fbpx
ಸಮಾಚಾರ

ಅನ್ನ ಕೊಟ್ಟ ಕನ್ನಡವನ್ನು ‘ಕೈಮೇಲೆ’ ಟ್ಯಾಟೂ ಹಾಕಿಸಿ ಕನ್ನಡ ಪ್ರೇಮ ಮೆರೆದ ಅಕುಲ್.

ಅಕುಲ್ ಅಂದ್ರೆ ಮೊದಲು ನೆನಪಿಗೆ ಬರೋದು ಅವರ ಪಟ ಪಟ ಮಾತು ತರಲೆ ತುಂಟತನ., ಕಿರುತೆರೆಯ ಟಾಪ್ ನಿರೂಪಕರಲ್ಲಿ ಒಬ್ಬರಾಗಿರುವ ಅಕುಲ್ ಇಂದು ರಾಜ್ಯದ ಮನೆಮಾತಾಗಿದ್ದಾರೆ. ಟಿವಿಯಲ್ಲಿ ಯಾವುದೇ ದೊಡ್ಡ ಷೋ ಇದ್ರೂ, ಅಲ್ಲಿ ಅಕುಲ್ ಮೈಕ್ ಹಿಡ್ಕೊಂಡು ಬಂದರೆ ಆ ಕಾರ್ಯಕ್ರಮಕ್ಕೆ ಒಂದು ಕಳೆ ಬರುತ್ತದೆ. ತಮ್ಮ ವಿಭಿನ್ನವಾದ ನಿರೂಪಣೆಯ ಮೂಲಕವೇ ಕಾರ್ಯಕ್ರಮಕ್ಕೆ ಹೊಸ ಮೆರಗನ್ನು ತಂದು ಕೊಡುವ ವಿಶಿಷ್ಟವಾದ ಕಲೆಯನ್ನು ಅಕುಲ್ ಕರಗತ ಮಾಡಿಕೊಂಡಿದ್ದಾರೆ.

 

 

ತಮ್ಮ ವಿಶಿಷ್ಟ ಮ್ಯಾನರಿಸಂ, ಮಾತಿನಿಂದಲೇ ಸುದಿಯಾಗುವ ಅಕುಲ್ ಈಗ ಕನ್ನಡ ಪ್ರೇಮ ಮೆರೆಯುವ ಮೂಲಕ ಸುದ್ದಿಯಾಗಿದ್ದಾರೆ. ಹೌದು, ಅಕುಲ್ ತಮ್ಮ ಕೈ ಮೇಲೆ ‘ಕನ್ನಡ’ ಎಂದು ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಈ ಮೂಲಕ ಕನ್ನಡ ಪ್ರೇಮ ಮೆರೆದಿದ್ದಾರೆ. ಈ ಫೋಟೋವನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಕುಲ್ ಹಂಚಿಕೊಂಡಿದ್ದಾರೆ. ಕನ್ನಡ ಮತ್ತು ಕರ್ನಾಟಕದ ಮೇಲಿನ ಪ್ರೀತಿಗೆ ಈ ಟ್ಯಾಟೂ ಎಂದು ಬರೆದುಕೊಂಡಿದ್ದಾರೆ.

ಮೂಲತಃ ಆಂಧ್ರಪ್ರದೇಶದವರಾಗಿರುವ ಅಕುಲ್ ಅವರನ್ನು ಕೈ ಹಿಡಿದಿದ್ದು ಕನ್ನಡಿಗರು, ಕರ್ನಾಟಕ, ಕನ್ನಡ ಭಾಷೆ, ಹೀಗಾಗಿ ಕನ್ನಡ ನನ್ನಲ್ಲಿ ಶಾಶ್ವತವಾಗಿ ಉಳಿಬೇಕು ಎಂದುಕೊಂಡಿದ್ದ ಅಕುಲ್​, ತನ್ನ ಬಲ ಕೈ ಮೇಲೆ ಒಂದು ಸುಂದರ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಆ ಟ್ಯಾಟೂನ ಮೆಲ್ಭಾಗದಲ್ಲಿ ಆ್ಯಂಕರ್​ ಇದೆ, ಅದರ ಕೆಳಭಾಗದಲ್ಲಿ ಹೃದಯದ ನಾಡಿ ಮಿಡಿತದ ಸಿಂಬಲ್​ ಇದೆ. ಅದರ ಮಧ್ಯೆ ‘ಕನ್ನಡ’ ಅಂತಾ ಬರೆಯಲಾಗಿದೆ.

ಅಕುಲ್ ನ ಈ ಕನ್ನಡ ಭಕ್ತಿಗೆ ಕನ್ನಡಿಗರು ಫಿದಾ ಆಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ .ಒಟ್ಟಿನಲ್ಲಿ ಅನ್ನ ಕೊಟ್ಟ ನಾಡು, ಭಾಷೆಯ ಮೇಲೆ ಅಕುಲ್ ಅವರಿಗೆ ಇರುವ ನಿಯತ್ತು ಮತ್ತು ಕನ್ನಡಪ್ರೇಮದಿಂದ ಎಲ್ಲೆಲ್ಲಿಂದಲೋ ಜೆವನೋಪಾಯಕ್ಕಾಗಿ ಕರ್ನಾಟಕಕ್ಕೆ ಬಂದು ಕನ್ನಡ ಕಲಿಯದೇ ಕನ್ನಡಿಗರ ಮೇಲೆಯೇ ದೌರ್ಜನ್ಯ ಮಾಡುವ ಎಷ್ಟೋ ಅಪಾಪೋಲಿಗಳು ಪಾಠ ಕಲಿಯಬೇಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top