fbpx
ಸಮಾಚಾರ

ದಿಢೀರ್ ಎದೆನೋವು- ದಿಗ್ಗಜ ಕ್ರಿಕೆಟಿಗ ಬ್ರಯಾನ್ ಲಾರಾ ಮುಂಬೈ ಆಸ್ಪತ್ರೆಗೆ ದಾಖಲು.

ವೆಸ್ಟ್‌ಇಂಡೀಸ್‌ನ ಮಾಜಿ ದಿಗ್ಗಜ ಬ್ರ್ಯಾನ್ ಲಾರಾ ಮಂಗಳವಾರದಂದು ಎದೆ ನೋವಿಗೊಳಗಾಗಿದ್ದು, ಮುಂಬಯಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪರೆಲ್‌ನಲ್ಲಿರುವ ಗ್ಲೋಬಲ್ ಆಸ್ಪತ್ರೆಗೆ ದಾಖಲಾಸಲಾಗಿದೆ.

 

 

ಪ್ರಸ್ತುತ ವಿಶ್ವಕಪ್ ಟೂರ್ನಿಯ ಕಾಮೆಂಟೇಟರ್ ಆಗಿರುವ ಬ್ರಿಯಾನ್ ಲಾರಾ ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದು ಈ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಧ್ಯಾಹ್ನ 12.30ರ ಸುಮಾರಿಗೆ ಈ ಘಟನೆ ನಡೆದಿದೆ. ಸದ್ಯ ಲಾರಾಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಅವರ ಆರೋಗ್ಯದ ಕುರಿತು ವೈದ್ಯರು ಯಾವುದೇ ಮಾಹಿತಿ ನೀಡಿಲ್ಲ.

ವೆಸ್ಟ್​ ಇಂಡೀಸ್​ನ ಟ್ರಿನಿಡಾಡ್​ನ ನಿವಾಸಿಯಾದ 50 ವರ್ಷದ ಬ್ರಿಯಾನ್​ ಲಾರಾ ಅವರು ಕಳೆದ ಕೆಲವು ಸಮಯಗಳಿಂದ ಮಂಬಯಿನಲ್ಲೇ ಉಳಿದುಕೊಂಡಿದ್ದರು. ಸ್ಟಾರ್ ಸ್ಪೋರ್ಟ್ಸ್ ಸ್ಟುಡಿಯೋದಲ್ಲಿ ಐಸಿಸಿ ವಿಶ್ವಕಪ್‌ನಲ್ಲಿ ತಜ್ಞರ ವಿಶ್ಲೇಷಣೆಯಲ್ಲಿ ಭಾಗವಹಿಸುತ್ತಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top