fbpx
ಸಾಧನೆ

ಅಂದು ಪಿಯುಸಿಯಲ್ಲಿ ಫೇಲ್ ಆಗಿದ್ದ ಬಾಲಕ ಈಗ IPS ಅಧಿಕಾರಿ!

ಗೆಲುವೆಂಬುದು ‘ಮಾರು ದೂರ ನಡೆದಾಕ್ಷಣ ಎದುರಾಗಿ ಬಿಡುವ ಮಾಯಾದಂಡ’ ಅಂತಾ ನಂಬಿ ಕೂತ ಅನೇಕರಿದ್ದಾರೆ. ಆದರದು ಕೈಕಾಲಿನ ಕಸುವನ್ನೆಲ್ಲ ಬಸಿದು ಪ್ರಯತ್ನಿಸಿದರೂ ಸಿಕ್ಕಂತೆ ಮಾಡಿ ಆಟವಾಡಿಸೋ ಮಾಯಾವಿ ಎಂಬ ವಿಚಾರ ಕಷ್ಟ ಪಟ್ಟವರಿಗೆ, ಅದರ ಫಲವಾಗಿಯೇ ಗೆದ್ದವರಿಗಲ್ಲದೆ ಬೇರ‍್ಯಾರಿಗೂ ಅರ್ಥವಾಗಲು ಸಾಧ್ಯವಿಲ್ಲ. ಈಗ ಯಾಕೆ ಮಾತು ಅಂತೀರಾ? ಯಾವುದೇ ಸೌಲಭ್ಯ ಇಲ್ಲದಿದ್ದರೂ ಇಚ್ಛಾಶಕಿಯೊಂದು ಇದ್ದರೆ ಸಾಕು ಸಾಧನೆ ಸಾಧ್ಯ ಎನ್ನುವುದನ್ನು ತೋರಿಸಿಕೊಟ್ಟವರಲ್ಲಿ ಐಪಿಎಸ್ ಅಧಿಕಾರಿ ಮನೋಜ್ ಕುಮಾರ್ ಶರ್ಮ ಕೂಡ ಒಬ್ಬರು.

12ನೇ ತರಗತಿಯಲ್ಲಿ ಫೇಲ್, ಆದರೂ ಈ ಫಲಿತಾಂಶ ಆ ಬಾಲಕನನ್ನು ಧೃತಿಗೆಡುವಂತೆ ಮಾಡಲಿಲ್ಲ. ತನ್ನ ಕನಸಿನ ಬೆನ್ನಟ್ಟಿದ ಆ ಬಾಲಕ ಇಂದು ಭಾರತದ ಅತ್ಯಂತ ಕಠಿಣ ಪರೀಕ್ಷೆಯನ್ನೆದುರಿಸಿದ ಆ ಬಾಲಕ ಇಂದು ಮುಂಬೈ ಪೊಲೀಸ್ ಇಲಾಖೆಯ ಹೆಚ್ಚುವರಿ ಆಯುಕ್ತರಾಗಿ ನೇಮಕಗೊಂಡಿದ್ದಾರೆ.

ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ, ಬಿಲ್ಗಾಂವ್ ಎಂಬ ಪುಟ್ಟ ಹಳ್ಳಿಯಲ್ಲಿ ಜನಿಸಿದ ಮನೋಜ್ ಶರ್ಮಾ ಚಿಕ್ಕಂದಿನಿಂದಲೂ ಪರೀಕ್ಷೆ ಅಂಕಗಳ ಬಗ್ಗೆ ಅಷ್ಟೇನೂ ತಲೆಕೆಡಿಸಿಕೊಂಡವರಲ್ಲ,. 10ನೇ ತರಗತಿಯಲ್ಲಿ ತೃತೀಯ ಶ್ರೇಣಿಯಲ್ಲಿ ತೇರ್ಗಡೆಯಗಿದ್ದ ಶರ್ಮಾ, 11ನೇ ತರಗತಿಯಲ್ಲಿ ದ್ವಿತೀಯ ಶ್ರೇಣಿಯಲ್ಲಿ ಪಾಸಾಗಿದ್ದರು. ಆದರೆ ದ್ವಿತೀಯ ಪಿಯುಸಿಯಲ್ಲಿ ಫೇಲ್ ಆಗಿದ್ದರೂ. ಫೇಲ್ ಆದರೂ ದೃತಿಗೆಡದ ಶರ್ಮ ಮತ್ತೆ ಪರಿಕ್ಷೆ ಕಟ್ಟಿ ಪಾಸ್ ಮಾಡಿಕೊಂಡಿದ್ದರು

ಪಿಯುಸಿ ಫೇಲ್ ಆದರೂ ಓದಬೇಕೆಂಬ ಆಸೆಯನ್ನು ಹೊಂದಿದ್ದ ಶರ್ಮ ನಂತರ ಗ್ವಾಲಿಯರ್ ವಿಶ್ವವಿದ್ಯಾನಿಲಯದಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ ವ್ಯಾಸಂಗ ನಡೆಸಿದರು. ಅಷ್ಟೇ ಅಲ್ಲದೇ PhDಯನ್ನೂ ಮುಗಿಸಿದ್ದರು . ಇದಾದ ಬಳಿಕ UPSC ಪರೀಕ್ಷೆಗೆ ಓದಲಾರಂಭಿಸಿದರು. ಈ ಹಾದಿ ಸುಗಮವಾಗಿರಲಿಲ್ಲ, ನಾಲ್ಕು ಬಾರಿ ಪರೀಕ್ಷೆ ಬರೆದ ಬಳಿಕ ಅವರು ತೇರ್ಗಡೆ ಹೊಂದಿದರು. ಈಗ ಇವರು ಮುಂಬೈ ಪೊಲೀಸ್ ಇಲಾಖೆಯ ಹೆಚ್ಚುವರಿ ಆಯುಕ್ತರಾಗಿ ನೇಮಕಗೊಂಡಿದ್ದಾರೆ.

ಕಷ್ಟಪಡುತ್ತಲೇ ತಾನೇನಾದರೂ ಸಾಧಿಸುತ್ತೇನೆಂಬ ನಂಬಿಕೆಯನ್ನೇ ಬಂಡವಾಳವಾಗಿಸಿಕೊಂಡು ಛಲವಿದ್ದರೆ ಯಾವುದೇ ಸೌಲಭ್ಯವಿಲ್ಲದೆಯೂ ಸಾಧನೆ ಮಾಡಲು ಸಾಧ್ಯ ಎನ್ನುವುದನ್ನು ತೋರಿಸಿಕೊಟ್ಟ ಶರ್ಮರ ಜೀವನ ಎಲ್ಲರಿಗೂ ಮಾದರಿ. ಜೀವನದಲ್ಲಿ ಕೊಂಚ ಹಿನ್ನಡೆಯಾದಾಗ ತಾನೇನು ಸಾಧಿಸಲು ಸಾಧ್ಯವಿಲ್ಲ ಎಂದು ಕೈಕಟ್ಟಿ ಕುಳಿತುಕೊಳ್ಳುವ ಪ್ರತಿಯೊಬ್ಬರೂ ಇವರನ್ನು ನೋಡಿ ಕಲಿಯಬೇಕು.

ಅಂದಹಾಗೆ ಮನೋಜ್ ಕುಮಾರ್ ಶರ್ಮಾರ ಜೀವನಗಾಥೆಯನ್ನು ಅವರ ಗೆಳೆಯ ಹಾಗೂ ಕಂದಾಯ ಇಲಾಖೆಯ ಉಪ ಆಯುಕ್ತ ಅನುರಾಗ್ ಪಾಠಕ್ ಮುಂದಿನವಾರ ’12th Fail’ ಎಂಬ ಶೀರ್ಷಿಕೆಯಡಿ ಪುಸ್ತಕವೊಂದನ್ನು ಬಿಡುಗಡೆಗೊಳಿಸುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top