fbpx
ಸಮಾಚಾರ

ಶಾಲಾ ಮಕ್ಕಳೊಂದಿಗೆ ಕ್ರಿಕೆಟ್ ಆಡಿ ಹೃದಯ ಗೆದ್ದ ಟೀಮ್ ಇಂಡಿಯಾ ಆಟಗಾರರು.

ಆಫ್ಘಾನಿಸ್ತಾನದ ವಿರುದ್ಧ ಪಂದ್ಯಕ್ಕೆ ಸಜ್ಜಾಗುತ್ತಿರುವ ಬೆನ್ನಲ್ಲೇ ಸೌಥ್ಯಾಂಪ್ಟನ್‌ ಶಾಲಾ ಮಕ್ಕಳೊಂದಿಗೆ ಟೀಂ ಇಂಡಿಯಾ ಆಟಗಾರರು ಕೆಲ ಸಮಯ ಕಳೆದಿದ್ದು, ಪ್ರಮುಖವಾಗಿ ಹಾರ್ದಿಕ್ ಪಾಂಡ್ಯಾ, ಕೆಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿ ಮಕ್ಕಳೊಂದಿಗೆ ಕ್ರಿಕೆಟ್ ಆಡಿ ಮಕ್ಕಳಿಗೆ ಮನರಂಜನೆ ನೀಡಿದ್ದಾರೆ.

 

ಈ ವೇಳೆ ಮಾತನಾಡಿರುವ ಕೊಹ್ಲಿ, ‘ಕ್ರಿಕೆಟ್ ನಿಜವಾಗಿಯೂ ಮಕ್ಕಳ ಜೀವನದಲ್ಲಿ ಒಂದು ಬದಲಾವಣೆಯನ್ನು ತರಬಲ್ಲದು ಎಂದು ನಾನು ನಂಬುತ್ತೇನೆ. ಇದು ಮನುಷ್ಯನಾಗಿ ನಿಮ್ಮನ್ನು ನಿಜವಾಗಿಯೂ ಸುಧಾರಿಸುತ್ತದೆ. ಏಕೆಂದರೆ ಅದು ನಿಮಗೆ ಜೀವನಕ್ಕೆ ಹೋಲುವ ಹಲವು ಹಂತಗಳ ಮೂಲಕ ಹೋಗುವಂತೆ ಮಾಡುತ್ತದೆ” ಎಂದು ಹೇಳಿದ್ದಾರೆ.

ಅಂತೆಯೇ ಜೀವನದಲ್ಲಾಗುವ ಹಲವು ಏಳು-ಬೀಳುಗಳನ್ನು ಅರ್ಥ ಮಾಡಿಕೊಳ್ಳಲು, ಕ್ಲಿಷ್ಟಕರ ಸನ್ನಿವೇಶಗಳನ್ನು ಹೇಗೆ ನಿಭಾಯಿಸಬೇಕು ಸೇರಿದಂತೆ ಹಲವು ಜೀವನದ ಪಾಠಗನ್ನು ಕ್ರಿಕೆಟ್ ಕಲಿಸಿದೆ ಎಂದು ಕೊಹ್ಲಿ ಹೇಳಿದ್ದಾರೆ.

 

 

ಬಳಿಕ ಮಕ್ಕಳಿಗೆ ಆಟೋಗ್ರಾಫ್ ನೀಡಿ ಜತೆಯಾಗಿ ಫೋಟೋ ಕ್ಲಿಕ್ಕಿಸಿಕೊಂಡರು. ಒಟ್ಟಿನಲ್ಲಿ ಟೀಮ್ ಇಂಡಿಯಾ ಪಾಳೇಯದಲ್ಲಿ ಹೊಸ ಹುಮ್ಮಸನ್ನು ಮೂಡಿಸಿತು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top