fbpx
ಸಮಾಚಾರ

ಬೆಳ್ಳುಳ್ಳಿ ತಲೆದಿಂಬಿನಡಿ ಇಟ್ಟುಕೊಂಡು ಮಲಗಿದ್ರೆ ಅದೃಷ್ಟ ಅಂತ ಹೇಳ್ತಾರೆ . ಅದರ ವೈಜ್ಞಾನಿಕ ಕಾರಣ ನೀವೇ ತಿಳ್ಕೊಳ್ಳಿ

ಬೆಳ್ಳುಳ್ಳಿ ತಲೆದಿಂಬಿನಡಿ ಇಟ್ಟು ಮಲಗಿದ್ರೆ ಅದೃಷ್ಟ ಅಂತೇ ಹೌದಾ ?  ವೈಜ್ಞಾನಿಕ

ಕಾರಣಗಳು ಇಲ್ಲಿವೆ !

 

ಬೆಳ್ಳುಳ್ಳಿ ಆಯುರ್ವೇದದ ಕಾಲದಿಂದಲೂ ಇಲ್ಲಿಯವರೆಗೂ ಸಾವಿರಾರು ರೋಗಗಳನ್ನು ವಾಸಿ  ಮಾಡುವ ಆಹಾರ ಪದಾರ್ಥ

ಬೆಳ್ಳುಳ್ಳಿಯ ಸಾವಿರಾರು ಆರೋಗ್ಯಕರ ಗುಣಗಳಲ್ಲಿ ಕೆಲವು ಇಲ್ಲಿದೆ ನೋಡಿ

 

ಬೆಳಗ್ಗೆ ತಿಂಡಿಗೆ ಮುಂಚೆ ಬೆಳ್ಳುಳ್ಳಿ ತಿಂದರೆ ಬ್ಯಾಕ್ಟೀರಿಯಾ ನಿರೋಧಕವಾಗಿ ಕೆಲಸ ಮಾಡುತ್ತದೆ , ಹೊಟ್ಟೆಯನ್ನು ಬ್ಯಾಕ್ಟೀರಿಯಾಗಳಿಂದ ಮುಕ್ತಗೊಳಿಸುತ್ತದೆ.
ಬೆಳ್ಳುಳ್ಳಿಯು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.

 

 

ಬೆಳಗ್ಗೆ ಬೆಳ್ಳುಳ್ಳಿ ಸೇವಿಸಿದರೆ ಹಸಿವು ಹೆಚ್ಚಾಗುತ್ತದೆ ,ಬೆಳ್ಳುಳ್ಳಿಯಲ್ಲಿ ಉತ್ತಮ ಜೀರ್ಣಕಾರಿ, ಕರುಳು ಸಕ್ರಿಯವಾಗಿ ಕೆಲಸ ಮಾಡುತ್ತದೆ.

ಬೆಳ್ಳುಳ್ಳಿಯಿಂದ ದೇಹದ ಒತ್ತಡವನ್ನು ಕಡಿಮೆ ಮಾಡುತ್ತದೆ.

ಅಜೀರ್ಣ , ಕಮರು ತೇಗು , ಹೊಟ್ಟೆ ಉಬ್ಬರ ತೊಂದರೆಯಾದಾಗ ಬೆಳ್ಳುಳ್ಳಿಯನ್ನು ಸುಟ್ಟು ತಿನ್ನಬೇಕು.

ಹುಳು , ಹುಪ್ಪಟೆಗಳು ಚೇಳು ಕಚ್ಚಿದರೆ , ಚರ್ಮದ ಸೋಂಕು ಮುಂತಾದ ಕಾಯಿಲೆಗೆ ರಾಮಬಾಣ .

ಬೆಳ್ಳುಳ್ಳಿ ಬೇಯಿಸಿದ ನೀರನ್ನು ದಿನಕ್ಕೆ 3 ಬಾರಿ ಕುಡಿದರೆ ಮುಟ್ಟಿನ ಹೊಟ್ಟೆನೋವು ನಿವಾರಣೆಯಾಗುತ್ತದೆ.

 

 

ಉಬ್ಬಸ ಕಾಯಿಲೆಯಿರುವವರು 2-3 ಬೇಯಿಸಿದ ಬೆಳ್ಳುಳ್ಳಿ ತಿಂದರೆ ರೋಗ ನಿವಾರಣೆಯಾಗುತ್ತದೆ.

ರೋಗಿಗಳು ಹಾಲಿನಲ್ಲಿ ಬೇಯಿಸಿದ ಮೂರು ಬೆಳ್ಳುಳ್ಳಿ ತೊಳೆಗಳನ್ನು ಪ್ರತಿದಿನ ತಿನ್ನುವುದರಿಂದ ರೋಗ ನಿಯಂತ್ರಣಕ್ಕೆ ಬರುತ್ತದೆ.

ಶ್ವಾಸಕೋಶ ಕಾಯಿಲೆ,. ಅಸ್ತಮಾ ಮತ್ತು ನ್ಯುಮೋನಿಯ ರೋಗಿಗಳಿಗೂ ಬೆಳ್ಳುಳ್ಳಿ ಔಷಧಿಯಾಗಿ ಕೆಲಸ ಮಾಡುತ್ತದೆ.

 

ಕೊಬ್ಬರಿ ಎಣ್ಣೆಯಲ್ಲಿ ಬೆಳ್ಳುಳ್ಳಿ ಕರಿದು ಆ ಎಣ್ಣೆಯನ್ನು ಕಿವಿಗೆ ಬಿಡಬೇಕು ಇದರಿಂದ ಕಿವಿ ನೋವಾಗುತ್ತದೆ.

ಬೆಳ್ಳುಳ್ಳಿ ತಲೆದಿಂಬಿನಡಿ ಇಟ್ಟು ಮಲಗಿದ್ರೆ ಅದೃಷ್ಟ ಅಂತೇ ಹೌದಾ ?

ಹೌದು ವೈಜ್ಞಾನಿಕ ಕಾರಣಗಳಿಂದ ನೋಡಿದ್ರೆ ಹೌದು , ಬೆಳ್ಳುಳ್ಳಿಯನ್ನು ತಲೆದಿಂಬಿನಡಿ ಇಟ್ಟು ಮಲಗಿದ್ರೆ ಅದೃಷ್ಟ ಏಕೆಂದರೆ ಸುಖ ನಿದ್ರೆ ನಮ್ಮನ್ನು ಆವರಿಸುತ್ತದೆ ಬೆಳ್ಳುಳ್ಳಿಯಲ್ಲಿರುವ ಸಲ್ಫರ್ ಸಂಯುಕ್ತಗಳು ಮನಸ್ಸನ್ನು ಸಮಾಧಾನಗೊಳಿಸಿ ಸುಖ ನಿದ್ದೆಗೆ ಜಾರಿಸುತ್ತದೆ.ಅಲ್ಲದೆ ಬ್ಯಾಕ್ಟೀರಿಯಾನಿವಾರಕವಾಗಿ ಕೆಲಸ ಮಾಡುತ್ತದೆ , ಜ್ವರ ,ಕೆಮ್ಮು ,ನೆಗಡಿಯಂತಹ ಕಾಯಿಲೆಗಳು ಹತ್ತಿರಾನೂ ಸುಳಿಯಲ್ಲ.

 

ಕೆಲವರು ಬೆಳ್ಳುಳ್ಳಿಎಸಳುಗಳನ್ನು ಜಜ್ಜಿ ತಮ್ಮ ಬಟ್ಟೆಗೆ ಹಚ್ಚಿಕೊಳ್ಳುತ್ತಾರೆ ಅಲ್ಲದೆ ತಮ್ಮ ಜೇಬಿನಲ್ಲಿಟ್ಟು ಕೊಳ್ಳುತ್ತಾರೆ ಹೀಗೆ ಮಾಡಿದರೆ ಕೆಟ್ಟ ಶಕ್ತಿಗಳು ನಮ್ಮನ್ನು ಬಾಧಿಸದು ಎಂದು ನಂಬುತ್ತಾರೆ ಏಕೆಂದರೆ  ಕೆಮ್ಮು ,ನೆಗಡಿ ಹಾಗು ಜ್ವರ ನಮ್ಮನ್ನು ಬಾಧಿಸದು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top