fbpx
ಸಿನಿಮಾ

ಟ್ರಾಲ್ ದೇವತೆ ರಶ್ಮಿಕಾಗೆ ಟಾಂಗ್ ಕೊಟ್ಟ ನೆಟ್ಟಿಗರು, ಮತ್ತೆ ತಬ್ಬಿಬ್ಬಾದ ಕಿರಿಕ್ ಹುಡುಗಿ

ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಬ್ರೇಕ್​ ಅಪ್​ ಆಗಿದ್ದೇ ಆಗಿದ್ದು ಇಬ್ಬರ ಫ್ಯಾನ್ಸ್, ಟಾರ್ಗೆಟ್​ ಮಾಡೋಕ್ಕೆ ಶುರು ಮಾಡಿ ಟ್ರೋಲ್ ಮಾಡಿಕೊಂಡು ಕಾಲ ಕಳೆಯುತ್ತಿದ್ದಾರೆ. ಇದೀಗ ಮತ್ತೆ ರಕ್ಷಿತ್ ಫ್ಯಾನ್ಸ್​​ ರಶ್ಮಿಕಾ ಮೇಲೆ ಗರಂ ಆಗಿದ್ದಾರೆ.. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್ ಇರುವ ರಶ್ಮಿಕಾ ಇನ್ನು ಶ್ರೀಮನ್ನಾರಾಯಣ ಚಿತ್ರದ ಬಗ್ಗೆ ಯಾಕೆ ಪ್ರತ್ರಿಕ್ರಿಯೆ ನೀಡಿಲ್ಲ ಎಂಬುದು ಫ್ಯಾನ್ಸ್‌ಗಳ ಆಕ್ರೋಶ.

ಇದಕ್ಕೆ ಕಾರಣವಾಗಿದ್ದು ರಕ್ಷಿತ್ ಶೆಟ್ಟಿ ಹುಟ್ಟುಹಬ್ಬ ಮತ್ತು ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಟೀಸರ್. ತೆಲುಗು ಚಿತ್ರದ ಟೀಸರ್ ಮತ್ತು ಪೋಸ್ಟರ್ ಗಳನ್ನು ಹಂಚಿಕೊಳ್ಳುತ್ತೀರುವ ರಶ್ಮಿಕಾಗೆ ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಟೀಸರ್ ಯಾಕೆ ಕಾಣಿಸುತ್ತಿಲ್ಲಾ? ಎಂದು ನಟ್ಟಿಗರು ಪ್ರಶ್ನಿಸುತ್ತಿದ್ದಾರೆ.


ಇಷ್ಟು ಸಾಲದು ಎಂಬಂತೆ ನಟಿಯ ಹಾಟ್ ಫೋಟೋಗಳು ಒಂದರ ಮೇಲೆ ಮತ್ತೊಂದು ಹೊರಬರುತ್ತಿದ್ದು, ಬೋಲ್ಡ್​ ಫೋಟೋಶೂಟ್​ಗಳಿಗೆ ಪೋಸ್​ ನೀಡಿದ್ದಾರೆ ಇಷ್ಟು ಆದರೆ ಓಕೆ ಲಿಪ್ ಲಾಕ್ ದೃಶ್ಯಗಳು ಹಸಿಬಿಸಿ ದೃಶ್ಯಗಳು ಹೆಚ್ಚಾಗಿವೆ ಎಂದು ಕಂಪ್ಲೇಂಟ್ ಮಾಡುವ ಟ್ರಾಲಿಗರು ತಮ್ಮ ಟೀಕಾಸ್ತ್ರ ಪ್ರಯೋಗ ಮಾಡಿದ್ದಾರೆ , ‘ರಶ್ಮಿಕಾ ಎಷ್ಟು ತೆಳ್ಳಗಿದ್ದಾಳೆ’ ಎಂದು ಹೀಯಾಳಿಸಿದ್ದರು. ಇನ್ನೂ ಕೆಲವರು, ‘ಇಷ್ಟೊಂದು ಆಫರ್​ಗಳು ಬರುತ್ತಿದ್ದರೂ ಈ ರೀತಿ ಹಾಟ್ ಫೋಟೋಶೂಟ್​ ನಡೆಸುವ ಅಗತ್ಯವಿತ್ತೇ’ ಎಂದು ಪ್ರಶ್ನಿಸಿದ್ದರು.

ಇದಕ್ಕೆ ಉತ್ತರ ಕೊಟ್ಟ ಕಿರಿಕ್ ಹುಡುಗಿ “ತೆಳ್ಳಗಿದ್ದೀರೋ ಅಥವಾ ದಪ್ಪಗಿದ್ದೀರೋ, ಉದ್ದವಾಗಿದ್ದೀರೋ ಅಥವಾ ಎತ್ತರವಾಗಿದ್ದೀರೋ, ನಿಮ್ಮ ಚರ್ಮದ ಬಣ್ಣ ಯಾವುದೇ ಇರಲಿ ನೀವು ನೀವಾಗಿರಿ ನಿಮ್ಮನ್ನು ಪ್ರೀತಿಸಿ” ಎಂಬ ಸಂದೇಶ ರವಾನೆ ಮಾಡಿದ್ದರು.

 

 

ಇದರಿಂದ ಕೆಂಡ ಮಂಡಲರಾದ ಕಿರಿಕ್ ಹುಡುಗರು “ನೀವು ಬಾಡಿ ಶೇಪ್ ನಲ್ಲಿಟ್ಟುಕೊಳ್ಳಲು ಜಿಮ್ ನಲ್ಲಿ ಕಸರತ್ತು ಮಾಡುತ್ತೀರಿ , ಸುಂದರವಾಗಿ ಕಾಣಲು ಇನ್ನಿಲ್ಲದ ಮಾರ್ಗ ಹುಡುಕುತ್ತೀರಿ , ಬಟ್ಟೆಗಳಿಗಾಗಿ ಡಿಸೈನರ್ ಮೊರೆ ಹೋಗುತ್ತೀರಿ ನೀವು ಇವೆಲ್ಲ ಬಿಟ್ಟು ಸಾಮಾನ್ಯರಂತೆ ಇರಿ” ಎಂದು ಕಾಮೆಂಟ್ ಮಾಡಲು ಶುರು ಹಚ್ಚಿದ್ದೆ ತಡ ಕಿರಿಕ್ ಹುಡುಗಿ ರಶ್ಮಿಕಾ ಕಿರಿಕ್ ಹುಡುಗನ ಕಾಮೆಂಟ್ ಡಿಲೀಟ್ ಮಾಡಿದ್ದಾರೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top