fbpx
ಸಮಾಚಾರ

ಕೊಟ್ಟ ಮಾತಿನಂತೆ ಮಂಡ್ಯದಲ್ಲಿ ಮನೆ ಮಾಡಿದ ನಿಖಿಲ್‌- ಹೊಸ ಮನೆಗೆ ಇಟ್ಟಿರುವ ಹೆಸರೇನು ಗೊತ್ತಾ?

ಮಂಡ್ಯ ಲೋಕಸಭಾ ಚುನಾವಣೆಯ ಸಮಯದಲ್ಲಿ ಸೋತರೂ ಕ್ಷೇತ್ರದಿಂದ ದೂರ ಇರುವುದಿಲ್ಲ, ಅಲ್ಲೇ ಮನೆ ಮಾಡಿಕೊಂಡು ಜನರ ಜತೆ ಇರುತ್ತೇನೆ ಎಂದು ಹೇಳಿದ್ದ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿಯವರ ಪುತ್ರ ನಿಖಿಲ್‌ ಕುಮಾರಸ್ವಾಮಿ ಇದೀಗ ತಮ್ಮ ಮಾತಿನಂತೆ ಮಂಡ್ಯದಿಂದ ಒಂದು ಕಿ.ಮೀ. ದೂರದಲ್ಲೇ ನಿಖಿಲ್‌ ತೋಟ ಖರೀದಿಸಿದ್ದಾರೆ.

ಹೊಸ ಮನೆಗೆ ಒಂದು ಹೆಸರನ್ನೂ ಸಹ ಇಡಲು ನಿಖಿಲ್​ ನಿರ್ಧರಿಸಿದ್ದಾರೆ. “ನನ್ನ ಮನೆಗೆ ‘ನಿಮ್ಮ ಮನೆ’ ಎಂದು ಹೆಸರಿಡುತ್ತೇನೆ. ನಾನು ಮನೆಯಲ್ಲಿ ಇಲ್ಲ ಅಂದರೂ ಯಾರೂ ಬೇಕಾದರೂ ಮನೆಗೆ ಬರಬಹುದು. 15 ದಿನದೊಳಗೆ ಎಲ್ಲಾ ಪ್ರಕ್ರಿಯೆ ಪೂರ್ಣ ವಾಗುತ್ತದೆ,” ಎಂದು ಸ್ಪ​ಷ್ಟನೆ ನೀಡಿದ್ದಾರೆ.

ಇದೆ ವೇಳೆ ಮಾತನಾಡಿದ ನಿಖಿಲ್ ಚುನಾವಣೆ ಫಲಿತಾಂಶ ಬಂದ ನಂತರ ನಿಖಿಲ್ ಸೋತಿದ್ರಿಂದ ಧೃತಿಗೆಟ್ಟು ಕುಡಿದು ಗಲಾಟೆ ಮಾಡಿದ್ದಾರೆಂದು ಯಾವುದೋ ಪತ್ರಿಕೆಯಲ್ಲಿ ಸುಳ್ಳು ಸುದ್ದಿ ಬರೆದಿದ್ದರು. ಆದರೆ ಆ ರೀತಿ ಬರೆಯುವ ಮುನ್ನ ಆ‌ ಮಾಹಿತಿ ಸರಿ ಇದೆಯಾ ಇಲ್ಲವಾ ಎನ್ನುವುದನ್ನು ಪರಿಶೀಲನೆ ಮಾಡಿ. ಈ ಸಂಗತಿ ನನಗೆ ಬಹಳ ನೋವುಂಟು ಮಾಡಿದೆ. ನನ್ನ ಧೃತಿಗೆಡಿಸುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top