fbpx
ರಾಜಕೀಯ

ಈ ಕಾರಣಕ್ಕೆ ಅರ್ಜುನ್ ರೆಡ್ಡಿ ರಿಮೇಕ್ ‘ಕಬೀರ್​ ಸಿಂಗ್’ ನಲ್ಲಿ ತೇಲಿ ಬಂತು ಸ್ಯಾಂಡಲ್ ವುಡ್ ಕ್ವೀನ್ ರಮ್ಯ ಹೆಸರು

ಟಾಲಿವುಡ್‍ನ ದೊಡ್ಡ ಬ್ಲಾಕ್​ಬಸ್ಟರ್ ಹಿಟ್ ಚಿತ್ರ ಅರ್ಜುನ್ ರೆಡ್ಡಿ ಈ ಸಿನಿಮಾ ಬಂದ ನಂತರ ವಿಜಯ್ ದೇವರಕೊಂಡ ಎಂಬ ನಟ ಬೆಳಗಾಗೋದರಲ್ಲಿ ತೆಲುಗು ಸಿನಿಮಾ ಪ್ರೇಕ್ಷಕರ ನೆಚ್ಚಿನ ನಟ ಆಗಿ ಹೋಗಿದ್ದರು, ಆಂಧ್ರ ಸೇರಿದಂತೆ ದಕ್ಷಿಣ ಭಾರತದಲ್ಲಿ ಈ ಚಿತ್ರ ಸಡ್ಡು ಮಾಡಿ ನಾರ್ತ್ ಇಂಡಿಯಾ ಬಾಗಿಲು ತಟ್ಟಿತ್ತು, ಒಟ್ಟಿನಲ್ಲಿ, ತೆಲುಗಿನ ಅರ್ಜುನ್ ರೆಡ್ಡಿ ಚಿತ್ರವು ಟಾಲಿವುಡ್ ಮೀರಿ ಇಡೀ ಇಂಡಿಯಾದಲ್ಲಿ ಸದ್ದು ಮಾಡಿತ್ತು. ಇದೀಗ ಮುಂಬರುವ ಅರ್ಜುನ್ ರೆಡ್ಡಿ ರೀಮೇಕ್ ಚಿತ್ರವಾಗಿರುವ ಕಬೀರ್ ಸಿಂಗ್ ಕೂಡ ಸಖತ್ ಸೌಂಡ್ ಮಾಡುವ ನಿರೀಕ್ಷೆ ಹುಟ್ಟಿಸಿದೆ.

 

 

ವಿಜಯ್ ದೇವರಕೊಂಡ ಅವರ ಸಿನಿ ಬದುಕನ್ನೇ ಬದಲಿಸಿದ ಪಾತ್ರವನ್ನ ಈಗ ಶಾಹಿದ್ ಕಪೂರ್ ನಿರ್ವಹಿಸಿದ್ದಾರೆ. ‘ಅರ್ಜುನ್​ ರೆಡ್ಡಿ’ ಸಿನಿಮಾದ ಹಿಂದಿ ರಿಮೇಕ್​ ‘ಕಬೀರ್ ಸಿಂಗ್’ ಆಗಿ ತೆರೆಮೇಲೆ ಬಂದಿದ್ದಾರೆ ,ಮೂಲ ಚಿತ್ರ ನಿರ್ದೇಶನ ಮಾಡಿದ್ದ ಸಂದೀಪ್ ರೆಡ್ಡಿ ವಾಂಗ ಕಬೀರ್ ಸಿಂಗ್ ನಿರ್ದೇಶನ ಮಾಡಿದ್ದಾರೆ .

‘ಅರ್ಜುನ್ ರೆಡ್ಡಿ’ ಸಿನಿಮಾ ಮೂಲತಃ ತೆಲುಗು ಚಿತ್ರವಾಗಿದ್ದರೂ ಸಹ ಮಂಗಳೂರಿನ ಮೆಡಿಕಲ್ ಕಾಲೇಜೊಂದರಲ್ಲಿ ಹೌಸ್​ ಸರ್ಜನ್ ಆಗಿರುತ್ತಾನೆ. ಹೀಗಾಗಿ ತುಳು, ಕನ್ನಡದ ಸಂಭಾಷಣೆಯನ್ನು ಸಹ ಅಲ್ಲಲ್ಲಿ ಪಾತ್ರಕ್ಕೆ ಸನ್ನಿವೇಶಕ್ಕೆ ತಕ್ಕಂತೆ ಸೇರಿಸಲಾಗಿತ್ತು ಈಗ ಮತ್ತೆ ಹಿಂದಿ ಚಿತ್ರ ಕಬೀರ್ ಸಿಂಗ್ ನಲ್ಲೂ ಕನ್ನಡ ಭಾಷೆ ಬಳಕೆಯಾಗಿದೆ .

 

 

ಎಂಬಿಬಿಎಸ್​ ಮುಗಿಸಿದ ನಾಯಕ ತನ್ನ ಗೆಳೆಯರೊಂದಿಗೆ ಪಾರ್ಟಿ ಮಾಡುತ್ತಿರುತ್ತಾನೆ. ಆಗ ಆ ಗ್ರೂಪ್ ನಲ್ಲಿದ್ದ ಹುಡುಗಿಯೊಬ್ಬಳು ಪ್ರೇಮ್​ ನಿರ್ದೇಶನದ ಸೂಪರ್​ ಹಿಟ್​ ಸಿನಿಮಾ ‘ಎಕ್ಸ್​ಕ್ಯೂಸ್​ ಮಿ’ಯ ‘ಪ್ರೀತ್ಸೆ ಅಂತ ಪ್ರಾಣ ತಿನ್ನೋ ಪ್ರೇಮಿ ನೀನು ಯಾರೋ?’ ಹಾಡನ್ನು ಹಾಡುತ್ತಾಳೆ! ಈ ಹಾಡನ್ನು ಕೇಳಿದ ಪ್ರೇಕ್ಷಕರು ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಅವರನ್ನು ನೆನೆಯಲು ಮರೆಯಲಿಲ್ಲ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top