fbpx
ಸಮಾಚಾರ

ಭುವಿ ಸ್ಥಾನಕ್ಕೆ ಆರ್​ಸಿಬಿ ಆಟಗಾರ​; ವಿಶ್ವಕಪ್​ನಲ್ಲಿ ಬೌಲಿಂಗ್​ ಮಾಡುವ ಅವಕಾಶ ಗಿಟ್ಟಿಸಿಕೊಂಡ ನವದೀಪ್ ಸೈನಿ.

ಕಳೆದ ಪಾಕಿಸ್ತಾನ ವಿರುದ್ಧದ ಪಂದ್ಯದ ವೇಳೆ ಸ್ನಾಯು ಸೆಳೆತಕ್ಕೆ ಒಳಗಾದ ಟೀಂ ಇಂಡಿಯಾದ ಪ್ರಮುಖ ಬೌಲರ್ ಭುವನೇಶ್ವರ್ ಕುಮಾರ್ ಸದ್ಯ ವಿಶ್ರಾಂತಿಯಲ್ಲಿದ್ದಾರೆ. ಮುಂದಿನ ಪಂದ್ಯಕ್ಕೂ ಭುವಿ ಫಿಟ್ ಆಗುವುದು ಅನುಮಾನ ಎನ್ನಲಾಗಿತ್ತಿದ್ದು ಇವರ ಬದಲಾಗಿ ಮತ್ತೊಬ್ಬ ಸ್ಟಾರ್ ಬೌಲರ್ ಆಯ್ಕೆಯಾಗಿದ್ದಾರೆ.

 

 

ಭವಿ ಇಂಜುರಿಯಲ್ಲಿರುವ ಕಾರಣ ಭಾರತ ಎ ತಂಡದ ಹಾಗೂ ಐಪಿಎಲ್​ನಲ್ಲಿ ಆರ್​ಸಿಬಿ ತಂಡದ ಸ್ಟಾರ್ ಬೌಲರ್ ಆಗಿರುವ ನವ್​ದೀಪ್ ಸೈನಿ ಟೀಂ ಇಂಡಿಯಾದ ನೆಟ್ ಬೌಲರ್ ಆಗಿ ಆಯ್ಕೆಯಾಗಿದ್ದಾರೆ. ಪ್ರಸ್ತುತ ಮಂಡಿರಜ್ಜು ನೋವಿನಲ್ಲಿ ಬಳಲುತ್ತಿರುವ ಭುವನೇಶ್ವರ್‌ ಕುಮಾರ್‌ ಗುಣಮುಖರಾಗದಿದ್ದರೆ ಸೈನಿ 11ರ ಬಳಗದಲ್ಲಿ ಆಡುವ ಸಾಧ್ಯತೆಯೂ ಇದೆ. ಆದರೆ, ಅದನ್ನು ಬಿಸಿಸಿಐ ಮೂಲಗಳು ಖಚಿತಪಡಿಸಿಲ್ಲ.

ಜೂನ್​​ 24 ರಂದು ವೆಸ್ಟ್​​ ಇಂಡೀಸ್​​​​ ವಿರುದ್ಧದ ಪಂದ್ಯಕ್ಕೆ ಭಾರತ ಬ್ಯಾಟ್ಸ್​ಮನ್​ಗಳಿಗೆ ವೇಗಿ ಸೈನಿ ನೆಟ್ಸ್​​ ಬೌಲಿಂಗ್​​ ಮಾಡಲಿದ್ದಾರೆ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ. ಇದಕ್ಕೂ ಮೊದಲಿನ ಪಂದ್ಯದಲ್ಲಿ ಖಲೀಲ್​​ ಅಹ್ಮದ್​​​​​​ ನೆಟ್ಸ್​​ ಬೌಲಿಂಗ್​ ಮಾಡುತ್ತಿದ್ದರು. ಆದರೆ ಖಲೀಲ್​​​​​​ ವೆಸ್ಟ್​​ ಇಂಡೀಸ್​​​ ‘ಎ’ ವಿರುದ್ಧದ ಸರಣಿಗೆ ಭಾರತ ‘ಎ’ ತಂಡಕ್ಕೆ ಆಯ್ಕೆಯಾಗಿದ್ದಾರೆ. ಭಾರತ ತಂಡಕ್ಕೆ ನೆಟ್ಸ್​​ ಬೌಲರ್​ಗಳ ಕೊರತೆ ಇರುವುದರಿಂದ ಸೈನಿ ಅವರನ್ನು ಲಂಡನ್​ಗೆ ಕರೆಸಿಕೊಳ್ಳಲಾಗಿದೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top