fbpx
ಸಮಾಚಾರ

ರಾಧಿಕಾ ಯಶ್ ಪುತ್ರಿಗೆ ‘ಆಯ್ರ'(AYRA) ಎಂದು ನಾಮಕರಣ.

ರಾಕಿಂಗ್ ಸ್ಟಾರ್ ಯಶ್ ಮತ್ತು ಸ್ಯಾಂಡಲ್ ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ಪುತ್ರಿಯ ನಾಮಕರಣ ಕಾರ್ಯಕ್ರಮ ಇಂದು ನಡೆದಿದ್ದು ‘ಆಯ್ರ’ ಎಂದು ನಾಮಕರಣ ಮಾಡಲಾಗಿದೆ.. ಬೆಂಗಳೂರಿನ ತಾಜ್‌ ವೆಸ್ಟ್‌ ಎಂಡ್‌ನಲ್ಲಿ ಒಕ್ಕಲಿಗರ ಸಂಪ್ರದಾಯದಂತೆ ನಾಮಕರಣ ನಡೆದಿದೆ.

 

 

ಬೆಳಗ್ಗೆ 11 ಗಂಟೆಯಿಂದ ಶತಭಿಷಾ ನಕ್ಷತ್ರ, ಸಿಂಹ ಲಗ್ನದಲ್ಲಿ ನಾಮಕರಣ ಶಾಸ್ತ್ರ ನಡೆಯಲಿದ್ದು ತೀರ ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಇದೆ ವೇಳೆ ನಾಮಕರಣವಾದ ನಂತರ ಮಗುವಿಗೆ ರಾಧಿಕಾ ಪಂಡಿತ್ ಸ್ಪೆಷಲ್ ಫೋಟೋ ಶೂಟ್‌ ಕೂಡ ಮಾಡಿ ಸಣ್ಣ ವಿಡಿಯೋವೊಂದನ್ನು ಕೂಡ ತಯಾರಿಸಲಾಗಿದೆ.

ತಮ್ಮ ಮಗಳಿಗೆ ಆಯ್ರ ಎಂದು ಹೆಸರು ಇಟ್ಟಿರುವ ಬಗ್ಗೆ ಸ್ವತಃ ರಾಕಿಂಗ್ ಸ್ಟಾರ್ ಯಶ್ ಅವರೇ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಹೇಳಿಕೊಂಡಿದ್ದು ತಮ್ಮ ಮಗಳಿಗೆ ಆಶಿರ್ವಧಿಸಿ ಎಂದು ಕೇಳಿಕೊಂಡಿದ್ದಾರೆ. ಜೊತೆಗೆ ತಮ್ಮ ಮಗಳ ನಾಮಕರಣದ ವಿಡಿಯೋ ತುಣುಕನ್ನು ಹಂಚಿಕೊಂಡಿದ್ದಾರೆ.,

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top