fbpx
ಸಮಾಚಾರ

ಮತ್ತೊಮ್ಮೆ ಮಿಡಿಯಿತು ದಾಸನ ಹೃದಯ- ಎರಡು ಕಾಲು ಕಳೆದುಕೊಂಡ ಪುಟ್ಟ ಅಭಿಮಾನಿಯ ಕೊನೆ ಆಸೆ ಈಡೇರಿಸಿದ ದರ್ಶನ್.

ದರ್ಶನ್ ಅವರಿಗೆ ತಮ್ಮ ಅಭಿಮಾನಿಗಳೆಂದರೆ ವಿಪರೀತ ಪ್ರೀತಿ. ಇದಕ್ಕೆ ಏನೋ ದರ್ಶನ್ ಅವಾಗವಾಗ ಹೇಳುತ್ತಿರುತ್ತಾರೆ “ನನ್ನ ಚರ್ಮ ಸುಲಿದು ಚಪ್ಪಲಿ ಮಾಡಿಕೊಟ್ಟರು ಅಭಿಮಾನಿಗಳ ಋಣವನ್ನು ತೀರಿಸೋಕಾಗಲ್ಲ”. ಈ ಮಾತುಗಳನ್ನು ಕೇಳಿದ್ರೆ ಗೊತ್ತಾಗುತ್ತೆ ದರ್ಶನ್ ಅವರಿಗೆ ಅಭಿಮಾನಿಗಳ ಮೇಲೆ ಎಷ್ಟು ಕೃತಜ್ಞ ಮನೋಭಾವವಿದೆಯೆಂದು.. ಈ ಹಿಂದೆ ಅನೇಕ ಬಾರಿ ಕ್ಯಾನ್ಸರ್ ನಂತಹ ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದ ಅಭಿಮಾನಿಗಳನ್ನು ಭೇಟಿ ಮಾಡಿ ಧೈರ್ಯ ತುಂಬಿ, ತಮ್ಮ ನೆಚ್ಚಿನ ನಟನನ್ನು ಕೊನೆಯದಾಗಿ ಕಣ್ಣು ತುಂಬಿಕೊಳ್ಳಬೇಕು ಎಂಬ ಅವರ ಆಸೆಯನ್ನು ಈಡೇರಿಸಿ ಬರುತ್ತಿದ್ದ ದರ್ಶನ್ ಈಗ ಅಂತದ್ದೇ ಮತ್ತೊಬ್ಬ ಪುಟ್ಟ ಅಭಿಮಾನಿಯನ್ನು ಭೇಟಿ ಮಾಡಿ ಆಕೆಯ ಆಸೆಯನ್ನು ಪೂರೈಸಿದ್ದಾರೆ.

 

 

ವೈದ್ಯರ ನಿರ್ಲಕ್ಷ್ಯದಿಂದಾಗಿ ಕಾಲು ಕಳೆದುಕೊಂಡ ಪುಟ್ಟ ಅಭಿಮಾನಿಯೊಬ್ಬನನ್ನು ನಟ ದರ್ಶನ್ ಭೇಟಿ ಮಾಡಿ ಮಾನವೀಯತೆ ಮೆರೆದಿದ್ದಾರೆ. ಬಳ್ಳಾರಿ ಮೂಲದ ಕೀರ್ತಿ ಎಂಬ ಬಾಲಕನನ್ನು ಭೇಟಿ ಮಾಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆತನ ಉಭಯ ಕುಶಲೋಪರಿ ವಿಚಾರಿಸಿದ್ದಾರೆ. ಈ ವೇಳೆ ಕಾಲಿಲ್ಲದ ಪುಠಾಣಿ ಕೀರ್ತಿರಾಜ್ ನಾನು ಕುದುರೆ ಸವಾರಿ ಮಾಡಬೇಕು ಎಂದು ಆಸೆ ವ್ಯಕ್ತಪಡಿಸಿದ್ದ. ಇದಕ್ಕೆ ದರ್ಶನ್, ಸರಿ ನನ್ನ ಫಾರ್ಮ್‍ನಲ್ಲೇ ಸವಾರಿ ಮಾಡುವಿಯಂತೆ ಎಂದು ಹೇಳಿ ಪ್ರೀತಿ ತೋರಿಸಿದರು. ನಂತರ, ನಿಮ್ಮ ಕೈಗೆ ಏನಾಯ್ತು ಎಂದು ಪ್ರಶ್ನೆ ಕೇಳಿದ್ದಕ್ಕೆ ನಾನು ಕೋತಿ ಕೆಲಸ ಮಾಡೋಕೆ ಹೋಗಿ ಹಿಂಗಾಯ್ತು ಎಂದು ಉತ್ತರಿಸಿದ್ದರು.

ಕಾಯಿಲೆಯ ಬಾಧೆಯ ನಡುವೆಯೂ ಕೀರ್ತಿರಾಜ್ ದರ್ಶನ್ ಅವರ ಜೊತೆ ಸಂತೋಷದಿಂದ ಒಂದಷ್ಟು ಕಾಲ ಕಳೆದಿದ್ದಾಳೆ. ದರ್ಶನ್ ಅವರ ಸಹಾಯದಿಂದಲೇ ಈ ಹುಡುಗಿಯ ಹೆತ್ತವರೂ ನಿರಾಳವಾಗಿದ್ದಾರೆ. ತಾವೆಷ್ಟೇ ಬ್ಯುಸಿಯಾಗಿದ್ದರೂ ಹೀಗೆ ಅಭಿಮಾನಿಗಳ ಸಂಕಟಕ್ಕೆ ಮಿಡಿಯುವ ಮನಸ್ಥಿತಿಯಿಂದಲೇ ದರ್ಶನ್ ಎಲ್ಲರಿಗೂ ಇಷ್ಟವಾಗುತ್ತಾರೆ.. ಕೀರ್ತಿ ರಾಜ್ ಮತ್ತು ದರ್ಶನ್ ಭೇಟಿಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top