fbpx
ಸಮಾಚಾರ

ವಿಶ್ವಕಪ್​ನಿಂದ ದ. ಆಫ್ರಿಕಾ ಔಟ್: ಈ ಸ್ಥಿತಿಗೆ IPL ಕಾರಣ ಎಂದ ಕ್ಯಾಪ್ಟನ್ ಡುಪ್ಲೆಸಿ.

ಚೋಕರ್ಸ್ ಹಣೆಪಟ್ಟಿ ಹೊಂದಿರುವ ದಕ್ಷಿಣ ಆಫ್ರಿಕಾ ಕೊನೆಗೂ ಪ್ರಸಕ್ತ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದೆ. ಆಡಿರುವ ಏಳು ಪಂದ್ಯಗಳಲ್ಲಿ ಆರನ್ನು ಸೋತು ಅಂಕಪಟ್ಟಿಯಲ್ಲಿ 9ನೇ ಸ್ಥಾನಕ್ಕೆ ಕುಸಿದಿದೆ. ಈ ಮೂಲಕ ಸೆಮಿ ಫೈನಲ್ ರೇಸ್​ನಿಂದ ಡುಪ್ಲೆಸಿಸ್ ಪಡೆ ಸಂಪೂರ್ಣವಾಗಿ ಹೊರಬಿದ್ದಿದೆ. ಈ ಹೀನಾಯ ಸೋಲಿಗೆ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಕಾರಣ ಎಂದು ದಕ್ಷಿಣ ಆಫ್ರಿಕಾ ತಂಡದ ನಾಯಕ ಫಾಫ್ ಡುಪ್ಲೆಸಿಸ್ ಹೇಳಿದ್ದಾರೆ.

ಪಂದ್ಯ ಮುಗಿದ ಬಳಿಕ ದ. ಆಫ್ರಿಕಾ ತಂಡದ ನಾಯಕ ಫಾಫ್ ಡುಪ್ಲೆಸಿಸ್ ಆಡಿದ ಮಾತು ಅನೇಕರ ಕೆಂಗಣ್ಣಿಗೆ ಗುರಿಯಾಗಿದೆ. ತಂಡದ ಪ್ರಮುಖ ವೇಗಿ ಕಗಿಸೊ ರಬಾಡ ವಿಶ್ವಕಪ್​​ನಲ್ಲಿ ಕಳಪೆ ಪ್ರದರ್ಶನ ತೋರಲು ಐಪಿಎಲ್​ ನೇರ ಕಾರಣ ಎಂದಿದ್ದಾರೆ.

ರಬಾಡ ಐಪಿಎಲ್ ನಲ್ಲಿ ಆಡದಿರುವಂತೆ ತಡೆಯಲು ಟೀಂ ಮ್ಯಾನೇಜ್ ಮೆಂಟ್ ಸಾಕಷ್ಟು ಪ್ರಯತ್ನ ಮಾಡಿತ್ತು. ಆದರೂ ರಬಾಡ ಐಪಿಎಲ್ ನಲ್ಲಿ ಆಡಿ ದೈಹಿಕವಾಗಿ ದಣಿದಿದ್ದರು. ಅಲ್ಲದೆ ಐಪಿಎಲ್ ಟೂರ್ನಿಯ ಅಂತ್ಯದಲ್ಲಿ ರಬಾಡ ಗಾಯಗೊಂಡಿದ್ದು ಇದು ವಿಶ್ವಕಪ್ ಮೇಲೆ ಪರಿಣಾಮ ಬೀರಿತು ಎಂದು ಡುಪ್ಲೆಸಿಸ್ ಹೇಳಿದ್ದಾರೆ. ಇಷ್ಟೇ ಅಲ್ಲದೆ ಐಪಿಎಲ್​​ಗೂ ಮುನ್ನ ದಕ್ಷಿಣ ಆಫ್ರಿಕಾ ತಂಡ ಮೂರು ಮಾದರಿಯ ಕ್ರಿಕೆಟ್​ನಲ್ಲಿ ಸತತವಾಗಿ ಆಡಿಕೊಂಡಿತ್ತು. ಇದರ ಜೊತೆಗೆ ಐಪಿಎಲ್​ನಲ್ಲೂ ಪಾಲ್ಗೊಂಡಿದ್ದು ವಿಶ್ವಕಪ್​​ಗೆ ಮತ್ತಷ್ಟು ಹೊಡೆತ ಬಿತ್ತು ಎಂದು ಆಫ್ರಿಕಾ ನಾಯಕ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top