fbpx
ಸಮಾಚಾರ

ಸಕ್ಕರೆ ಖಾಯಿಲೆ , ಹುಣ್ಣು,ಅಲ್ಸರ್, ಗ್ಯಾಸ್ಟ್ರಿಕ್ , ಬಿ .ಪಿ ಎಲ್ಲದಕ್ಕೂ ಬೇಕು ಲೋಳೆಸರ(ಅಲೋವೆರಾ)

ಮಧುಮೇಹ(ಸಕ್ಕರೆ ಕಾಯಿಲೆ) ನಿಯಂತ್ರಣಕ್ಕೆ ಲೋಳೆಸರ.

 

ಲೋಳೆಸರ ಇದು ನೆಲದಲ್ಲೇ ಹರಡಿಕೊಂಡಿರುವ ಗಿಡ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಇದು ಒಂದು ಗಿಡ ಇದ್ದೆ ಇರುತ್ತದೆ. ಇದ್ದಕ್ಕೆ ತಂಪಾದ ವಾತಾವರಣ ಅತ್ಯಗತ್ಯ.ಅತಿಯಾದ ಬಿಸಿಲಿಗೆ ಧಗೆಗೆ ಇದರ ತುದಿಗಳು ಒಣಗಿ ಹೋಗುತ್ತವೆ.ಇದರಲ್ಲಿ ಅನೇಕ ಔಷದೀಯ ಗುಣಗಳಿವೆ.ಭಾರತೀಯ ಆಯುರ್ವೇದದಲ್ಲಿ ಇದ್ದನ್ನು ಬಳಸುತ್ತಾರೆ.

 

ನೀವು ಸಕ್ಕರೆ ಖಾಯಿಲೆ ಅಂದರೆ ಮಧುಮೇಹ ದಿಂದ ಬಳಲುತ್ತಿದ್ದರೆ ಆಯುರ್ವೇದ ವ್ಯದ್ಯರ ಬಳಿ ಹೋದರೆ ಅವರು ನಿಮಗೆ ಲೋಳೆಸರವನ್ನು ದಿನನಿತ್ಯ ಸೇವಿಸಲು ಹೇಳುತ್ತಾರೆ.

 

 

ಇಂದಿನ ಜಗತ್ತಿನಲ್ಲಿ ವಿಜ್ಞಾನಿಗಳು ಕೂಡ ಇದ್ದನ್ನು ಕಂಡು ಹಿಡಿದ್ದಿದ್ದಾರೆ.ಲೋಳೆಸರವೂ ಮಧುಮೇಹದಿಂದ ಬಳಲುತ್ತಿರುವವರಿಗೆ ಒಂದು ಉತ್ತಮ ಔಷಧಿಯಾಗಿ ಕಾರ್ಯ ನಿರ್ವಹಿಸುತ್ತದೆ.

 

 

ಲೋಳೆಸರವು ನಮ್ಮ ಚರ್ಮದ ಮೇಲೆ ಆಗುವ ಗಾಯ,ಸುಟ್ಟ ಗಾಯ,ಕತ್ತರಿಸಿದ ಗಾಯ,ಗಜ್ಜಿ, ಇತ್ಯಾದಿಗಳನ್ನು ಗುಣ ಪಡಿಸುವ ಶಕ್ತಿಯನ್ನು ಹೊಂದಿದೆ.

ಅಷ್ಟೇ ಅಲ್ಲದೆ ಹೊಟ್ಟೆಯೊಳಗೆ ಆಗುವ ಹುಣ್ಣು,ಅಲ್ಸರ್, ಗ್ಯಾಸ್ಟ್ರಿಕ್ ಸಮಸ್ಯೆ ಮತ್ತು ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು(ಮಧುಮೇಹ) ಕೂಡ ನಿಯಂತ್ರಣದಲ್ಲಿಡುವ ಕೆಲಸ ಮಾಡುತ್ತದೆ.

 

 

ಅಧಿಕ ಗ್ಲುಕೋಸ್ ಪ್ರಮಾಣವನ್ನು ಕಡಿಮೆ ಮಾಡುವ ಶಕ್ತಿ ಈ ಲೋಳೆಸರಕ್ಕಿದೆ.
ಲೋಳೆಸರವು 75 ಸಕ್ರಿಯವಾದ ಅಂಶಗಳನ್ನು ಒಳಗೊಂಡಿದೆ. ಸಸ್ಯಗಳ ಹೊರ ತೊಗಟೆಯಲ್ಲಿ ಮತ್ತು ಒಳಗಿನ ಜೆಲ್ ರೀತಿಯ ದ್ರವದಲ್ಲಿ ಹೊಂದಿದೆ.ಇದರಲ್ಲಿರುವ ಸಕ್ರಿಯ ಸಂಯುಕ್ತಗಳೆಂದರೆ ಕಿಣ್ವಗಳು,ಸ್ಯಾಲಿಸಿಲಿಕ್ ಆಮ್ಲಗಳು,ಪೈಟೋಸ್ಟೆರಾಲ್ಸ್, ಸೆಫೋನಿನ್ಸ್,ಉತ್ಕರ್ಷಣ ರೋಗ ನಿರೋಧಕಗಳು,ಅಮೈನೋ ಆಮ್ಲಗಳು.ಲಾಭದಾಯಕ ಜ್ಯೇವಿಕ ಸಕ್ರಿಯ ಜಾಡಿನ ಅಂಶಗಳಾದ ಜಿಂಕ್,ಮ್ಯಾಂಗನೀಸ್,ಕ್ರೋಮಿಯಂ ಮತ್ತು ಮೆಗ್ನೀಸಿಯಂ ನಂತಹ ಅಂಶಗಳನ್ನು ಒಳಗೊಂಡಿದೆ.

 

 

ಈಗ ನೀವು ನೋಡಿರುವ ಪ್ರಕಾರ ಎಲ್ಲಾ ಔಷಧಿ ಮಳಿಗೆಗಳಲ್ಲಿಯೂ ಕೂಡ ಲೋಳೆಸರ ದಿಂದ ಮಾಡಿರುವ ಕ್ಯಾಪಸೂಲ್,ಮಾತ್ರೆ,ಜ್ಯೂಸ್ ಬಾಟಲಿಗಳಲ್ಲಿ ದೊರೆಯುತ್ತದೆ.

 

ಮನೆಯ ಹತ್ತಿರ ನೀರಿನ ಅನುಕೂಲ ಇರುವವರು ಕೂಡ ಇದನ್ನು ಸುಲಭವಾಗಿ ಬೆಳೆಯಬಹುದು, ಮತ್ತು ನಿಮಗೆ ಬೇಕಾದ ಸಮಯದಲ್ಲಿ ಕತ್ತರಿಸಿ ಯಾವುದೇ ಜ್ಯೂಸ್ ಮಾಡುವಾಗ ಅದರಲ್ಲಿ ಇದನ್ನು ಸ್ವಲ್ಪ ಮಿಶ್ರಣ ಮಾಡಿ ಕುಡಿಯಬಹುದು. ಹಾಗೆಯೇ ತಿನ್ನಲು ಅಥವಾ ಬರೀ ಲೋಳೆಸರದ ಜ್ಯೂಸ್ ಕುಡಿಯಲು ತುಂಬಾ ಕಹಿ ಆದ್ದರಿಂದ ಬೇರೆ ಹಣ್ಣಿನ ರಸಗಳ ಜೊತೆ ಮಿಶ್ರಣಕ್ಕೆ ಸೇರಿಸಿ ಕುಡಿಯಬಹುದು.

 

 

ನೀವು ಯಾವುದಾದರೂ ಮಧುಮೇಹ ಖಾಯಿಲೆಗೆ ಔಷಧಿಯನ್ನು ತೆಗೆದುಕೊಳ್ಳುವುದಾದರೆ ಈ ಅಲೋವೆರ ಅಥವಾ ಲೋಳೆಸರ ಬೆರೆಸಿದ ಜ್ಯೂಸ್ ಜೊತೆ ಔಷಧಿಯನ್ನು ತೆಗೆದುಕೊಳ್ಳಬೇಡಿ ಹೀಗೆ ಮಾಡುವುದರಿಂದ ಅದು ಔಷದಿಯೂ ನಮ್ಮ ಶರೀರದಲ್ಲಿ ಹೀರಿಕೊಳ್ಳುವ ಪ್ರಕ್ರಿಯೆಗೆ ಅಡ್ಡಿಪಡಿಸುತ್ತದೆ.ಆದ್ದರಿಂದ ನಿಮ್ಮ ವ್ಯದ್ಯರ ಸಲಹೆಯಂತೆ ಮುಂದುವರಿಯಿರಿ.

 

ನೀವು ಒಂದು ಬಾರಿ ಲೋಳೆಸರದ ಜ್ಯೂಸ್ ಕುಡಿಯಲು ಪ್ರರಂಭಿಸಿದ್ದರೆ ನಿಮ್ಮ್ ವ್ಯೆದ್ಯರ ಸಲಹೆಯನ್ನು ಕೇಳಿ ಮುಂದುವರಿದರೆ ವಳ್ಳೆಯದು ಯಾಕೆಂದರೆ ಅವರು ಕೊಡುವ ಔಷಧಿಗಳು ಇದರ ಮೇಲೆ ಕೆಟ್ಟ ಪರಿಣಾಮ ಬೀರುವುದನ್ನು ತಡೆಯಬಹುದು.ಹಾಗೂ ಒಂದು ತಿಂಗಳಿಗೊಮ್ಮೆ ಅಥವಾ ನಿಮ್ಮ ಅನುಕೂಲಕ್ಕೆ ತಕ್ಕಂತೆ ಆಗ ಆಗ ರಕ್ತದಲ್ಲಿರುವ ಸಕ್ಕರೆಯ ಪ್ರಮಾಣವನ್ನು ಪರೀಕ್ಷಿಸಿಕೊಂಡು ಸೂಕ್ತ ಸಲಹೆಯನ್ನು ಪಡೆದುಕೊಳ್ಳುವುದು ಉತ್ತಮ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top