fbpx
ಸಮಾಚಾರ

ಮರಾಠಿಗರು ಕೋಪಿಸಿಕೊಳ್ಳುತ್ತಾರೆ ಎಂದು ಇಂಗ್ಲಿಷ್ ನಲ್ಲಿ ಸುರೇಶ್ ಅಂಗಡಿ ಪ್ರಮಾಣ ವಚನ?

ಕೇಂದ್ರ ರಾಜ್ಯ ರೇಲ್ವೇ ಖಾತೆ ಸಚಿವ ಸುರೇಶ್ ಅಂಗಡಿ ಇಂಗ್ಲಿಷ್‍ನಲ್ಲಿ ಪ್ರಮಾಣ ಸ್ವೀಕರಿಸಿದಕ್ಕೆ ಎಲ್ಲೆಡೆ ಭಾರಿ ವಿರೋಧ ವ್ಯಕ್ತವಾಗುತ್ತಿವೆ. ರಾಜ್ಯದ ಎಲ್ಲ ಸಂಸದರು ಕನ್ನಡದಲ್ಲಿಯೇ ಪ್ರಮಾಣವಚನ ಸ್ವೀಕರಿಸಿದ್ದಾರೆ. ಆದರೆ, ಸುರೇಶ್ ಅಂಗಡಿ ಇಂಗ್ಲಿಷ್‌ನಲ್ಲಿ ಮತ್ತು ಅನಂತ್ ಕುಮಾರ್ ಹೆಗಡೆ ಸಂಸ್ಕೃತ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ ಈ ಇಬ್ಬರ ವಿರುದ್ಧ ಕನ್ನಡಿಗರು ಸಿಡಿದಿದ್ದಾರೆ.

ತಮಗೆ ಮತ ನೀಡಿದ ಮರಾಠಿ ಭಾಷಿಕರು ಅಸಮಾಧಾನಗೊಂಡಾರು ಎಂಬ ಅಳುಕಿನಿಂದಾಗಿಯೇ ಅಂಗಡಿಯವರು ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸದಿರುವುದು ಸ್ಪಷ್ಟವಾಗಿದೆ.. ಇಂಗ್ಲಿಷ್ ಓದಲು ಸರಿಯಾಗಿ ಬರದಿದ್ದರೂ ಬಡಬಡಾಯಿಸಿ ಇಂಗ್ಲಿಷ್ ನಲ್ಲಿ ಪ್ರಮಾಣವಚನ ಸ್ವೀಕರಿಸಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಇಂಗ್ಲಿಷ್ ನಲ್ಲಿ ಪ್ರಮಾಣವಚನ ಸ್ವೀಕರಿಸಿ ಉದ್ದಟತನ ಮೆರೆದ ಅಂಗಡಿ ವಿರುದ್ಧ ಈಗಾಗಲೇ ಅನೇಕ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ. “ಸುರೇಶ್‌ ಅಂಗಡಿ ಅವರು ಇಂಗ್ಲಿಷ್‌ನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದು ಕನ್ನಡಕ್ಕೆ ಮಾಡಿದ ಅವಮಾನ. ಮೊದಲಿನಿಂದಲೂ ಎಂಇಎಸ್ ಜತೆ ಉತ್ತಮ ಸಂಬಂಧ ಹೊಂದಿರುವ ಅಂಗಡಿ, ಎಂಇಎಸ್ ನವರನ್ನು ಮೆಚ್ಚಿಸಲು ಹೀಗೆ ಮಾಡಿದ್ದಾರೆ ಎಂಬ ಗುಮಾನಿಯೂ ಇದೆ. ಅಂಗಡಿ ಅವರು ಇನ್ನು ಮುಂದೆ ಇಂತಹ ಪ್ರಮಾದ ಮಾಡಬಾರದು. ” ಎಂದು ಕನ್ನಡ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top