fbpx
ಸಮಾಚಾರ

ಜಾಹೀರಾತು ಭಿತ್ತಿಪತ್ರವನ್ನು ಬ್ಯಾಂಕ್ ನೋಟಿಸ್ ಎಂದು ತಿಳಿದು ರೈತ ಆತ್ಮಹತ್ಯೆ.

ವಿಜಯಪುರ ರೈತ ಆತ್ಮಹತ್ಯೆ ಪ್ರಕರಣಕ್ಕೆ ತಿರುವು ಸಿಕ್ಕಿದ್ದು ಬ್ಯಾಂಕ್ ಸಾಲ‌ ರಿಯಾಯಿತಿ ಜಾಹೀರಾತನ್ನೇ ನೋಟಿಸ್ ಎಂದು ತಿಳಿದು ರೈತ ಆತ್ಮಹತ್ಯೆ ಮಾಡಿಕೊಂಡಿರುವುದು ಸ್ಪಷ್ಟವಾಗಿದೆ. ಸಾಲ ಪಾವತಿಗೆ ರಿಯಾಯಿತಿ ನೀಡಿ ಸಿಂಡಿಕೇಟ್ ಬ್ಯಾಂಕ್ ಜಾಹೀರಾತು ನೀಡಿತ್ತು. ಇದನ್ನೆ ಬ್ಯಾಂಕ್ ನೋಟೀಸ್ ಎಂದುಕೊಂಡು ಆತಂಕಕ್ಕೆ ಒಳಗಾದ ರೈತ ಆತಮಹತ್ಯೆ ಮಾಡಿಕೊಂಡಿದ್ದಾರೆ.

ಸಂಗಪ್ಪ ಬಸವನಬಾಗೇವಾಡಿಯ ರೋಣಿಹಾಳ ಗ್ರಾಮದ ಸಿಂಡಿಕೇಟ್ ಬ್ಯಾಂಕ್‍ನಲ್ಲಿ ಸಾಲ ಮಾಡಿದ್ದರು. ಬಡ್ಡಿ ಸೇರಿ ಇಲ್ಲಿಯವರೆಗೆ 1.58 ಲಕ್ಷ ಸಾಲ ಆಗಿತ್ತು. ಒನ್ ಟೈಂ ಸೆಟಲ್‍ಮೆಂಟ್(ಓಟಿಎಸ್) ಮಾಡಲು ಬ್ಯಾಂಕ್ ಭಿತ್ತಿಪತ್ರ ಹಂಚಿತ್ತು.

ಸಾಲಮನ್ನಾ ಅಗತ್ತೆ ಎಂದು ಕಾದು ಕಾದು ಸುಸ್ತಾಗಿ ಸಾಲಮನ್ನಾ ಅಗದ ಕಾರಣ ಬ್ಯಾಂಕ್ ಒಟಿಎಸ್ ಭಿತ್ತಿ ಪತ್ರವನ್ನೇ ಬ್ಯಾಂಕ್ ನೋಟಿಸ್ ಎಂದು ಹೆದರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. 5 ಎಕರೆ ಜಮೀನು ಹೊಂದಿರುವ ಸಂಗಪ್ಪ 4 ವರ್ಷ ಬರಗಾಲದಿಂದ ಬೆಳೆ ಇಲ್ಲದೆ ಕಂಗಾಲಾಗಿದ್ದರು. ಕೊಲ್ಹಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top