fbpx
ಸಮಾಚಾರ

ಸಹವಾಸದಿಂದ ಸನ್ಯಾಸಿ ಕೆಟ್ಟ – ಎರಡು ಗಿಳಿಗಳ ಕಥೆ

ಎರಡು ಗಿಳಿಗಳು.

ಕಾಡಿನ ಬಳಿ ಕಲುರಾಮ ಎಂಬಾತ ವಾಸಿಸುತ್ತಿದ್ದನು.ಕಲುರಾಮ ಪಕ್ಷಿಗಳನ್ನು ಮತ್ತು ಪ್ರಾಣಿಗಳನ್ನು ಹಿಡಿದು ಅವುಗಳನ್ನು ಜನರಿಗೆ  ಮಾರಿ ಹಣ ಸಂಪಾದಿಸುತ್ತಿದ್ದನು.

ಒಂದು ದಿನ ಕಲುರಾಮ ಕಾರಿನೊಳಗೆ ಹೋಗಿ ಎರಡು ಮಾತನಾಡುವ ಗಿಳಿಗಳನ್ನು ಹಿಡಿದನು.ಅವನು ಆ ಸಂಜೆ ಪಟ್ಟಣಕ್ಕೆ ಹೋಗಿ ಅವೆರಡೂ ಗಿಳಿಗಳನ್ನು ಮಾರಿ ತುಂಬಾ ಹಣ ಗಳಿಸಲು ಆಸೆಯಿಂದ ಹೊರಟನು.

 

 

ಕಲುರಾಮ ಒಂದು ಗಿಳಿಯನ್ನು ಪ್ರಾಣಿಗಳನ್ನು ಕೊಂದು ಮಾಂಸ ಮಾರುವ ಒಬ್ಬ ಕಟುಕನಿಗೆ ಮಾರಿದನು.

ಕಲುರಾಮ ಮತ್ತೊಂದು ಗಿಳಿಯನ್ನು ಯಾವಾಗಲೂ ದೇವರು ನಾಮವನ್ನು ಹಾಡುವ ಒಬ್ಬ ದಯಾಮಯಿ ಮತ್ತು ಬುದ್ದಿವಂತ ಹರಿದಾಸರಿಗೆ ಮಾರಿದನು.

ದಿನಪೂರ್ತಿ ಮೊದಲನೆಯ ಗಿಳಿ ಆ ಕಟುಕ ಕಿರುಚುವುದನ್ನು ಕೇಳುತ್ತಿತ್ತು. “ಹಸುವನ್ನು ಕರೆದು ತಾ , ಅದನ್ನು ಸಾಯಿಸು,ಈ ಮೇಕೆಯನ್ನು ಕತ್ತರಿಸು,ಸಾಯಿಸು,ಕತ್ತರಿಸು ಇದನ್ನು ಕತ್ತರಿಸು……….

ಹರಿದಾಸನ ಮನೆಯಲ್ಲಿ ತುಂಬಾ ಜನರು ಪವಿತ್ರ ಹಾಡುಗಳನ್ನು ಕೇಳಲು ಬರುತ್ತಿದ್ದರು “ ಹರೇ ರಾಮ ,ಹರೇ ರಾಮ,ರಾಮ ರಾಮ ಹರೇ ಹರೇ”ಎಂದು  ಗಿಳಿಯ ಜೀವನ  ದೇವರ ಹಾಡುಗಳಿಂದಲೇ  ತುಂಬಿ ಹೋಯಿತು.

ಕೆಲವು ತಿಂಗಳ ನಂತರ ಕಲುರಾಮ ಗಿಳಿಗಳು ಹೇಗಿವೆಯೆಂದು ನೋಡಲು ಪಟ್ಟಣಕ್ಕೆ ಹಿಂತಿರುಗಿ ಬಂದನು.

ಕಲುರಾಮ ಮೊದಲು ಕಟುಕನ ಮನೆಗೆ ಬಂದನು,ತಾನು ಮಾರಿದ ಪಕ್ಷಿಯ ಬಳಿಗೆ ಹೋದನು.ಕಲುರಾಮನು  ಪ್ರೀತಿಯ “ ಮಿತ್ರ” ಎಂಬುದಕ್ಕೆ ಗಿಳಿಯು  ಉತ್ತರಿಸಿತು, “ಸಾಯಿಸು! ಅವನನ್ನು ಹಿಡಿ,ಅವನ ತಲೆಯನ್ನು ಕಡಿದು ಹಾಕು!” ಇದನ್ನು ಕಂಡ ಕಲುರಾಮನಿಗೆ ದುಃಖವಾಯಿತು, ಹಾಗೆ ಭಯವೂ ಆಯಿತು.

 

ಕಲುರಾಮ ನಂತರ ಹರಿದಾಸರ ಮನೆಗೆ ಹೋದನು ಅಲ್ಲಿ ಅವನು ಒಂದು ಮೃಧುವಾದ ದ್ವನಿಯನ್ನು ಕೇಳಿದನು.  “ಸ್ವಾಗತ ! ಸ್ವಾಗತ!  ಹರೇ ರಾಮ,ಹರೇ ರಾಮ ,ರಾಮ ರಾಮ ಹರೇ ಹರೇ”ಎರಡನೆಯ ಗಿಳಿಯು ಮಧುರವಾದ ಶಬ್ದಗಳನ್ನು ಕೇಳಿ ಅವನಿಗೆ ಆಶ್ಚರ್ಯವಾಯಿತು.

ಮೊದಲನೆಯ ಗಿಳಿಯು ಕಟುಕನ ಜೊತೆಗೆ ವಾಸಮಾಡುತ್ತಾ ಅವನ ಕಟು ಭಾಷೆಯನ್ನು ಕಲಿತಿದೆಯಾದರು ಕಲುರಾಮನಿಗೆ ಅರಿವಾಯಿತು.

ಎರಡನೆಯ ಗಿಳಿಯು ಹರಿದಾಸರ ಸಮೀಪ ವಾಸಮಾಡುತ್ತಾ ದೇವರ ನಾಮವನ್ನು ಕಲಿತಿತ್ತು.

ನೀತಿ- ಇದು  ಪ್ರಾಣಿ ಪಕ್ಷಿಗಳಿಗೆ ಮಾತ್ರವಲ್ಲದೆ  ಮನುಷ್ಯರಾದ ನಮಗೂ ಕೂಡ ಅನ್ವಯಿಸುತ್ತದೆ.ಅದು ಹೇಗೆಂದರೆ ನಾವು ಯಾರ ಸಹವಾಸ ಮಾಡುತ್ತೇವೋ ಅವರ ಗುಣ ಹೇಗಿರುವುದೋ ಹಾಗೆ  ಅವರ ಜೊತೆ ಸೇರಿ ಅವರ ಜೊತೆ ಇದ್ದು ನೋಡಿ ನೋಡಿ  ಅದೇ ಗುಣ ನಮಗೂ ಬರುವುದು.

ಆದ್ದರಿಂದ ನಾವು ಸ್ನೇಹಿತರನ್ನಾಗಿ ಆಯ್ಕೆ ಮಾಡಿಕೊಳ್ಳುವಾಗ ಬಹಳ ಜಾಗರೂಕತೆಯಿಂದ ಆಯ್ಕೆ ಮಾಡಿಕೊಳ್ಳಬೇಕು.ಒಳ್ಳೆಯ ಸ್ನೇಹಿತರನ್ನು,ಒಳ್ಳೆಯ ಗುಂಪನ್ನು ಸೇರಬೇಕು.ಕೆಟ್ಟ,ದುರ್ಜನರ ಸಹವಾಸ  ಮಾಡಿದರೆ ಅವರ  ಜೊತೆ ಇದ್ದು ಇದ್ದು  ನಾವು  ಕೂಡ  ಕೆಟ್ಟದನ್ನೇ ಕಲಿತು ಬಿಡುತ್ತೇವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top