fbpx
ಸಮಾಚಾರ

ಧೋನಿ ವಿರುದ್ಧ ಕಿಡಿಕಾರಿದ ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್.

ಐಸಿಸಿ 2019 ಏಕದಿನ ವಿಶ್ವಕಪ್‌ನಲ್ಲಿ ಅಫಘಾನಿಸ್ತಾನ ವಿರುದ್ಧ ಟೀಮ್ ಇಂಡಿಯಾ 11 ರನ್ ಅಂತರದ ರೋಚಕ ಗೆಲುವು ದಾಖಲಿಸಿರಬಹುದು. ಆದರೆ ಟೀಮ್ ಇಂಡಿಯಾ ಇನ್ನಿಂಗ್ಸ್ ವೇಳೆ ಮಹೇಂದ್ರ ಸಿಂಗ್ ಧೋನಿ ಹಾಗೂ ಕೇದರಾ ಜಾಧವ್ ಇಂಗಿತದ ಬಗ್ಗೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಫ್ಘಾನ್‍ನ ಸ್ಪಿನ್ನರ್‍ಗಳ ಎದುರು ರನ್ ಗಳಿಸಲು ಎಡವಿದ ಹಿರಿಯ ಆಟಗಾರ ಧೋನಿ (28 ರನ್. 52 ಎಸೆತ) ಹಾಗೂ ಕೇದಾರ್ ಜಾಧವ್(52 ರನ್,68)ರ ನಿಧಾನಗತಿಯ ಆಟದಿಂದಲೇ ಭಾರತ ಬೃಹತ್ ಮೊತ್ತ ಪೇರಿಸುವಲ್ಲಿ ಎಡವಿತು ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

‘ನನಗೆ ಕೊಂಚ ಬೇಸರವಾಗಿದೆ, ಇನ್ನೂ ಉತ್ತಮವಾದ ಪ್ರದರ್ಶನ ನೀಡಬಹುದಾಗಿತ್ತು. ಕೇದಾರ್ ಜಾಧವ್ ಹಾಗೂ ಧೋನಿ ನಡುವಿನ ಜತೆಯಾಟದಿಂದ ನಾನು ಸಂತುಷ್ಟನಾಗಿಲ್ಲ. ಇಬ್ಬರು ಇನ್ನೂ ಉತ್ತಮವಾಗಿ ಆಡಬಹುದಿತ್ತು. 34 ಓವರ್ ಸ್ಪಿನ್ ಬೌಲಿಂಗ್ ಅನ್ನು ನಾವು ಎದುರಿಸಿ, ಗಳಿಸಿದ್ದು ಕೇವಲ 119 ರನ್. 38ನೇ ಓವರ್‌ನಲ್ಲಿ ಕೊಹ್ಲಿ ಔಟಾದ ಬಳಿಕ 45ನೇ ಓವರ್ ತನಕ ಸಾಕಷ್ಟು ರನ್ ಬರಲೇ ಇಲ್ಲ. ಇದುವರೆಗೂ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ಸ್‌ಮನ್‌ಗಳಿಂದ ಉತ್ತಮ ಪ್ರದರ್ಶನ ಬಂದಿಲ್ಲ’ ಎಂದು ಸಚಿನ್ ಹೇಳಿದ್ದಾರೆ.

ಧೋನಿ ಹಾಗೂ ಜಾಧವ್ ಐದನೇ ವಿಕೆಟ್‌ಗೆ 84 ಎಸೆತಗಳಲ್ಲಿ 57 ರನ್‌ಗಳನ್ನು ಗಳಿಸಿದರು. ಜಾಧವ್‌ಗೆ ಟೂರ್ನಿಯಲ್ಲಿ ಬೇಕಾದಷ್ಟು ಅವಕಾಶ ಸಿಗದೇ ಇರದ ಕಾರಣ ಧೋನಿ ಮತ್ತಷ್ಟು ಆಕ್ರಮಣಕಾರಿಯಾಗಿ ಆಡಬೇಕಿತ್ತು. ಜಾಧವ್ ವಿಶ್ವಕಪ್‌ಗೂ ಮುನ್ನ ಎಂಟು ಎಸೆತಗಳನ್ನು ಮಾತ್ರ ಎದುರಿಸಿದ್ದರು. ಹಾಗಾಗಿ ತೀವ್ರ ಒತ್ತಡದಲ್ಲಿದ್ದರು. ಇಲ್ಲಿ ಪರಿಸ್ಥಿತಿಯನ್ನು ಧೋನಿ ನಿಭಾಯಿಸಬೇಕಿತ್ತು. ಆದರೆ ಹಾಗಾಗಲಿಲ್ಲ. ಧೋನಿಗೆ ಬಯಸಿದ ರೀತಿಯಲ್ಲಿ ರನ್ ರೇಟ್ ಏರಿಸಲು ಸಾಧ್ಯವಾಗಲಿಲ್ಲ ಎಂದು ಸಚಿನ್ ಕಿಡಿಕಾರಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top