಲ್ಲಿ ಆತಂಕವನ್ನು ಸೃಷ್ಟಿ ಮಾಡಿತು.

ಹೀಗಿದ್ದರೂ ಶಂಕರ್ ಗೆ ಗಾಯ ಜಾಸ್ತಿಯಾಗಿಲ್ಲ ಎಂದು ತಂಡದ ಮೂಲಗಳು ಸ್ಪಷ್ಟಪಡಿಸಿರುವುದರಿಂದ ಸ್ವಲ್ಪ ಆತಂಕ ಕಡಿಮೆಯಾಗಿದೆ. ಇದೇ ಶನಿವಾರ ಆಫ್ಗಾನಿಸ್ತಾನ ವಿರುದ್ಧ ಟೀಂ ಇಂಡಿಯಾ ಸೆಣೆಸಾಡಲಿದ್ದು ಈ ಪಂದ್ಯದಲ್ಲಿ ವಿಜಯ್ ಶಂಕರ್ ಆಡುತ್ತಾರಾ ಇಲ್ಲವೋ ಕಾದು ನೋಡಬೇಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top