fbpx
ಸಮಾಚಾರ

ಸೆಲ್ಫೀ ಹುಚ್ಚಿಗೆ ನೋಡನೋಡುತ್ತಿದ್ದಂತೆ ನೀರಿನ ಪಾಲಾದ ಯುವಕ- ಹಾಸನದಲ್ಲಿ ದುರ್ಘಟನೆ.

ಪ್ರವಾಸ ಬಂದಿದ್ದ ಯುವಕನೊಬ್ಬ ಜಲಪಾತದ ಬಳಿ ಸೆಲ್ಫಿ ಕ್ಲಿಕ್ಕಿಸಿಕೊಳ್ಲಲು ಹೋಗಿ ಜಾರಿ ಬಿದ್ದು ನೀರು ಪಾಲಾಗಿರುವ ಘಟನೆ ಹಾಸನ ಜಿಲ್ಲೆ ಯಸಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತನನ್ನು ಬೆಂಗಳೂರಿನ ತಿಗಳರ ಪಾಳ್ಯದ ನಿವಾಸಿ ತನುಷ್(23) ಎಂದು ಗುರುತಿಸಲಾಗಿದೆ.

ಬೆಂಗಳೂರಿನ ತಿಗಳರ ಪಾಳ್ಯದಿಂದ ತನುಷ್, ಪುರುಷೋತ್ತಮ್, ಮನೋಜ್ ಸೇರಿದಂತೆ ನಾಲ್ವರು ಕಳೆದ ಎರಡು ದಿನಗಳಿಂದ ಬೈಕ್‍ನಲ್ಲಿ ಪ್ರವಾಸ ಕೈಗೊಂಡಿದ್ದರು. ಮೊದಲು ಮಡೀಕೇರಿ ಪ್ರವಾಸ ಮುಗಿಸಿ ನಂತರ ಹಾಸನದ ಮೂಕನಮನೆ ಫಾಲ್ಸ್ ಗೆ ಬಂದಿದ್ದರು. ಆದರೆ ಫಾಲ್ಸ್ ನಲ್ಲಿ ಬಂಡೆಯಿಂದ ಹರಿಯುತ್ತಿದ್ದ ನೀರಿನ ಜೋತೆ ಸೆಲ್ಪಿ ತೆಗೆದುಕೊಳ್ಳುತ್ತಿರುವಾಗ ತನುಷ್ ಜಾರಿ ನೀರಿಗೆ ಬಿದ್ದು ಮೃತಪಟ್ಟಿದ್ದಾನೆ.

ಇದೇ ವೇಳೆ ಉಳಿದ ಸ್ನೇಹಿತರು ತನುಷ್ ಜೀವ ಉಳಿಸಲು ಸಾಕಷ್ಟು ಪ್ರಯತ್ನಿಸಿದ್ದಾರೆ. ಆದರೆ ಸಾಧ್ಯವಾಗದೆ ಹೋಗಿದೆ. ಮಾಹಿತಿ ಪಡೆದು ಸ್ಥಳಕ್ಕಾಗಮಿಸಿದ ಪೋಲೀಸರು ಸ್ಥಳೀಯರ ಸಹಕಾರದಿಂದ ಮೃತದೇಹವನ್ನು ನೀರಿನಿಂದ ಮೇಲೆತ್ತಿದ್ದಾರೆ. ಘಟನೆ ಕುರಿತಂತೆ ಯಸಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top