fbpx
ಸಮಾಚಾರ

“ಗ್ರಾಮ ವಾಸ್ತವ್ಯದಲ್ಲಿ ಸಿಎಂ ನೇರವಾಗಿ ಜನರ ಸಮಸ್ಯೆ ಆಲಿಸಬೇಕು” ವೀರೇಂದ್ರ ಹೆಗ್ಗಡೆ ಸಲಹೆ.

ಗ್ರಾಮ ವಾಸ್ತವ್ಯದಲ್ಲಿ ಇರುವ ಮುಖ್ಯಮಂತ್ರಿ ಕುಮಾರಸ್ವಾಮಿ ಕನಿಷ್ಠ ಒಂದು ಗಂಟೆ ಕಾಲ ಜನರ ಸಮಸ್ಯೆ ಆಲಿಸಬೇಕು. ಸಾಧ್ಯವಾದರೆ ಸ್ಥಳದಲ್ಲೇ ಸಮಸ್ಯೆ ಬಗೆಹರಿಸುವ ಕೆಲಸ ಮಾಡಬೇಕು ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಸಲಹೆ ನೀಡಿದ್ದಾರೆ.

“ಕೆಲವು ಬಾರಿ ಅಧಿಕಾರಿಗಳು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಕೊಡುತ್ತಾರೆ. ಆದರೆ ಬಹುತೇಕ ಅಧಿಕಾರಿಗಳಿಗೆ ಜನರ ಸಮಸ್ಯೆಗಳ ಬಗ್ಗೆ ಗೊತ್ತಿರುವುದಿಲ್ಲ.. ಮುಖ್ಯಮಂತ್ರಿಗಳ ಗ್ರಾಮ ವಾಸ್ತವ್ಯ ಸಂಪರ್ಕ ಸಭೆಯಾಗಿಯೂ ಪರಿವರ್ತನೆಯಾದರೆ ಸಮಸ್ಯೆಯೂ ತಿಳಿಯುತ್ತದೆ.. ಗ್ರಾಮ ವಾಸ್ತವ್ಯದ ಮೂಲಕ ಈ ರೀತಿ ಸಮಸ್ಯೆಗಳನ್ನು ಸಂಗ್ರಹಿಸುವುದು ಒಂದು ಉತ್ತಮ ನಡೆ. ಈ ಹಿಂದೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಕೂಡ ಇಂತಹ ಜನಸಂಪರ್ಕವನ್ನು ಆರಂಭಿಸಿದ್ದರು” ಎಂದು ಹೆಗ್ಗಡೆಯವರು ಹೇಳಿದ್ದಾರೆ..

ಆತ್ಮಹತ್ಯೆಯಂತಹ ಪ್ರಕರಣಗಳು ನಡೆದ ನಂತರ ಪರಿಹಾರ ಕೊಡುವ ಬದಲು ಮೊದಲೇ ಸಮಸ್ಯೆ ತಿಳಿದುಕೊಂಡು ಆತ್ಮಹತ್ಯೆಯಂತ ಪ್ರಕರಣಗಳು ನಡೆಯದಹಾಗೆ ತಡೆಯಬೇಕು.. ಹಾಗಾಗಿ ಸಮಸ್ಯೆಗಳನ್ನು ಹೇಳಿಕೊಳ್ಳಲು ಗ್ರಾಮ ವಾಸ್ತವ್ಯ ಸಂದರ್ಭದಲ್ಲಿ ಜನರಿಗೆ ಅವಕಾಶ ನೀಡಬೇಕು. ಈ ವೇಳೆ ಅಧಿಕಾರಿಗಳು ಸಿಎಂ ಅವರನ್ನು ಸುತ್ತುವರಿಯಬಾರದು. ಜನರೊಂದಿಗೆ ನೇರವಾಗಿ ಮಾತುಕತೆ ನಡೆಸಿದರೆ ಜ್ವಲಂತ ಸಮಸ್ಯೆ ಅರಿವಿಗೆ ಬರುತ್ತೆ” ಎಂದು ಹೆಗ್ಗಡೆಯವರು ಸಲಹೆ ನೀಡಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top