fbpx
ರಾಜಕೀಯ

ಸ್ಮೃತಿ ಇರಾನಿ ಮಗಳಿಗೆ ಪೋಲಿಗಳ ಕಾಟ, ಸಿಡಿದೆದ್ದ ಕೇಂದ್ರ ಸಚಿವೆ

ಒಂದು ಕಾಲಕ್ಕೆ ಹಿಂದಿ ಸೀರಿಯಲ್ ರಂಗದಲ್ಲಿ ನಟಿಸಿ ತನ್ನ ಲುಕ್ಸ್ ನಿಂದ ಎಲ್ಲರ ಮನೆಯ ಮಗಳು ಸೊಸೆಯಂತೆ ಪಕ್ಕದ ಮನೆ ಹುಡುಗಿಯಾಗಿ ಮೆರೆದಿದ್ದ ಸ್ಮೃತಿ ಇರಾನಿ ಇದಕ್ಕೂ ಮೊದ್ಲು ಮಾಡೆಲ್ ಆಗಿ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದು ಸುಳ್ಳಲ್ಲ, ತನ್ನ ಕೆರಿಯರ್ ಬದಲಾಯಿಸಿಕೊಂಡ ಸ್ಮೃತಿ ಇರಾನಿ ಮುಂದೆ ಬಿಜೆಪಿ ಪಕ್ಷ ಸೇರಿ ತನ್ನ ಪೊಲಿಟಿಕಲ್ ಇಮೇಜ್ ಬೆಳೆಸಿಕೊಂಡು ಈಗ ಮೋದಿಯವರ ಆಡಳಿತದಲ್ಲಿ ಕೇಂದ್ರ ಸಚಿವೆಯಾಗಿದ್ದಾರೆ.

ಕೇಂದ್ರ ಸಚಿವೆ ಸ್ಮೃತಿ ಇರಾನಿ ತಮ್ಮ ಮಗಳೊಂದಿಗಿನ ಸೆಲ್ಫಿಯನ್ನು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದರು. ಅಮ್ಮನೊಂದಿಗಿನ ಸೆಲ್ಫಿ ನೋಡಿದ ಅವರ ಮಗಳ ಕ್ಲಾಸ್​ ಗೆಳೆಯರು ಆಕೆಯನ್ನು ಅವಮಾನಿಸಿ, ಮಾನಸಿಕ ಹಿಂಸೆ ನೀಡಿದ್ದಾರೆ ಎನ್ನಲಾಗಿದೆ .

 

 

ತರಗತಿಯಲ್ಲಿ ಆದ ಇರುಸುಮುರುಸನ್ನು ತಾಯಿಯ ಹಂಚಿಕೊಂಡಿದ್ದಾರೆ ಎನ್ನಲಾಗಿದೆ , ಸ್ಮೃತಿ ಇರಾನಿ, ಮಗಳು ಜೊಯಿಶ್​ ಇರಾನಿ ಮುಜಗರ ಪಟ್ಟಿದ್ದು, ತನ್ನ ಪೋಟೋವನ್ನು ಡಿಲೀಟ್​ ಮಾಡುವಂತೆ ಅಮ್ಮನ ಮುಂದೆ ಕಣ್ಣೀರು ಸುರಿಸಿದ್ದಾಳೆ. ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಈ ಕುರಿತು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದು, ಮಗಳನ್ನು ಚುಡಾಯಿಸಿದ ಗೆಳೆಯರಿಗೆ ಸೂಕ್ತ ಉತ್ತರ ನೀಡಿದ್ದಾರೆ.

 

 

View this post on Instagram

 

I deleted my daughter’s selfie yesterday coz an idiot bully in her class ,A Jha ,mocks her for her looks & tells his pals in class to humiliate her for how she looks in her mother’s insta post. My child pleaded with me ‘ Ma please delete it, they are making fun of me’. I obliged coz I could not stand her tears. Then I realised my act just supported the bully . So Mr Jha , my daughter is an accomplished sports person, record holder in Limca Books, 2 Nd Dan black belt in Karate, at the World Championships has been awarded bronze medal twice; is a loving daughter and yes damn beautiful. Bully her all you want , she will fight back. She is Zoish Irani and I’m proud to be her Mom ❤️

A post shared by Smriti Irani (@smritiiraniofficial) on

ಈ ಕುರಿತು ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿರುವ ಸ್ಮೃತಿ ಇರಾನಿ, “ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಮಗಳೊಂದಿಗೆ ನಾನು ತೆಗೆದಿದ್ದ ಪೋಟೋವನ್ನು ತೆಗೆದುಹಾಕಿದ್ದೇನೆ, ಆಕೆಯ ಜೊತೆಗೆ ಓದೋ ಹುಡುಗ ಜಾ ಎಂಬುವವನು ಆಕೆಯ ಅಂದದ ಬಗ್ಗೆ ಕಾಮೆಂಟ್ ಮಾಡುವುದರ ಜೊತೆಗೆ ತನ್ನ ತಾಯಿಯ ಜೊತೆಗೆ ಆಕೆ ಹೇಗೆ ಕಾಣಿಸುತ್ತಾಳೆ ನೋಡಿ ಎಂದು ಇತರ ಗೆಳೆಯರ ಜೊತೆ ಸೇರಿಕೊಂಡು ರೇಗಿಸಿದ್ದಾನೆ ,ಇದರಿಂದ ಮನನೊಂದ ನನ್ನ ಮಗಳು ನನ್ನ ಬಳಿಬಂದು ‘ಅಮ್ಮ ಆ ಫೋಟೋ ಡಿಲೀಟ್ ಮಾಡು ಎಂದು ಅಳ ತೊಡಗಿದಳು’ ,ಅವಳು ಅಳುವುದನ್ನು ನೋಡಲಾರದೆ ನಾನು ತಕ್ಷಣ ಆ ಫೋಟೋ ಡಿಲೀಟ್ ಮಾಡಿಬಿಟ್ಟೆ ಆಮೇಲೆ ನನಗೆ ಅನಿಸಿತ್ತು ಇದು ಛೇಡಿಸುವವರಿಗೆ ಮತ್ತಷ್ಟು ಪ್ರೋತ್ಸಾಹ ಮಾಡಿದಂತೆ ಆಗುತ್ತದೆ.

ಆದ್ದರಿಂದ ಮಿಸ್ಟರ್ ಜಾ ನನ್ನ ಮಗಳು ಓರ್ವ ಕ್ರೀಡಾಪಟುವಾಗಿದ್ದು, ಲಿಮ್ಕಾ ದಾಖಲೆ ನಿರ್ಮಿಸಿದ್ದಾಳೆ. ಅಲ್ಲದೇ ಕರಾಟೆಯಲ್ಲಿ ಬ್ಲಾಕ್​ ಬೆಲ್ಟ್​ ಹೊಂದಿರುವ ಈಕೆ ವಿಶ್ವ ಚಾಂಪಿಯನ್​ನಲ್ಲಿ ಕಂಚಿನ ಪದಕ ಜಯಿಸಿದ್ದಾಳೆ, ಹೌದು ಆಕೆ ಸುಂದರವಾಗಿದ್ದಾಳೆ ಹಾಗೆಯೆ ಬೇಕಾದಷ್ಟು ಸಾಧನೆ ಮಾಡಿದ್ದಾಳೆ ,ಬೇಕಾದಷ್ಟು ಛೇಡಿಸಿ ಆಕೆ ನಿಮ್ಮ ವಿರುದ್ಧ ಹೋರಾಡುತ್ತಾಳೆ, ಜೊಯಿಶ್​ ಇರಾನಿ ಅವಳು ನನ್ನ ಮಗಳು ಆಕೆಯ ತಾಯಿಯಾಗಿರುವುದಕ್ಕೆ ಹೆಮ್ಮೆಯಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top