fbpx
ಸಮಾಚಾರ

87ರ ಇಳಿವಯಸ್ಸಿನಲ್ಲೂ ಯುವಕರನ್ನೂ ನಾಚಿಸುವಂತೆ ಯೋಗ ಮಾಡುವ ದೇವೇಗೌಡರು.

ಇಂದು ದೇಶದೆಲ್ಲೆಡೆ ಯೋಗ ದಿನಾಚರಣೆ ಆಚರಿಸಲಾಗುತ್ತಿದೆ. ಅಂತೆಯೇ 87 ವರ್ಷದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಕೂಡ ಯುವಕರು ನಾಚಿಸುವಂತೆ ಯೋಗವನ್ನು ಬಹಳ ವರ್ಷಗಳಿಂದ ರೂಡಿಸಿಕೊಂಡು ಬಂದಿದ್ದಾರೆ. ಸದ್ಯ ಅವರ ಯೋಗಾಸನ ಮಾಡಿರುವ ಚಿತ್ರಾವಳಿಗಳು ಸಾಮಾಜಿಕ ಜಾಲತಾಣದ ತುಂಬಾ ವೈರಲ್ ಆಗಿವೆ.

 

 

ಯೋಗ ಗುರು ಕಾರ್ತಿಕ್ ಅವರ ಮಾರ್ಗದರ್ಶನದಲ್ಲಿ ದೇವೇಗೌಡರು ಯೋಗ ಮಾಡುತ್ತಾರೆರೆ. 87ರ ಈ ಇಳಿ ವಯಸ್ಸಿನಲ್ಲಿ ಕೂಡ ಹರೆಯದ ಯುವಕರು ಕೂಡ ನಾಚುವಂತೆ ವಿವಿಧ ಆಸನಗಳನ್ನು ಪ್ರದರ್ಶಿಸಿದ್ದಾರೆ. “ನಾನು ಆರೋಗ್ಯ ಕಾಪಾಡಲು ನನ್ನದೇ ಆದ ಕೆಲವೊಂದು ನಿಯಮಗಳನ್ನು ಇಟ್ಟುಕೊಂಡಿದ್ದೇನೆ. ಯೋಗದ ಜೊತೆ ಆಹಾರ ಪದ್ಧತಿಯನ್ನು ಕೂಡ ಅಳವಡಿಸಿಕೊಂಡಿದ್ದೇನೆ. ಆದುದರಿಂದ ನಾನು ಇನ್ನು ಕೆಲಸ ಮಾಡುವ ಆಸಕ್ತಿ ಇದೆ.” ಎಂದು ಮಾಜಿ ಪ್ರಧಾನಿಗಳು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top